ಪ್ರತಿ ದಿನ ವೆಚ್ಚಗಳ ಬಗ್ಗೆ ನಿಗಾವಹಿಸಿ ಚೆಕ್‌ಪೋಸ್ಟ ಪತಾಸಣೆ ತೀವ್ರಗೊಳಿಸಿ
ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಿದ್ದರಾಗಿ : ಇಪ್ತಖರ ಚೌಧರಿ
ಬಾಗಲಕೋಟೆ: ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳು ಎಲ್ಲ ರೀತಿಯಿಂದ ಸನ್ನದ್ದರಾಗಬೇಕೆಂದು ಚುನಾವಣಾ ವೆಚ್ಚ ವೀಕ್ಷಕರಾದ ಇಪ್ತಖರ ಅಹಮ್ಮದ ಚೌದರಿ ಕರೆ ನೀಡಿದರು.
ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಚುನಾವಣಾ ಸಿದ್ದತೆ ಹಾಗೂ ಇಲ್ಲಿಯವರೆಗೆ ಕೈಗೊಂಡ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೀತಿ ಸಂಹಿತೆ, ಕಾನೂನು ಸುವ್ಯವಸ್ಥೆ, ನಿಯಂತ್ರಣ ಕೊಠಡಿ ನಿರ್ವಹಣೆ, ಸಿಸಿವಿಟಿ ಮಾನಿಟರಿಂಗ್ ವ್ಯವಸ್ಥೆ, ಅಬಕಾರಿ ಇಲಾಖೆಯಿಂದ ಮದ್ಯ ವಶಪಡಿಸಿಕೊಂಡ ಮಾಹಿತಿ, ಬ್ಯಾಂಕ್‌ಗಳಲ್ಲಿ ಹಣ ವ್ಯವಹಾರ, ಜಾಗೃತದಳ ತಂಡಗಳ ನಿರ್ವಹಣೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ಲಾಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲನ್ಸ್ ತಂಡ ಹಾಗೂ ವಿಡಿಯೋ ವಿವಿಂಗ್ ತಂಡ ಸೇರಿದಂತೆ ಇತರೆ ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಜವಾಬ್ದಾರಿಯುತವಾಗಿ ಚುನಾವಣಾ ಆಯೋಗದ ನಿರ್ದೇಶನಾನುಸಾರ ಕಾರ್ಯನಿರ್ವಹಿಸಲು ತಿಳಿಸಿದ ಅವರು ಚೆಕ್‌ಪೋಸ್ಟಗಳಲ್ಲಿ ಪರಿಶೀಲನೆ, ತಪಾಸಣೆ ಕಾರ್ಯಗಳನ್ನು ತೀವ್ರಗೊಳಿಸಬೇಕು. ಹೊರ ಬರುವ ಹಾಗೂ ಒಳ ಬರುವ ವಾಹನಗಳ ಬಗೆ ನಿಗಾ ಇಡಲು ತಿಳಿಸಿದರು.
ಚುನಾವಣಾ ವೆಚ್ಚದ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ಕೆಲಸ ನಿರ್ವಹಿಸಬೇಕು. ಬ್ಯಾಂಕಿನಲ್ಲಿ ನಡೆಯುವ ದೈನಂದಿನ ವಹಿವಾಟಿನ ಮೇಲೆ, ಸಂಶಯಾತ್ಮಕ ಹಣ ವರ್ಗಾವಣೆ ಮೇಲೆ ಪ್ರತಿನಿತ್ಯ ಪರಿಶೀಲನೆಬೇಕು. ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆ ಮಾಡುವದರ ಜೊತೆಗೆ ಅಧಿಕಾರಿಗಳು ಪಕ್ಷಾತೀತವಾಗಿ ಹಾಗೂ ಯಾರಿಗೂ ಸಂಶಯ ಬಾರದಂತೆ ಪ್ರಾಮಾಣಿಕವಾಗಿ ಚುನಾವಣಾ ಕಾರ್ಯ ಮಾಡತಕ್ಕದ್ದು. ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳನ್ನು ಹಾಗೂ ತಮ್ಮನ್ನು ನೇರವಾಗಿ ಸಂಪರ್ಕಿಸಲು ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಮತಗಟ್ಟೆಗಳನ್ನು ಸುವ್ಯವಸ್ಥಿತಗಾಗಿ ಇಡಲು ಕ್ರಮಕೈಗೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ತರಬೇತಿಗಳನ್ನು ನೀಡಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ೨೬ ಚೆಕ್‌ಪೋಸ್ಟ, ೭೮ ಸ್ಟ್ಯಾಟಿಕ್ ಸರ್ವೆಲೆನ್ಸ ತಂಡ, ೬೬ ಪ್ಲಾಯಿಂಗ್ ಸ್ಕ್ವಾಡ್, ೨೫ ವಿಡಿಯೋ ವಿವೀಂಗ್ ಟೀಲ್, ೮ ವೆಚ್ಚಗಳ ತಂಡಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸದoತೆ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವನಾ ನೀತಿ ಸಂಹಿತೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಕಾನೂನು ಸುವ್ಯವಸ್ಥೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರೆ, ಜಿ.ಪಂ ಸಿಇಓ ಆಗಿರುವ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಶಶಿಧರ ಕುರೇರ ಜಿಲ್ಲೆಯಾದ್ಯಂತ ಮತದಾನ ಜಾಗೃತಿಗೆ ಕೈಗೊಂಡ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ಚುನಾವಣೆಗೆ ನಿಯೋಜನೆಗೊಂಡ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು….
ವರದಿ. ಸಚಿನ್ ಆಲದಿ, ಬಾಗಲಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030