ಆತ್ಮಾಹುತಿಯತ್ತ ಸ್ಯಾಂಡಲ್ ವುಡ್ ನ ಸಣ್ಣ ಮತ್ತು ಮಧ್ಯಮ ನಿರ್ಮಾಪಕರು…!!!

Listen to this article

ವರದಿ. ಬಸವರಾಜ್ ಹಿರೇಮಠ್ ಲಿಂಗಸಗೂರು

ಆತ್ಮಾಹುತಿಯತ್ತ ಸ್ಯಾಂಡಲ್ ವುಡ್ ನ ಸಣ್ಣ ಮತ್ತು ಮಧ್ಯಮ ನಿರ್ಮಾಪಕರು.

ಕಳೆದ ಒಂದು ವರ್ಷದಿಂದ ಕರೋನಾದ ಹೆಮ್ಮಾರಿ ಹೊಡೆತಕ್ಕೆ ನಿತ್ರಾಣಗೊಂಡಿದ್ದ ಚಲನಚಿತ್ರ ಮತ್ತು ನಿರ್ಮಾಪಕರು. ಇಂದು ಆತ್ಮಾಹುತಿಗೆ ಸಿದ್ದರಾಗಿದ್ದಾರೆ.
ಸುಮಾರು ಎರಡು ಮೂರು ವರ್ಷಗಳಿಂದ ಚಲನಚಿತ್ರದ ಬಣ್ಣದ ಕನಸು ಕಟ್ಟಿಕೊಂಡು ಮನೆ ಸೈಟು ಮಾರಿ ಅಲ್ಲದೆ ಸಾಲಸೋಲ ಮಾಡಿ ಚಿತ್ರಗಳನ್ನು ನಿರ್ಮಿಸಿ ಬಿಡುಗಡೆಯ ಅಗ್ನಿಪರೀಕ್ಷೆಗೆ ತಯಾರಾಗಿದ್ದ ಸುಮಾರು 600ಕ್ಕೂ ಹೆಚ್ಚು ಸಣ್ಣಪುಟ್ಟ ಸಿನಿಮಾಗಳು
ಹಾರ್ಡ್ ಡಿಸ್ಕ್ ನಿಂದ ಪುಟಿದೆದ್ದು ಬೆಳ್ಳಿಪರದೆಗೆ ಅಪ್ಪಳಿಸಲು ತಯಾರಾಗಿದ್ದವು .ಆದರೆ ಕರೋನದ ಹೊಡೆತಕ್ಕೆ ನಲುಗಿ ಮಲಗಿದ್ದವು
ಈಗ ಕರೋನದ ಅಲೆಗಳು ಕಡಿಮೆಯಾಗುತ್ತಿದ್ದಂತೆ ಮತ್ತೆಸಿನಿಮಾದ ರೆಕ್ಕೆಗಳು ಹಾರಲು ತಯಾರಾಗಿವೆ

ಆದರೆ ಇದು ಇಂದು ಪ್ರತಿಯೊಬ್ಬ ನಿರ್ಮಾಪಕನಿಗೂ ಅತ್ಯಂತ ಕಠಿಣ ಸಂಕಟದ ಮತ್ತು ದುರ್ಬಲ ಹಾಗೂ ದುರ್ಗಮ ದಾರಿಯಾಗಿದೆ.
ಬಹುತೇಕ ನಿರ್ಮಾಪಕರು ಮತ್ತು ನಿರ್ದೇಶಕರು ಚಿತ್ರರಂಗಕ್ಕೆ ಹೊಸಬರೆ ಆಗಿರುತ್ತಾರೆ. ಅವರಿಗೆಲ್ಲ ಸಿನಿಮಾದ ನಿರ್ಮಾಣವೇ ಒಂದು ದೊಡ್ಡ ಸಾಹಸ. ಇನ್ನೂ ಚಲನಚಿತ್ರದ ಬಿಡುಗಡೆ ಅನ್ನುವುದು ಅತ್ಯಂತ ಕಠಿಣ ಸವಾಲು .
ಇಲ್ಲಿ ಅನೇಕ ಧನದಾಹಿ ತಿಮಿಂಗಿಲಗಳ ಮಧ್ಯೆ ಬಚಾವಾಗಿ ಬರುವುದು ಸುಲಭದ ಮಾತಲ್ಲ. ಕೆಲವು ಬಕಪಕ್ಷಿ ಗಳು ನಿರ್ಮಾಪಕ ನನ್ನ ಬಡಿದು ಬಾಯಿಗೆ ಹಾಕಿಕೊಳ್ಳಲು ಸಜ್ಜಾಗಿ ಕೂತಿವೆ.
ಕಳೆದ ಒಂದು ವರ್ಷದಿಂದ ಬೀಗ ಜಡಿದು ಕೊಂಡು
ಚಿತ್ರಮಂದಿರಗಳು ಮತ್ತು ವಿತರಕರ ವ್ಯವಹಾರಗಳು ಸಂಪೂರ್ಣ ಸ್ಥಗಿತವಾಗಿದ್ದವು
ಇಂದು ಚಿತ್ರರಂಗದ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದಂತೆ ಇವರೆಲ್ಲರೂ ಮೈಕೊಡವಿಕೊಂಡು ನಿಂತಿದ್ದಾರೆ.

ಅರೆಬರೆ ಬೆಂದ ನಿರ್ಮಾಪಕನಿಗೆ ಮತ್ತೆ ಸಾಲಸೋಲ ಮಾಡಿ ಸಿನಿಮಾವನ್ನು ಬಿಡುಗಡೆಗೊಳಿಸುವ ಅಗ್ನಿಪರೀಕ್ಷೆ ಎದುರಾಗಿದೆ .
ಸಾವಿರ ಸಾವಿರ ಸಿನಿಮಾಗಳು ಸಾಲುಸಾಲಾಗಿ ಪ್ರದರ್ಶನಕ್ಕೆ ಸಿದ್ಧವಾಗಿವೆ
ಇದು ಒಂದು ರೀತಿ ಚಿತ್ರಮಂದಿರ ಮತ್ತು ವಿತರಕರಿಗೆ ಹಬ್ಬದೂಟ .
ನಿರ್ಮಾಪಕನಿಗೆ ಮಾತ್ರ ತಿಥಿಯ ಊಟ
ಏಕೆಂದರೆ ಈಗಾಗಲೇ ಪ್ರತಿಯೊಬ್ಬ ವಿತರಕರು ನಿರ್ಮಾಪಕನಿಗೆ ಅಡ್ವಾನ್ಸ್ ಹಣವನ್ನು ಕೇಳುತ್ತಿದ್ದಾರೆ.
ಅಲ್ಲದೆ ಚಿತ್ರಮಂದಿರದವರು ಸಹ ಸಣ್ಣಪುಟ್ಟ ಸಿನಿಮಾಗಳಿಗೆ ಬಾಡಿಗೆ ರೂಪದಲ್ಲಿ ಮುಂಗಡ ಹಣವನ್ನು ಪಡೆಯುತ್ತಿದ್ದಾರೆ.
ಆದರೆ ನಿರ್ಮಾಪಕನಿಗೆ ಮಾತ್ರ ಒಂದೆ ಒಂದು ರೂಪಾಯಿ ಮರಳಿ ಬರುವ ಭರವಸೆಯಿಲ್ಲ!

ಪ್ರತಿಯೊಬ್ಬ ಸಣ್ಣ ಮತ್ತು ಮಧ್ಯಮ ನಿರ್ಮಾಪಕರು ಚಿತ್ರರಂಗ ಉಳಿಸಲು ಬಲಿಪಶು ಆಗುತ್ತಾರೆ
ನಮ್ಮ ಸಿನಿಮಾ ಗೆಲ್ಲುತ್ತದೆ ನಾವು ಗೆಲ್ಲುತ್ತೇವೆ ಎನ್ನುವ ಹುಚ್ಚುಧಾವಂತದಿಂದ ಒಬ್ಬರಿಗೊಬ್ಬರು ಬಿಡುಗಡೆ ಎಂಬ ಆತ್ಮಾಹುತಿಗೆ ತಯಾರಾಗಿದ್ದಾರೆ.
ಈಗಾಗಲೇ ಸಿನಿಮಾಗಳಿಗೆ ಡಬ್ಬಿಂಗ್ ಆಗಲಿ ಸ್ಯಾಟಲೈಟ್ ಹಕ್ಕುಗಳನ್ನು ಮತ್ತು ಆಡಿಯೋ ಹಕ್ಕುಗಳು ಕೇಳುವವರು ಯಾರು ಇಲ್ಲ. ಕೇಳಿದರೂ ಅಲ್ಲಿಂದ ಬರುವ ಹಣ ಪೋಸ್ಟರ್ ಹಚ್ಚುವುದಕ್ಕೆ ಸಾಕಾಗುವುದಿಲ್ಲ…

ಒಂದಂತೂ ಸತ್ಯ ಸಣ್ಣಪುಟ್ಟ ನಿರ್ಮಾಪಕರ ಕನಸುಗಳು ಸುಟ್ಟು ಅವರು ಸ್ವಯಂ ಆತ್ಮಾಹುತಿಗೆ ಈಡಾಗುತ್ತಾರೆ ಮತ್ತು ಬದುಕಿನಲ್ಲಿ ಜೀವನದ ಭರವಸೆಕಳೆದುಕೊಳ್ಳುವ ವ್ಯವಸ್ಥೆಗೆ ಬರುತ್ತಾರೆ. ಇವರ ಸಹಾಯಕ್ಕೆ ಯಾವ ಚಲನಚಿತ್ರ ಮಂಡಳಿಯಾಗಲೀ ಸಂಬಂಧಪಟ್ಟ ಸಂಸ್ಥೆಯಾಗಲಿ ಬರುವುದಿಲ್ಲ .

ಕಾರಣ ಇಷ್ಟೇ ಯಾರು ಆತುರಪಟ್ಟು ಸಿನಿಮಾಗಳನ್ನು ಜಿದ್ದಾಜಿದ್ದಿಯಿಂದ ತೆರೆಗೆ ತರಲು ಪ್ರಯತ್ನಿಸಬೇಡಿ ಸಮಯವನ್ನು ನೋಡಿಕೊಂಡು ಸರಿಯಾದ ಸಿದ್ಧತೆ ಮಾಡಿಕೊಂಡು ಸಿನಿಮಾವನ್ನು ಬಿಡುಗಡೆ ಮಾಡಬೇಕು
ಇಲ್ಲವಾದಲ್ಲಿ ನಿರ್ಮಾಪಕ ಖಂಡಿತವಾಗಿ ಆತ್ಮಾಹುತಿಗೆ ಬಲಿಯಾಗಿ ಬಣ್ಣದ ಕನಸುಗಳೋಂದಿಗೆ ಜೀವನವು ಕಮರಿ ಹೋಗುತ್ತಿದೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend