ಹೊಳಲ್ಕೆರೆ ತಾಲೂಕಿನ ತಿರುಮಲ್ಲಾಪುರದಲ್ಲಿ ನೀರಿನ ಹಾಹಾಕಾರ. ಗ್ರಾ.ಪಂ.ಕಚೇರಿಗೆ ಮುತ್ತಿಗೆ, ಕಚೇರಿಗೆ ಬೀಗಾ, ಚುನಾವಣೆ ಬಹಿಷ್ಕ್ಕರಿಸುವ ಎಚ್ಚರಿಕೆ.
ಹೊಳಲ್ಕೆರೆ : ತಾಲೂಕಿನ ತಿರುಮಲ್ಲಾಪುರದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ವಿಶ್ವನಾಥನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತಿರುಮಲ್ಲಾಪುರ ಗ್ರಾಮಸ್ಥರು ಗ್ರಾ.ಪಂ.ಕಚೇರಿಗೆ ಬೀಗ ಜಡಿದು, ಖಾಲಿ ಕೊಡಗಳ ಪ್ರದರ್ಶಿಸುವ ಮೂಲಕ ಮಂಗಳವಾರ ಎಳೆ ಕಂದಮ್ಮಗಳೊಂದಿಗೆ ಆಗಮಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ವಿಶ್ವನಾಥನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೊಮ್ಮನಕಟ್ಟೆ, ಅವಿನಹಟ್ಟಿ, ವಿಶ್ವನಾಥನಹಳ್ಳಿ, ತಿರುಮಲ್ಲಾಪುರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಅಹಹಕಾರ ಮುಗಿದು ಮುಟ್ಟಿದೆ. ಗ್ರಾಮಸ್ಥರು ಹಲವಾರು ಬಾರಿ ಪ್ರತಿಭಟಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡುವಂತೆ ಒತ್ತಾಯಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಅಭಿವೃದ್ಧಿ ಅಧಿಕಾರಿಗೆ ಹತ್ತಾರು ಬಾರಿ ಮನವಿ ಮಾಡಿದೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೆ ನಿರ್ಲಕ್ಷಿಸಿದ್ದಾರೆ. ಪಿಡಿಒ ಗ್ರಾಮ ಪಂಚಾಯ್ತಿ ಕಚೇರಿಗೆ ಬರುತ್ತಿಲ್ಲ. ನೀರನ್ನು ಕಲ್ಪಿಸಲು ಅಶಕ್ತ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮರುಳಿಯನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಮಹಿಳೆಯರು ಆಗ್ರಹಿಸಿದರು. ಜತೆಗೆ ಅಸಮರ್ಪಕ ಆಡಳಿತ ನಡೆಸುವ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ರಾಜೀನಾಮೆ ಕೊಡಬೇಕು ಎಂದು ಪ್ರತಿಭಟನಾ ಮಹಿಳೆಯರು ಆಗ್ರಹಿಸಿದರು.
ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಅಹಹಕಾರ ಇದೆ. ಹಸಿಕೂಸು ಸಣ್ಣ ಮಕ್ಕಳ ಆರೈಕೆಗೆ ನೀರಿಲ್ಲ. ಜನ ಜಾನುವಾರುಗಳ ನಿರ್ವಹಣೆಗೆ ಸಮಸ್ಯೆ ಉಂಟಾಗಿದೆ. ನಿತ್ಯ ಐದಾರು ಕಿಲೋಮೀಟರ್ ಸಂಚರಿಸಿ ಹೊಲಗದ್ದೆಗಳಲ್ಲಿ ನೀರನ್ನು ಹೊತ್ತು ತರಬೇಕು. ಆದರೂ ಸಹ ಗ್ರಾ.ಪಂ. ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ನಿರ್ಲಕ್ಷ ಮಾಡಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ : ತಿರುಮಲ್ಲಾಪುರದ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಬೊರ್ ವೆಲ್ ನಲ್ಲಿ ನೀರಿದೆ. ಸದಸ್ಯರು, ನೀರು ಕಂಟಿಗಳು ಕುಡಿಯುವ ನೀರನ್ನು ಸಮರ್ಪಕವಾಗಿ ಜನರಿಗೆ ಪೂರೈಕೆ ಮಾಡಲು ವಿಫಲವಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಯಾರೊಬ್ಬ ಅಧಿಕಾರಿಗಳು ಜನರ ಕೆಲಸ ಮಾಡದೆ ನಿರ್ಲಕ್ಷ ಮಾಡಿದ್ದಾರೆ. ಗ್ರಾಮಗಳಲ್ಲಿ ಬೋರ್ ವೆಲ್ ಇದ್ದರೂ ಅವುಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬೋರ್ ವೆಲ್ ರಿಪೇರಿ, ಪೈಪ್ ಲೈನ್ ರಿಪೇರಿ, ವಿದ್ಯುತ್ ರಿಪೇರಿ ಎಂದು ಗ್ರಾ. ಪಂ. ಲಕ್ಷಾಂತರ ಅನುದಾನ ಖರ್ಚಿನ ಹೆಸರಲ್ಲಿ ಹಣ ಲೂಟಿ ನಡೆಯುತ್ತದೆ. ಕುಡಿಯುವ ನೀರು ಮಾತ್ರ ಜನರಿಗೆ ಸಿಕ್ಕಿಲ್ಲ. ನೀರಿನ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು, ಅನುದಾನವನ್ನ ಲೂಟಿ ಮಾಡುತ್ತಿದ್ದು ತಕ್ಷಣವೇ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿ ಮತ್ತು ಕುಡಿಯುವ ನೀರಿನ ಕಾಮಗಾರಿ ತನಿಖೆ ಮಾಡಬೇಕು. ನಿರ್ಲಕ್ಷ ಮಾಡಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತದೆ ಎಂದು ಗ್ರಾಮಸ್ಥ ಚಂದ್ರಣ್ಣ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕ ಎಂ.ಚಂದ್ರಪ್ಪ ನಿರ್ಲಷ್ಯ : ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರಿಗೆ ಹಲವಾರು ಭಾರಿ ಪೂನ್ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದೆ. ಅದರೇ ಇದುವರೆಗೂ ಶಾಸಕ ಎಂ.ಚಂದ್ರಪ್ಪ ಇತ್ತು ತಿರುಗಿನೋಡಿಲ್ಲ. ಚುನಾವಣೆಯಲ್ಲಿ ಏನ್ನೇಲ್ಲ ಭರವಸೆ ನೀಡಿದ್ದ ಶಾಸಕರಿಗೆ ಕನಿಷ್ಟ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಇನ್ನು ಕ್ಷೇತ್ರದ ಗತಿ ಏನೇಂದು ಮುಖಂಡ ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನೀರಿ ಕೇಳಿದರೇ ಉಡಾಫೆೆ ಉತ್ತರ : ಕುಡಿಯುವ ನೀರು ಕೇಳಿದ ಜನರ ಮೇಲೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ದೌರ್ಜನ್ಯ ಮಾಡಿ ಉಡಾಫೆ ಉತ್ತರ ನೀಡುತ್ತಾರೆ. ಯರೀಗಾದರೂ ದೂರು ನೀಡಿ ನಮ್ಮನ್ನು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಜನರಿಗೆ ಭೆದರಿಕೆ ಹಾಕುತ್ತಾರೆ. ಅವರನ್ನು ಅಮಾನತ್ತುಗೊಳಿಸುವಂತೆ ಗ್ರಾಮಸ್ಥ ಚಂದ್ರಪ್ಪ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಿಮ್ಮಪ್ಪ, ವಂಸತಮ್ಮ, ಶಾರದಮ್ಮ, ಪಾರ್ವತಮ್ಮ, ವೀರಸ್ವಾಮಿ, ಉದಯ್, ಯೋಗರಾಜ್, ತಿಮ್ಮೇಶ್, ವೀರನಾಗಪ್ಪ ಗ್ರಾಮದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಾಲೂಕಿನ ತಿರುಮಲ್ಲಾಪುರ ಗ್ರಾಮಸ್ಥರು ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗಾ ಜಡಿದು, ಬಿಂದಿಗೆ ಪ್ರದರ್ಶಸಿ ಪ್ರತಿಭಟಿಸಿದರು….
ವರದಿ. ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030