ದೇವರಿಗಿಂತ ದೇಹವನ್ನು ಪ್ರೀತಿಸುವ ಜನರು ವಿದೇಶದಲ್ಲಿದ್ದಾರೆ,..!!!

Listen to this article

ದೇವರಿಗಿಂತ ದೇಹವನ್ನು ಪ್ರೀತಿಸುವ ಜನರು ವಿದೇಶದಲ್ಲಿದ್ದಾರೆ,…….

ಹರಪನಹಳ್ಳಿ :- ಹರಪನಹಳ್ಳಿ ತಾಲೂಕಿನ ನಿಚ್ಚವ್ವನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗರುಡ ಗಂಭ ಸ್ಥಾಪನೆ ಹಾಗೂ ನೂತನ ಗೋಪುರದ ಕಳಾಸರೋಹಣ ಮತ್ತು ಕುಂಭಾಭಿಷೇಕ ಹಾಗೂ ಧಾರ್ಮಿಕ ಸಮಾರಂಭದ ದಿವ್ಯಸಾನಿಧ್ಯವಹಿಸಿದ್ದ ಉಜ್ಜಯಿನಿ ಸ್ವಾಮಿಜಿ ಆರ್ಶಿವಚನ ನೀಡಿದರು. ಭಾರತದಲ್ಲಿ ದೇಹಕ್ಕಿಂತ ದೇವರ ಮೇಲೆ ಭಕ್ತಿ, ಪ್ರೀತಿ ಇದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಅಭಿಪ್ರಾಯಪಟ್ಟರು.

ಆಂಜನೇಯ ಒಂದು ಜಾತಿ, ಧರ್ಮ ಪಂಥಕ್ಕೆ ಸೀಮಿತವಲ್ಲ, ಪ್ರತಿಯೊಂದು ಗ್ರಾಮಗಳಲ್ಲಿ ಆಂಜನೇಯ ದೇಗುಲ ಇರುವುದನ್ನು ಕಾಣುತ್ತೇವೆ. ರಾಮನ ಭಕ್ತನಾದ ಆಂಜನೇಯ ರಾಮನ ಸವಾಹಸಿಂದ ಬೆಳಕಿಗೆ ಬರುತ್ತಾನೆ.ಸೇವೆಯಿಂದ ಪರಮಭಕ್ತನಾಗುತ್ತಾನೆ. ರಾಮನ ಜಪದಲ್ಲಿ ದೊಡ್ಡಶಕ್ತಿಯನ್ನು ಕಾಣುತ್ತಾನೆ ಎಂದರು.ಬೇರೆ ಕಡೆಗಳಲ್ಲಿ ತಂದೆ ದೇವಸ್ಥಾನ ಕಟ್ಟಿದರೆ, ಮಗ ಕಳಾಸರೋಹಣ ಮಾಡುವುದನ್ನು ನೋಡಿದ್ದೇವೆ ಆದರೆ ನಿಚ್ಚವ್ವನಹಳ್ಳಿ ಗ್ರಾಮದವರು ಸಕಾಲದಲ್ಲಿ ದೇಗುಲ ನಿರ್ಮಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮ ಮಾಡಿರುವುದು ಉತ್ತಮ ಕೆಲಸವಾಗಿದ್ದು ಎಂದ ಅವರು ನಾವು ಮಾಡುವ ಕಾಯಕದಲ್ಲಿ ನಿಷ್ಠೆ ಇರಬೇಕು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸದೆ ಒಳ್ಳೆಯದನ್ನು ಮಾಡುವ ಬಗ್ಗೆ ಆಲೋಚನೆಗಳಿರಬೇಕು, ದೇವಸ್ಥಾನಕ್ಕೆ ಗೋಪುರ, ಕಳಸ ಬಹುಮುಖ್ಯವಾಗಿದೆ ಎಂದರು.
ತೆಗ್ಗಿನಮಠದ ಶ್ರೀ ವರಸದ್ಯೋಜಾಥ ಶಿವಾಚಾರ್ಯ, ಅರಸಿಕೇರಿ ಕೋಲಶಾಂತೇಶ್ವರ ವೀರಕ್ತಮಠದ ಶಾಂತಲೀಂಗದೇಶಿಕೇಂದ್ರ ಸ್ವಾಮಿಜಿ, ನಿಚ್ವವ್ವನಹಳ್ಳಿ ಹಾಲಸ್ವಾಮಿಜಿ ಸಾನಿಧ್ಯವಹಿಸಿದ್ದರು.
ಶಾಸಕ ಜಿ.ಕರುಣಾಕರರೆಡ್ಡಿ, ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ಶಶಿಧರ ಪೂಜಾರ, ಅಂಬಾಡಿ ನಾಗರಾಜ, ಕೆ.ಜಯಣ್ಣ, ಪಿ.ಟಿ.ಭರತ್,ಎಚ್.ಕೆ.ಹಾಲೇಶ್ ತಿಮ್ಮನಾಯ್ಕ, ಮಾಜಿ ಪುರಸಭೆ ಅಧ್ಯಕ್ಷ ಮಂಜುನಾಥ ಇಜಾಂತಕರ, ಸದಸ್ಯರಾದ ಕಿರಣ್‍ಕುಮಾರ, ಅಂಬೇಡ್ಕರ ಸಂಘದ ನಿಚ್ಚವ್ವನಹಳ್ಳಿ ಭೀಮಪ್ಪ, ವಿಎಸ್‍ಎಸ್‍ಎನ್ ಕಾರ್ಯದರ್ಶಿ ವೈ.ಗೋಣಿಬಸಪ್ಪ, ಬಿಡಿಸಿಸಿ ಬ್ಯಾಂಕ್‍ನ ಎಚ್.ಆಂಜಿನಪ್ಪ, ಪಿಡಿಓ ಟಿ.ಆಂಜಿನಪ್ಪ, ಉಪನ್ಯಾಸಕ ಡಿ.ಅಂಜಿನಪ್ಪ, ಕನಕಪ್ಳ ಹನುಮಂತಪ್ಪ, ಪಿ.ನಾಗೇಶರಾವ್, ಪಿ.ದತ್ತಾತ್ರೇಯರಾವ್, ಕೆ.ಕೆಂಚಪ್ಪ, ಟಿ.ತಿರುಕಪ್ಪ, ಕೆ.ಪರಶುರಾಮಪ್ಪ, ಕೆ.ಧರ್ಮಪ್ಪ, ಎಚ್.ಎಂ.ಕೊಟ್ರಯ್ಯ, ಟಿ.ಹನುಮಂತಪ್ಪ, ವೈ.ನಾಗರಾಜ, ವೈ.ಅಜ್ಜಪ್ಪ, ಇ.ಕೊಟ್ರೇಶಪ್ಪ, ಕೆ.ನಾಗರಾಜ, ಸೇರಿದಂತೆ ಇತರರು ಇದ್ದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend