ಇಟ್ಟಿಗಿಯಲ್ಲಿ ಕೃಷಿ ಅಧಿಕಾರಗಳಿಂದ ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಿದರು…!!!

Listen to this article

ಇಟ್ಟಿಗಿಯಲ್ಲಿ ಕೃಷಿ ಅಧಿಕಾರಗಳಿಂದ ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಿದರು.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ 25/07/2022ರಂದು ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಮತಿ ಮಂಜುಳಾ ಬಸವರೆಡ್ಡಿ ಮಾತಡಿ,ಅರ್ಧ ಲೀಟರ್‌ ನಷ್ಟು ನ್ಯಾನೋ ಯೂರಿಯಾ ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮವಾಗುತ್ತದೆ ಮತ್ತು ಒಂದು ಎಕರೆಗೆ ಅರ್ಧ ಲೀಟರ್ ನ್ಯಾನೋ ಯೂರಿಯಾ ಸಾಕಾಗುತ್ತದೆ. ಇದನ್ನು ಹತ್ತು ಕ್ಯಾನ್ ಗೆ ಬಳಕೆ ಮಾಡಬಹುದು. ಬಿತ್ತನೆಯಾದ 30 ದಿನಗಳ ನಂತರ ನ್ಯಾನೋ ಯೂರಿಯಾವನ್ನು ಬೆಳೆಗಳಿಗೆ ಸಿಂಪಡಿಸಬೇಕು. ಇದರಿಂದ ಬೆಳೆಗಳ ಪೋಷಕಾಂಶಗಳ ಹೆಚ್ಚಳವಾಗುತ್ತದೆ. ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕನ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ. ಇದರ ಬಳಕೆಯಿಂದ ರೈತರಿಗೆ ಖರ್ಚು ಕಡಿಮೆ ಮತ್ತು ಆದಾಯ ಜಾಸ್ತಿ ಆಗುತ್ತದೆ ಹಾಗೂ ಯೂರಿಯಾ ಗೊಬ್ಬರದ ಅಭಾವಕ್ಕೆ ಪರಿಹಾರ ಮತ್ತು ಪರ್ಯಾಯವಾಗಿ ಇದನ್ನು ತಾಲ್ಲೂಕಿನ ಎಲ್ಲಾ ರಸ ಗೊಬ್ಬರದ ಅಂಗಡಿಗಳಲ್ಲಿ ಲಭ್ಯವಿದೆ ಎಂದು ತಿಳಿಸುದರು. ಇದೇ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಮಹಮ್ಮದ್ ಅಶ್ರಪ್ ಮಾತಾಡಿ ಪಟ್ಟಣದ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ನ್ಯಾನೋ ಯೂರಿಯಾ ಬಾಟಲ್ ಮಾರಾಟ ಮಾಡಲಾಗುತ್ತಿದೆ ರೈತರು ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಅಗತ್ಯ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರ ಸಿಂಪರಣೆ ಮಾಡಬೇಕು.

ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಗಳ ಮೆಲೆ ನ್ಯಾನೋ ಯೂರಿಯಾ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದರು. ಇದರ ಜೊತೆಗೆ ರೈತರು ತಾವು ಬೆಳೆದ ಬೆಳೆಗೆ ‘ಬೆಳೆ ವಿಮೆ’ ಕಟ್ಟುವುದು ಅತೀ ಮುಖ್ಯ ಮತ್ತು ರೈತರು ತಮ್ಮ ಬೆಳೆಯನ್ನು ಬೆಳೆ ಸಮೀಕ್ಷೆಯನ್ನು “ನನ್ನ ಬೆಳೆ ನನ್ನ ಹಕ್ಕು”ಎಂಬ ಆ್ಯಪ್ನಲ್ಲಿ ಮಾಡಬೇಕು ಎಂದು ತಿಳಿಸಿಕೊಟ್ಟರು.ಇದೆ ವೇಳೆ ಇಟ್ಟಿಗಿ ಗ್ರಾಮದ ಬಿ.ಸಿದ್ದಪ್ಪನವರು ಕೃಷಿ ಅಧಿಕಾರಿಗಳ ಸೂಚನೆ ಮೇರೆಗೆ ಮುಸುಕಿನ ಜೋಳದ ಬೆಳೆಗೆ ‘ನ್ಯಾನೋ ಯೂರಿಯಾ’ವನ್ನು ಸಿಂಪಡಿಸಿದರು. ಇ ಒಂದು ಕಾರ್ಯಕ್ರಮದಲ್ಲಿ ಇಟ್ಟಿಗಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶ್ರೀಯುತ ಕೊಟ್ರೇಶ್ ಗೋರಂಟಿ, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸೌಜನ್ಯ ಹಣ್ಣಿ ಹಾಗೂ ನಂದನ್ ಟ್ರೇಡರ್ಸ( ರಸಗೊಬ್ಬರ ಅಂಗಡಿ) ಮಾಲೀಕರಾದ ಚೆನ್ನಪ್ಪ ಹಾಗೂ ಊರಿನ ರೈತರು ಭಾಗಿಯಾಗಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend