ಸಂತ ಶಿಶುನಾಳ ಶರೀಫ ಜಯಂತಿ ಅಂಗವಾಗಿ ತತ್ವಪದ ಮತ್ತು ಜೀವನ ಕುರಿತು ಜರುಗಿದ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟನೆ..!!!!!

Listen to this article

ಸಂತ ಶಿಶುನಾಳ ಶರೀಫ ಜಯಂತಿ ಅಂಗವಾಗಿ ತತ್ವಪದ ಮತ್ತು ಜೀವನ ಕುರಿತು ಜರುಗಿದ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟನೆ..!!!!!

ಹರಪನಹಳ್ಳಿ ಪಟ್ಟಣದ ತೆಂಗಿನ ಮಠ ಸಂಸ್ಥೆಯ ಕಟ್ಟಿ ಸೀತಾರಾಮಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರ್ಲ್ ಪಬ್ಲಿಕ್ ಶಾಲೆ ಹಾಗೂ ಕಟ್ಟಿ ಸೇತುರಾಮಾಚಾರ್ಯ ಶಿಕ್ಷಣ ಇವರ ಸಹಯೋಗದಲ್ಲಿ ಸಂತ ಶಿಶುನಾಳ ಶರೀಫರ ಜಯಂತಿ ಅಂಗವಾಗಿ ತತ್ವಪದ ಮತ್ತು ಜೀವನ ಕುರಿತು ಜರುಗಿದ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಪಟಿಕ ದಂತ ಗುಣ ಹೊಂದಿದ ಸಂತ ಶಿಶುನಾಳ ಶರೀಫರು ನಿಫ್ಟುರ ಸ್ವಭಾವದವರಾಗಿ ಯಾವ ದಾಖಲೆಗಳಿಗೂ ಒಳಗಾಗುತ್ತಿರಲಿಲ್ಲ ಎಂದು ತಗ್ಗಿನ ಮಠದ ಶ್ರೀ ವರಸ್ದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ದಾಕ್ಷಾಯಣಿಕರ ನಾಡು ಕರುನಾಡು ದಾಸರು ತತ್ವಪದಕಾರರು ಹಾಗೂ ಸರ್ವಧರ್ಮೀಯರು ಬದುಕಿ ಬಾಳಿದ ನಾಡು ಸಂತ ಶಿಶುನಾಳ ಶರೀಫರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೇರು ವ್ಯಕ್ತಿತ್ವ ಹೊಂದಿದವರು ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇವರು ತಮ್ಮ ಬದುಕು ಚಿಂತನೆ ಸಾಹಿತ್ಯಗಳಿಂದ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದು ಶಿಶುನಾಳ ಶರೀಫರ ತತ್ವಪದಗಳು ಧಾರ್ಮಿಕ ಭಾವೈಕ್ಯತೆಯ ಸಾಮರಸ್ಯದ ಸಮಾನತೆಗೆ ಅಪೂರ್ವ ನಿರ್ದೇಶಕಗಳಾಗಿದ್ದು ಸಮಾಜದಲ್ಲಿ ತಲೆದೂರಿತ್ತಿದ್ದ ಧಾರ್ಮಿಕ ದೋಷಗಳು ಅಂದ ಶ್ರದ್ಧೆ ಹಾಗೂ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸಿ ಜನರ ಕಣ್ಣು ತೆರೆಸಿದ ದಾರ್ಶನಿಕ ಎಂದರು.
ಪ್ರಕೃತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಶಿಧರ್ ಪೂಜಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಒತ್ತಡದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಇಂತಹ ವೇಳೆಯಲ್ಲಿ ದಾರ್ಶನಿಕರ ಚಿಂತನೆಗಳು ಬರಹಗಳು ತತ್ವಪದಗಳಿಂದ ನೆಮ್ಮದಿ ಸಿಗುತ್ತದೆ ಸಂತ ಶಿಶುನಾಳ ಶರೀಫರು ಹುಟ್ಟಿದ್ದು ಮುಸ್ಲಿಮರಾದರು ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಅನೇಕ ತತ್ವಪದಗಳನ್ನು ಹೇಳುವ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷಕ್ಕೆ ಉಚ್ಚಂಗಪ್ಪ ಮಾತನಾಡಿ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರು ಮಂದಿರ, ಮಸೀದಿ, ಪುರಾಣ,ಖುರಾನ್, ನಮನ, ನಮಾಜ್, ಅಲ್ಲ, ಜಂಗಮ, ಪಕೀರ, ಇವೆಲ್ಲ ಒಂದೇ ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂದು ತೋರಿಸಿದಂತಹ ದಾರ್ಶನಿಕರು. “ಶರೀಫ್ ಎಂಬ ಪಾರ್ಷಿ ಭಾಷೆಯಲ್ಲಿ ಉತ್ತಮ ಶೀಲ ಸ್ವಭಾವ ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ ಹೆಸರಿಗೆ ಅನ್ವರ್ಥರಾಗಿ ಬಾಳಿದ ಶಿಶುನಾಳ ಶರೀಫರು ಎಂದಿಗೂ ಜನಮನದಲ್ಲಿ ನಿಲ್ಲಲು ಕಾರಣ ಎಂದರು”.

ರಾಣೆಬೆನ್ನೂರಿನ ಉಪನ್ಯಾಸಕ ಬಿಬಿ ನಂದೆಹಾಲ್ ಕಟ್ಟಿ ಸೇತು ರಾಮಾಚಾರ್ಯ ಶಿಕ್ಷಣ ಮಾವಿದ್ಯಾಲಯದ ಪ್ರಾಂಶುಪಾಲ ಟಿ ಎಂ ಚಂದ್ರಶೇಖರಯ್ಯ ಪರ್ಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುಮ ಉಪ್ಪಿನ ಮಾತನಾಡಿದರು.
ಈ ವೇಳೆ ಪ್ರಕೃತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಚೆನ್ನೇಶ್ ಬಣಕಾರ್. ನಿರ್ದೇಶಕ ನಾಗೇಶ್ ಉಪ್ಪಿನ. ಗಾಯಕ ಬಸವರಾಜ್ ಭಂಡಾರಿ, ಕಟ್ಟಿ ಸೇತುರಾಮಾಚಾರ್ಯ, ಶಿಕ್ಷಣ ಮಾವಿದ್ಯಾಲಯದ ಉಪನ್ಯಾಸಕ ಮರಳು ಸಿದ್ದಪ್ಪ, ಎನ್ ಟಿ ಸೇರಿದಂತೆ ಇತರರು ಇದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend