ಜಾನಪದ ಅಕಾಡೆಮಿ ಕಲಾವಿದರಿಗೆ ತವರುಮನೆ ಇದ್ದ ಹಾಗೆ – ಮಂಜಮ್ಮ ಜೋಗತಿ…!!!

Listen to this article

ಜಾನಪದ ಅಕಾಡೆಮಿ ಕಲಾವಿದರಿಗೆ ತವರುಮನೆ ಇದ್ದ ಹಾಗೆ – ಮಂಜಮ್ಮ ಜೋಗತಿ.

ಸಿಂಧನೂರು :ಸ.30.ಕರ್ನಾಟಕ ಜಾನಪದ ಅಕಾಡೆಮಿ ಕಲಾವಿದರಿಗೆ ತವರುಮನೆ ಇದ್ದ ಹಾಗೇ ಉಡುಗೊರೆಯನ್ನು ತವರುಮನೆಯಾದ ಜಾನಪದ ಅಕಾಡೆಮಿಯಿಂದಲೇ ಪಡೆಯಬೇಕು ಎಂಬುದು ಎಲ್ಲಾ ಕಲಾವಿದರ ಮಹದಾಸೆಯಾಗಿತ್ತು ಅದು ಇಂದು ನೇರವೇರಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷರು ಹಾಗೂ ಪದ್ಮಶ್ರೀ ಪುರಸ್ಕೃತ ರಾದ ಡಾ.ಮಾತಾ ಬಿ. ಮಂಜಮ್ಮ ಜೋಗತಿ ತಿಳಿಸಿದರು.

ಅವರು ಇಂದು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕನಕದಾಸ ಸಮುದಾಯ ಮಂಗಳ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ 2021ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ 18 ಅಕಾಡೆಮಿಯಲ್ಲಿ ಜಾನಪದ ಅಕಾಡೆಮಿಯು ಒಂದು, ಇದರಲ್ಲಿ 18 ಜನ ಸದಸ್ಯರನ್ನು ಒಳಗೊಂಡು 1980 ರಲ್ಲಿ ಪ್ರಾರಂಭ ಮಾಡಲಾಯಿತು. ಈ ಅಕಾಡೆಮಿಯು ಕಲಾವಿದರಿಗೆ ತರಬೇತಿ ಶಿಬಿರ, ಜಾನಪದ ಉತ್ಸವ, ತೊಗಲು ಗೊಂಬೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತಾ ತರಬೇತಿ ನೀಡುವ ಮೂಲಕ ಕಲಾವಿದರನ್ನು ಹುಟ್ಟು ಹಾಕಿದೆ. ಮತ್ತು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಕರ್ನಾಟಕ ಜಾನಪದ ಅಕಾಡೆಮಿಯು ಮಹಿಳೆಯರಿಗೆ, ಯುವಕರಿಗೆ ಹಾಗೂ 200 ಜೋಗತಿ ನೃತ್ಯ ತಂಡಗಳನ್ನು ರಚಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಾ ಬಂದಿದೆ.ಅಕಾಡೆಮೆಯ ಅಧ್ಯಕ್ಷೆ ಯಾದಾಗಲಿಂದ ಇದು ನಾಲ್ಕನೇ ಸಮಾರಂಭ,ಅದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾಡುವುದು ನನ್ನ ಮಹಾದಾಸೆಯಾಗಿತ್ತು ಅದು ಇಂದು ಕಲಾವಿದರ ಜೊತೆಗೆ ತಾಲೂಕಿನ ಜನ ಸಾಮಾನ್ಯರ, ಸಹಕಾರ ದಿಂದ ಅರ್ಥಗರ್ಭಿತವಾಗಿ ಕಾರ್ಯಕ್ರಮ ನಡೆದಿದೆ. ಅಧಿಕಾರ ಮತ್ತು ಪ್ರಶಸ್ತಿ ಪಡೆಯಬಹುದು ಎಂದು ತಿಳಿದು ಕಲಾವಿದರಾಗಲೂ ಬರಬೇಡಿ ನಮ್ಮ ದೇಶದ ಜಾನಪದ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಲು ಬನ್ನಿ ಎಂದರು.

ಡಾ.ಚೆಲುವರಾಜು ಬುಡಕಟ್ಟು ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಶಸ್ತಿ ಪುರಸ್ಕೃತ ರನ್ನು ಕುರಿತು ಮಾತನಾಡಿದರು. ಎನ್. ನಮ್ರತಾ ರಿಜಿಸ್ಟರ್ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಸ್ವಾಗತ ಮಾಡಿದರು. ಮೌಲಪ್ಪ ಮಾಡಸಿರವಾರ ನಿರೂಪಣೆ ಮಾಡಿದರು. ನಾರಾಯಣಪ್ಪ ಮಾಡಶಿರವಾರ ಸದಸ್ಯ ಸಂಚಾಲಕರು, ಕರ್ನಾಟಕ ಜಾನಪದ ಅಕಾಡೆಮಿ ರಾಯಚೂರು ಪ್ರಾಸ್ತಾವಿಕ ಮಾತನಾಡಿದರು.

ಕರ್ನಾಟಕದ ಜಿಲ್ಲೆಗೊಬ್ಬರಂತೆ 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು ವಿವಿಧ 30 ಜನ ಕಲಾವಿದರು, 2 ಜನ ತಜ್ಞ ಪ್ರಶಸ್ತಿ ಪುರಸ್ಕೃತರು 2 ಜನ ಪುಸ್ತಕ ಬಹುಮಾನಿತರು ಒಟ್ಟು 34 ಜನ ಆಯ್ಕೆಯಾದ ಕಲಾವಿದರಿಗೆ ಗೌರವ ಪ್ರಶಸ್ತಿ ಹಾಗೂ ನಗದು ಮೊತ್ತ 25 ಸಾವಿರ ರೂ. ಹಾಗೂ ವಿಶೇಷ ಪ್ರಶಸ್ತಿಯ ನಗದು ಮೊತ್ತ 50 ಸಾವಿರ ರೂ ನೀಡಿ ಗೌರವಿಸಿದರು.

ಅಲಗಿ ಮೇಳ, ಆಗಲು ವೇಷ, ಡೊಳ್ಳು ಕುಣಿತ ಲಂಬಾಣಿ ನೃತ್ಯ, ನಂದಿಕೋಲು, ಚಿಲಿಪಿಲಿ ಗೊಂಬೆ,ಸಿಂಗಾರಿ ಮೇಳ, ಹೆಜ್ಜೆ ಮೇಳ, ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಬ್ಯಾಂಜ್ ಮೇಳ ಇನ್ನಿತರ ಕಲಾತಂಡಗಳು ನಗರಸಭೆಯಿಂದ ಪ್ರಾರಂಭವಾಗಿ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಜಾನಪದ ಅಕಾಡೆಮಿ ಅಧ್ಯಕ್ಷರು ಹಾಗೂ ಪದ್ಮಶ್ರೀ ಪುರಸ್ಕೃತ ರಾದ ಡಾ.ಮಾತಾ ಬಿ. ಮಂಜಮ್ಮ ಜೋಗತಿಯವರು ಕುಳಿತಿರುವ ಬೆಳ್ಳಿ ರಥದೊಂದಿಗೆ ಪ್ರಮುಖ ವೃತ್ತಗಳ ಮೂಲಕ ಕನಕದಾಸ ಸಮು ದಾಯ ಮಂಗಳ ಭವನದವರೆಗೆ ಕಲಾ ತಂಡಗಳು ಭಾಗವಹಿಸಿ ನೋಡುಗರ ಕಣ್ಮನ ಸೆಳೆದವು. ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನಗರಸಬೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಅನೇಕ ಗಣ್ಯ ಮಾನ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಚಂದ್ರ ಶೇಖರ ಹಿರೇಮಠ, ಶಿವನಗೌಡ ಗೋರೆಬಾಳ, ನೀರುಪಾದಿ ಜೋಳದರಾಶಿ,ಶರಣಪ್ಪ ಟೆಂಗಿನಕಾ ಯಿ,ಡಿ.ಎಚ್. ಕಂಬಳಿ, ನಾಗರಾಜ ಬೊಮ್ಮನಾಳ, ಸಿದ್ರಾಮಪ್ಪ ಸಾಹುಕಾರ ಮಾಡಶಿರವಾರ, ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend