ರಸ್ತೆಯಲ್ಲಿ ಒಕ್ಕಲು ತನವನ್ನು ಮಾಡದಂತೆ ತಡೆಯಲು ಪ್ರಯಾಣಿಕರಿಂದ ಮನವಿ!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 20.1.2021. *ಕೂಡ್ಲಿಗಿ ತಾಲೂಕು *ಕಾನಹೊಸಹಳ್ಳಿ*
*ಸರ್ಕಾರಿ ಬಸ್ಸುಗಳು* *ಹಾಗೂ ಇತರೆ ವಾಹನಗಳು*
*ಸಂಚರಿಸುವ ದಾರಿಯಲ್ಲಿ ಒಕ್ಕಲುತನ ಮಾಡುವುದನ್ನು ನಿಲ್ಲಿಸಲು ವಾಹನ ಸವಾರರಿಂದ ಹಾಗೂ ಪ್ರಯಾಣಿಕರಿಂದ ಮನವಿ*

ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಗ್ರಾಮದ ಕೆಲವು ರೈತರು ರಾಷ್ಟ್ರೀಯ ಹೆದ್ದಾರಿ 50. ಚಿತ್ರದುರ್ಗದಿಂದ ಕಾನಹೊಸಹಳ್ಳಿ ಸರ್ವಿಸ್ ರಸ್ತೆಯಿಂದ
. ಖಾನಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣಕ್ಕೆ ವಾಹನಗಳು ಬರುವ ರಸ್ತೆಯಲ್ಲಿ ಕೆಲವು ರೈತರು ರಾಗಿ ಇತರ ಧಾನ್ಯಗಳನ್ನು ಒಕ್ಕಲುತನ ಮಾಡುವುದನ್ನು ನಿಲ್ಲಿಸಬೇಕೆಂದು ಕೆಲವು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ವಾಹನ ಸವಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಈ ರೀತಿ ಒಕ್ಕಲುತನ ಮಾಡುವುದರಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೂ ಹಾಗೂ ರಸ್ತೆಯಲ್ಲಿ ಒಕ್ಕಲುತನ ಮಾಡುವ ರೈತರಿಗೂ ಪ್ರಾಣಾಪಾಯವಾಗುವ ಸಂಭವವಿರುತ್ತದೆ ಕಾರಣ ಸಾರ್ವಜನಿಕರ ವಾಹನಗಳ ಸಂಚಾರ ಸುಗಮವಾಗಿ ಸಾಗಲು ಹಾಗೂ ಪ್ರಾಣಾಪಾಯ ತಪ್ಪಿಸಲು ರಸ್ತೆಯಲ್ಲಿ ಒಕ್ಕಲುತನ ಮಾಡುವುದನ್ನು ನಿಲ್ಲಿಸಬೇಕೆಂದು ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *