ವರದಿ. ವಿರೇಶ್ ಎಚ್ಚರಿಕೆ ಪತ್ರಿಕಾ ವರದಿಗಾರ
ಕೊಟ್ಟೂರಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಿಸಲಾಯಿತು.
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
ಕೊಟ್ಟೂರು: ಜಯಂತಿಗಳು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗದೇ ನಿತ್ಯ ಜೀವನಕ್ಕೆ ಮಾರ್ಗದರ್ಶನವಾಗಬೇಕು,ಅವರು ನೀಡಿದ ಸಂದೇಶ ಪಾಲಿಸಬೇಕು ಆಗಲೇ ಜಯಂತಿಗೆ ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಜಿ ಅನಿಲ್ ಕುಮಾರ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಿದ್ದರಾಮೇಶ್ವರರ ಜಯಂತಿಯಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯ ಭಾಗವಾಗಿ ಬಸವಣ್ಣ ನಿರ್ಮಿಸಿದ್ದ ಅಂದಿನ ಪಾರ್ಲಿಮೆಂಟ್ ಕಲ್ಪನೆಯ ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿ ಅಲ್ಲಮ ಪ್ರಭುಗಳು ನಿರ್ವಹಿಸಿದರೆ, ಸಿದ್ದರಾಮೇಶ್ವರರು 2ನೇ ಅಧ್ಯಕ್ಷರಾಗಿ ಮುಂದುವರಿಸಿದ್ದಾರೆ. “ಒಬ್ಬರ ಮನವ ನೋಯಿಸಿ, ಒಬ್ಬರ ಮನೆಯ ಘಾತವಮಾಡಿ ಗಂಗೆಯ ಮುಳುಗಿದಡೇನಾವುದಯ್ಯ” ಎಂದು ಹೇಳಿರುವ ಸಿದ್ದರಾಮೇಶ್ವರರು ಇನ್ನೊಬ್ಬರ ಮನವ ನೋಯಿಸದಂತೆ ನಡೆಯಬೇಕೆಂದು ನೀಡಿರುವ ಸಂದೇಶ ಇಂದಿಗೂ ಪ್ರಸ್ತುತ ಎಂದರು.
ಪಿ ಕೆ ಇಂದ್ರಜಿತ್, ದೊಡ್ಡಮನಿ ಚೌಡಪ್ಪ, ಗ್ರಾ ಪಂ ಸದಸ್ಯ ನಾಗೇಶ ಡಿ, ಮಾಜಿ ಗ್ರಾ ಪಂ ಸದಸ್ಯ ಬಸವರಾಜ, ರವಿ ಕುಮಾರ.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪಿ ಹೆಚ್ ಆರ್ ರಾಘವೇಂದ್ರ, ಶಿರಸ್ತೇದಾರ್ ಲೀಲಾ.ಎಸ್. ಸಿಬ್ಬಂದಿಗಳಾದ ಸಿರಾಜುದ್ದೀನ್, ರವಿ ಹರಪನಹಳ್ಳಿ, ಸುನಿತಾ , ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಮಂಜುನಾಥ. ಗುರುಬಸವರಾಜ ಹಾಗೂ ಭೋವಿ ಸಮಾಜದ ಮುಖಂಡರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
