ಅಬಕಾರಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ, ವಿಚಕ್ಷಣಾ ದಳ ಚುರುಕು
ದಾವಣಗೆರೆ -2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿನ ಅಬಕಾರಿ ಇಲಾಖೆಯ ವಲಯ, ಉಪ ವಿಭಾಗ, ಜಿಲ್ಲಾ ವಿಚಕ್ಷಣ ದಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾಳಿ ಕಾರ್ಯಗಳನ್ನು ನಡೆಸಲಾಯಿತು.
ಲೋಕಸಭಾ ಚುನಾವಣೆ-2024 ನೀತಿ ಸಂಹಿತೆ ಜಾರಿಯಾದಾಗಿನಿಂದ ದಾಖಲಿಸಲಾದ ಮೊಕದ್ದಮೆಗಳು ಮತ್ತು ವಶಪಡಿಸಿಕೊಳ್ಳಲಾದ ಅಬಕಾರಿ ಪದಾರ್ಥಗಳ ವಿವರ: ಘೋರ-23, ಬಿಎಲ್‍ಸಿ-33, 15-ಎ-89 ಒಟ್ಟು 123 ಪ್ರಕರಣ ದಾಖಲಾಗಿರುತ್ತದೆ. 374.655 ಲೀಟರ್ ಮದ್ಯ, 12.530 ಲೀಟರ್ ಬಿಯರ್, 15 ದ್ವಿಚಕ್ರವಾಹನವನ್ನು ಜಪ್ತು ಮಾಡಲಾಗಿದೆ. ದಸ್ತಗಿರಿ ಮಾಡಿದ ಆರೋಪಿಗಳ ಸಂಖ್ಯೆ-123 ಜಪ್ತಿ ಮಾಡಲಾದ ಮದ್ಯ ಮತ್ತು ವಾಹನದ ಅಂದಾಜು ಮೌಲ್ಯ ರೂ.10,79,523 ಗಳಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜಾ ತಿಳಿಸಿದ್ದಾರೆ….
ವರದಿ. ಪ್ರಕಾಶ್, ಆರ್, ದಾವಣಗೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030