ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕ ಉದ್ಘಾಟನೆ..!

ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕ ಉದ್ಘಾಟನೆ..!

ಕೂಡ್ಲಿಗಿ :- ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹಿಂದುಳಿದ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷರಾದ ಜಿ.ಪಿ.ಗುರುಲಿಂಗಪ್ಪ ಮಾತನಾಡಿ ಸ್ವಾತಂತ್ರ ಬಂದು 79 ವರ್ಷಗಳಾದರೂ ಇವತ್ತಿನವರೆಗೂ ದಲಿತರಿಗೂ, ಕಾರ್ಮಿಕರಿಗೂ, ಹಿಂದುಳಿದ ಅಲ್ಪಸಂಖ್ಯಾತರಿಗೂ, ಅಲೆಮಾರಿಗಳಿಗೂ ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಆದ್ದರಿಂದ ಇಂತಹ ಪ್ರಗತಿಪರ ಸಂಘಟನೆಗಳಲ್ಲಿ ಪಾಲ್ಗೊಂಡು ಮುಂಬರುವ ಕಷ್ಟದ ದಿನಗಳನ್ನು ಎದುರಿಸಲು ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ್ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಚಂದ್ರಪ್ಪ, ಗುರುಲಿಂಗಪ್ಪ ಮಡಕಲಕಟ್ಟೆ ಕೃಷ್ಣಪ್ಪ, ಸಾರೆಪ್ಪ, ಎಂ. ಬಿ. ಮಾರಪ್ಪ, ಬೈರಣ್ಣ ಗೊಂಚಗಾರ್, ಸಣ್ಣ ಮಾರಣ್ಣ, ವಿಶ್ವನಾಥ್ ಗ್ರಾಮ ಘಟಕದ ಅಧ್ಯಕ್ಷರಾದ ಜಿ.ಓಬಣ್ಣ, ಡಿ.ಅಶೋಕ್ ಡಿ.ರಮೇಶ್, ಕೇಶವ, ಪವಿತ್ರ ರಮೇಶ್ ಹಾಗೂ ಸಮಿತಿಯ ಸದಸ್ಯರು ಇದ್ದರು.

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

Leave a Reply

Your email address will not be published. Required fields are marked *