ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ – ಎಂ. ಮಲ್ಲಿಕಾರ್ಜುನ್
ಹೂವಿನಹಡಗಲಿ, ನ. 8 – ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಲ್ಲಿಕಾರ್ಜುನ್ ಹೇಳಿದರು.
ಹೂವಿನಹಡಗಲಿ ಪ್ರವಾಸಿ ಮಂದಿರದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಹೆಚ್. ರಾಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 16 ಹೊಸ ಸದಸ್ಯರ ಆಯ್ಕೆ ಮಾಡಲಾಯಿತು. ಬಳಿಕ ಸದಸ್ಯರು ಇಂದಿರಾ ಕ್ಯಾಂಟೀನ್‌ನಲ್ಲಿ ಸಾಮಾನ್ಯರೊಂದಿಗೆ ಊಟ ಮಾಡಿ ಸರ್ಕಾರದ ಯೋಜನೆಗಳು ಜನರ ಮಟ್ಟಿಗೆ ತಲುಪಲಿ ಎಂದು ಆಶಿಸಿದರು.
ಸಭೆಯಲ್ಲಿ ಸುರೇಶ್ ಹೊಳಗುಂದಿ, ಬಿ.ಎಂ. ರುದ್ರಮನಿ, ವೆಂಕಟೇಶ್, ರಾಜಾಭಕ್ಷಿ, ನಾಗರಾಜ್ ತೊಗರಿಕಟ್ಟಿ ಸೇರಿದಂತೆ ಸದಸ್ಯರು ಭಾಗವಹಿಸಿದರು. ಸಭೆಯ ಉಸ್ತುವಾರಿ ವಹಿಸಿದ್ದ ಜಿಲ್ಲಾ ಸದಸ್ಯರು ವಿನೋದ್ ಕೊಡಿಹಳ್ಳಿ ಅವರಿಗೆ ಎಲ್ಲರೂ ಕೃತಜ್ಞತೆ ಅರ್ಪಿಸಿದರು…

