ಸ್ಪಂದನಾ ಮೃತದೇಹ ಅಂತಿಮ ದರ್ಶನಕ್ಕೆ ಜಮಾಯಿಸಿದ ಜನ: ಬಿಕ್ಕಿ ಬಿಕ್ಕಿ ಅತ್ತ ವಿಜಯರಾಘವೇಂದ್ರ…!!!

ಬೆಂಗಳೂರು : ಚಿನ್ನಾರಿ ಮುತ್ತನ ಅಚ್ಚುಮೆಚ್ಚಿನ ಮಡದಿ ಸ್ಪಂದನಾ ಇನ್ನೇನು ನೆನಪು ಮಾತ್ರ. ವಿದೇಶಕ್ಕೆ ಪ್ರವಾಸಕ್ಕಾಗಿ ತೆರಳಿದ್ದ ಸ್ಪಂದನಾ ತಾಯಿನಾಡಿಗೆ ಬಂದಿದ್ದು ಶವವಾಗಿ. ವಿಧಿಯಾಟಕ್ಕೆ ನಟ ವಿಜಯರಾಘವೇಂದ್ರ ಒಬ್ಬೊಂಟಿಯಾಗಿದ್ದಾರೆ. ವಿಜಯರಾಘವೇಂದ್ರ ಅವರ ಪ್ರೀತಿಯ ಪತ್ನಿ ಸ್ಪಂದನಾ ಹೃದಯಾಘಾತದಿಂದ ಬ್ಯಾಂಕಾಕ್‌ ಪ್ರವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಳೆದ ದಿನ ರಾತ್ರಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ನಗರದ ಮಲ್ಲೇಶ್ವರಂ ನಲ್ಲಿರುವ ಬಿಕೆ ಶಿವರಾಂ ಅವರ ನಿವಾಸದ ಬಳಿ ಸ್ಪಂದನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಕುಟುಂಬದಲ್ಲಿ ಶೋಕ ಸಾಗರವೇ ಮಡುಗಟ್ಟಿದೆ. ಅವರ ಅಂತಿಮ ದರ್ಶನಕ್ಕೆ ಆಪ್ತರು ಆಗಮಿಸುತ್ತಿದ್ದಾರೆ. ಸಾರ್ವಜನಿಕರು ಸಾಲುಗಟ್ಟಿ ನಿಂತು ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸ್ಪಂದನಾ ಮೃತದೇಹಕ್ಕೆ ವಿಜಯರಾಘವೇಂದ್ರ ಹಾಗೂ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದರು.

ರಾತ್ರಿಯಿಂದಲೂ ಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಟ ಕೋಮಲ್, ರಾಘವೇಂದ್ರ ರಾಜಕುಮಾರ್, ಗಿರಿಜಾ ಲೋಕೇಶ್, ನಟಿ ಸುಧಾರಾಣಿ, ವಿಜಯ್‌ಪ್ರಕಾಶ್, ಶ್ರೀನಾಥ್ ಹಿರಿಯ ನಟ, ವಾಹಿನಿಗಳ ಮುಖ್ಯಸ್ಥರು, ವಿಜಯರಾಘವೇಂದ್ರ ಅವರ ಆಪ್ತರು ಸ್ಪಂದನಾ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ

ಸ್ಪಂದನ ನೆನೆದು ಗಿರಿಜಾ ಲೋಕೇಶ್ ಕಣೀರು

ಗಿರಿಜಾ ಲೋಕೇಶ್, ‘ಸ್ಪಂದನಾ ಮುಖದಲ್ಲಿ ಆ ಕಳೆ ಮಾಸಿಲ್ಲಾ. ಅವಳನ್ನು ನೋಡುತ್ತಿದ್ದರೆ ಅವಳು ಬದುಕಿದ್ದಾಳೆ ಅನ್ಸುತ್ತೆ. ಅವಳ ಸಾವು ತಮಗೇ ಇಷ್ಟು ದುಖ: ತಂದಿದೆ. ಇನ್ನೂ ಅವರ ತಂದೆ ತಾಯಿಗೆ ಹೇಗೆ ಆಗಿರಬೇಡ? ವಿಜಯರಾಘವೇಂದ್ರ ಮತ್ತು ಅವರ ಮಕ್ಕಳಿಗೆ ಆ ದೇವರೇ ಕಾಪಾಡಬೇಕು. ನಮ್ಮಂಥವರಿಗೆ ಅಂತಹ ಸಾವು ಬರಬೇಕು. ಇನ್ನೂ ಬಾಳಿ ಬದುಕಬೇಕಾದ ಮಕ್ಕಳಿಗೆ ಕೊಡ್ತಾನೆ ಆ ದೇವರು. ಆ ದೇವರು ಅದೆಷ್ಟು ಕ್ರೂರಿ. ಒಂದು ಒಳ್ಳೆ ಸಂಸಾರವನ್ನು ಹಾಳು ಮಾಡಿದ’ ಎಂದು ಹಿರಿಯ ನಟಿ ಕಣ್ಣೀರು ಹಾಕಿದರು.

ರಾಘವೇಂದ್ರ ರಾಜಕುಮಾರ್

ರಾಘವೇಂದ್ರ ರಾಜಕುಮಾರ್, ‘ ಇದಕ್ಕೆ ಏನು ಮಾತನಾಡಬೇಕು ಗೊತ್ತಾಗ್ತಿಲ್ಲ. ಅವರ ತಂದೆಗೆ, ರಾಘುಗೆ ಏನ್ ಹೇಳೋಣ. ಆಗಿದ್ದೆಲ್ಲಾ ಮರೆತುಬಿಡಿ ಅನ್ಬೇಕಾ. ಅಪ್ಪ ರಾಘು ನಮ್ಮ ಜೊತೆ ಬೆಳೆದವರು. ಭಗವಂತ ಅವರಿಗೆ ದುಖ: ಭರಿಸುವ ಶಕ್ತಿ ಕೊಡಲಿ. ವಿಜಯರಾಘವೇಂದ್ರ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಪ್ರಪಂಚದಲ್ಲಿ ಎಲ್ಲಾ ಕಡೆ ಆಗುತ್ತದೆ. ಆದರೆ ನಮ್ಮ ಆಪ್ತರಿಗೆ ಆದಾಗ ಆಗೋ ನೋವು ದೊಡ್ಡದು’ ಎಂದು ಹೇಳಿದರು.

ವಿಜಯ್ ಪ್ರಕಾಶ್

‘ವಿಜಯರಾಘವೇಂದ್ರ ವಿಶ್ವಾಸದಿಂದ ಇರುವ ವ್ಯಕ್ತಿ. ಭಗವಂತ ಅವರಿಗೆ ಅವರ ಕುಟುಂಬಕ್ಕೆ ದುಖ: ಭರಿಸುವಂತ ಶಕ್ತಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಗಾಯಕ ಹೇಳಿದರು.

ಇಂದೇ ಸ್ಪಂದನಾ ಅಂತ್ಯಕ್ರಿಯೆ

ಸ್ಪಂದನಾ ಮೃತದೇಹವನ್ನು ಅವರ ತವರು ಮನೆ ಅಂದರೆ ಬಿಕೆ ಶಿವರಾಂ ಅವರ ಮಲ್ಲೇಶ್ವರಂ ನಿವಾಸದಲ್ಲಿ ಇಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ. ಸ್ಪಂದನಾ ಅವರ ಅಂತ್ಯಕ್ರಿಯೆ ಇಂದೇ ನಡೆಯಲಿದೆ. ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಕ್ರಿಯೆಗೆ ನಡೆಯಲಿದೆ…..

ವರದಿ. ಮುಕ್ಕಣ್ಣ ಹುಲಿಗುಡ್ಡ ಕರ್ನಾಟಕ ಕ್ರೈಂ ರಿಪೋರ್ಟರ್,

Leave a Reply

Your email address will not be published. Required fields are marked *