10.50 ಲಕ್ಷ ರೂ. ಹಣ ವಿದ್ದ ಚೀಲ ಕಳವು
ಕೂಡ್ಲಿಗಿ: ಕಾರಿನಲ್ಲಿ ಹಣದ ಚೀಲ ಕಳುವಾದ ಘಟನೆ ಪಟ್ಟಣದ ಬಿಸಿಎಂ ಇಲಾಖೆ ಕಚೇರಿ ಎದುರು ಬುಧವಾರ ನಡೆದಿದೆ.
ಹೊಸಹಳ್ಳಿ ಗ್ರಾಮದ ಅಹ್. ಬಿ. ವೀರಭದ್ರಪ್ಪ ಎಂಬುವವರು ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆಜಿಬಿ ಬ್ಯಾಂಕಿನಲ್ಲಿ
10.50 ಲಕ್ಷ ರೂ. ಬಿಡಿಸಿಕೊಂಡು ಕಾರಿನಲ್ಲಿಟ್ಟುಕೊಂಡು ಪಟ್ಟಣದಲ್ಲಿನ ಬಿಸಿಎಂ ಇಲಾಖೆ ಕಚೇರಿ ಬಳಿ ನಿಲ್ಲಿಸಿ ಅಧಿಕಾರಿಗಳನ್ನು ಕಾಣಲು ಕಚೇರಿಗೆ ಹೋಗಿದ್ದರು ಈ ವೇಳೆ ಕಳ್ಳನೊಬ್ಬ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ 10.50 ಲಕ್ಷ ರೂ. ಇದ್ದ ಬ್ಯಾಗ್ ಎತ್ತಿಕೊಂಡು ಹೋಗಿದ್ದಾನೆ. ನಂತರ ಕಚೇರಿಯಿಂದ ಹೊರಬಂದ ವೀರಭದ್ರಪ್ಪ ಕಾರು ಅತ್ತಲು ಹೋದಾಗ ಪ್ರಕರಣ ಕಳ್ಳತನವಾಗಿರುವುದು ಗೊತ್ತಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿಗಾರರು : ಸಿ ಅರುಣ್ ಕುಮಾರ್
