ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆದ 50ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ…!!!

Listen to this article

ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆದ 50ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ.

ಸಿಂಧನೂರು : ಜುಲೈ 1.ನಗರದ ಪ್ರವಾಸಿ ಮಂದಿರದಿಂದ ಮಠಾಧೀಶರು, ವಿವಿಧ ಪಕ್ಷದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು, ವಿಧ್ಯಾರ್ಥಿಗಳು ಬೇಕೆ ಬೇಕು ಏಮ್ಸ್ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ಮಿನಿ ವಿಧಾನಸೌಧದ ಮುಂಭಾಗದಲ್ಲಿ ರಾಯಚೂರು ಜಿಲ್ಲೆಯಲ್ಲಿ ನಡೆದ 50 ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಇಂದು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಡಿ.ಎಚ್.ಕಂಬಳಿ ಮಾತನಾಡಿ ಸಿಂದ್ರಾಮಯ್ಯ ಮುಖ್ಯಮಂತ್ರಿ ಇದ್ದಾಗ ಐಐಟಿ ಸ್ಥಾಪನೆ ಮಾಡಲು ಕೇಳಿದಾಗ, ಮೂರು ಜಿಲ್ಲೆಗಳನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆ ಈ ಹಿಂದೆ ಐಐಟಿ ನಮ್ಮ ಜಿಲ್ಲೆಯಿಂದ ಕೈ ತಪ್ಪಿತ್ತು, ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿಲಾಗಿತ್ತು, ಐಐಟಿಯಿಂದ ವಂಚಿತರಾಗಿರುವ ರಾಯಚೂರಿಗೆ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವದಾಗಿ ಭರವಸೆ ನೀಡಿದ್ದರು, ಆದರೆ ಬಸವರಾಜ ಬೊಮ್ಮಾಯಿಯವರು ದಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ, ಇದು ರಾಯಚೂರು ಜಿಲ್ಲೆಗೆ ಮತ್ತೊಮ್ಮೆ ಮಾಡಿದ ಮಹಾಮೋಸ ಆದರೆ ನಮ್ಮ ಭಾಗದ ಯಾವೊಬ್ಬ ಶಾಸಕರು ಅನ್ಯಾಯವನ್ನು ಖಂಡಿಸಿಲ್ಲ,ಇದು ಇಡೀ ಜಿಲ್ಲೆಗೆ ಮಾಡಿದ ಮಹಾ ದ್ರೋಹವಾಗಿದೆ ಎಂದರು.

ಮಸೀದಿ, ಮಂದಿರ ಬೇಕು ಎಂದು ಹೇಳಿ ಹೋರಾಟ ಮಾಡುವ ಬದಲು ಏಮ್ಸ್ ಗಾಗಿ ಹೋರಾಟ ಮಾಡಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣವಾಗುವುದು. 76% ಗರ್ಭಿಣಿ ಸ್ತ್ರೀಯರಿಗೆ ರಕ್ತ ಹೀನತೆಯಿಂದ, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಪ್ರತಿಯೊಂದು ಚಿಕಿತ್ಸೆಗಾಗಿ ಏಮ್ಸ್ ಆಗುವುದರಿಂದ ಬೇರೆ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ತಪ್ಪುವುದು, 5 ರಿಂದ 6 ಸಾವಿರ ಉದ್ಯೋಗಗಳು ಸಿಗುವುದು, 371 ಜೆ ಯಿಂದ ತಾಲೂಕಿನಲ್ಲಿ 270 ಜನ ಮೆಡಿಕಲ್ ವಿಧ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ದೊರಕಿದೆ. ರಾಜಕೀಯ ನಾಯಕರಿಗೆ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಭಾಗಕ್ಕೆ ಅನ್ಯಾಯವಾಗುತ್ತಿದೆ. ಆರೋಗ್ಯ ಸಚಿವ ಸುಧಾಕರ ಚಿಕ್ಕಬಳ್ಳಾಪುರ ಕ್ಕೆ ತೆಗೆದುಕೊಂಡು ಹೋಗಿದ್ದಾರೆ, ಆದರೆ ಅವರು ಜಿಲ್ಲೆಯ ಸಚಿವರಲ್ಲ ರಾಜ್ಯದ ಸಚಿವರೆಂದು ತಿಳಿದುಕೊಳ್ಳಬೇಕು ಎಂದರು.

ಜಾತಿ ಹೋರಾಟಕ್ಕೆ ಬಹಳಷ್ಟು ಜನ ಸೇರುತ್ತಾರೆ, ಆದರೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂತಹ ಹೋರಾಟಕ್ಕೆ ಯಾಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ನಡೆದಿರುವ ನಿರಂತರ ಹೋರಾಟದ ಜೊತೆ ಡಾ. ಶಿವರಾಜ ಪಾಟೀಲ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಮಾಜಿ ಹಾಗೂ ಹಾಲಿ ಶಾಸಕರು, ಸಂಸಧರು, ಎಲ್ಲಾ ಪಕ್ಷದ ಮುಖಂಡರ ಹಾಗೂ ಹೋರಾಟದ ಪ್ರಮುಖ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗಿ ಚರ್ಚೆ ಮಾಡಿ ಅವರಿಗೆ ಜಿಲ್ಲೆಯ ಹೆಸರು ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಲು ತಿಳಿಸುವ ಪ್ರಯತ್ನ ಮಾಡೋಣ ಎಂದು ಬಸವರಾಜ ನಾಡಗೌಡ ತಿಳಿಸಿದರು.

ಸ್ವತಂತ್ರ ಪೂರ್ವದಲ್ಲಿ ಹಾಗೂ ಸ್ವತಂತ್ರ ನಂತರ ನಮ್ಮ ಕಲ್ಯಾಣ ಕರ್ನಾಟಕದ ಭಾಗಕ್ಕೆ ಅನ್ಯಾಯವಾಗುತ್ತಿದೆ.ಕ.ಕ.ಭಾಗದಲ್ಲಿ ಎರಡು ಜನ ಮುಖ್ಯಮಂತ್ರಿಗಳಾಗಿದ್ದಾಗಲೂ ಅಬಿವೃದ್ಧಿ ಮಾಡಲಿಲ್ಲ.ಸರ್ಕಾರದಲ್ಲಿ ಮೈಸೂರು ಭಾಗದ ಹಿರಿಯ ಅಧಿಕಾರಿಗಳು ಇರುವುದರಿಂದ ತಮ್ಮ ಭಾಗಕ್ಕೆ ಹೆಚ್ಚು ಸೌಲಭ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ.ನಾವು ಎಲ್ಲಾ ರೀತಿಯ ಕೊರತೆಯಿಂದಲೂ ಹಿಂದೆ ಇದ್ದೇವೆ.ಯಾವುದೆ ಸರ್ಕಾರವಿದ್ದರು ಚುರುಕು ಮುಟ್ಟಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿದರು.

ಬಸನಗೌಡ ಬಾದರ್ಲಿಯವರು ನಾವು ಯಾವುದೇ ನಿಯೋಗ ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗುವುದು ಬೇಡ, ಪಕ್ಷಾತೀತವಾಗಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪಕ್ಷದಲ್ಲಿರುವ ಪ್ರಮುಖ ಹುದ್ದೆಯಲ್ಲಿರುವ ನಾಯಕರು ರಾಜೀನಾಮೆ ನೀಡಲಿ ಅಂದಾಗ ಮಾತ್ರ ನಮ್ಮಲ್ಲಿಗೆ ಮುಖ್ಯಮಂತ್ರಿ ಓಡಿ ಬರುತ್ತಾರೆ.ಈ ಹೋರಾಟ ಯಾವ ಪಕ್ಷದ ವಿರುದ್ಧ ಅಲ್ಲಾ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ರಂಬಾಪೂರಿ ಮಠದ ಸೋಮನಾಥ ಶ್ರೀಗಳು, ಯಾದ್ದಲದೊಡ್ಡಿ ಯಲ್ಲಾಲಿಂಗ ಶ್ರೀಗಳು,ರೌಡಕುಂದ ಶ್ರೀಗಳು,ಮಾಧಯ್ಯ ಗುರುವಿನ ಸೇರಿದಂತೆ ಇನ್ನಿತರ ಸ್ವಾಮಿಜಿಗಳು,ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆ. ಕರಿಯಪ್ಪ, ಮಲ್ಲಿಕಾರ್ಜುನ ಪಾಟೀಲ್, ಮೂರ್ತಜಾ ಹುಸೇನ್, ಶೇಕರಪ್ಪ ಗಿಣಿವಾರ, ಮುನೀರ್ ಪಾಶ, ಎಚ್.ಪಾಷಾ, ಜೀಲಾನಿ ಪಾಶ , ದೌವಲಸಾಬ್ ದೊಡ್ಡಮನಿ, ಸುರೇಶ ಕಟ್ಟಿಮನಿ, ಮೌನೇಶ ದೊರೆ, ಗಂಗಣ್ಣ ಡಿಶ್, ಜೆ.ರಾಯಪ್ಪ ವಕೀಲ,ಶರಣಪ್ಪ ಮಳ್ಳಿ, ಖಾಜಿ ಮಲಿಕ್ ದೇವೇಂದ್ರಗೌಡ, ಹುಸೇನಸಾಬ್, ಹನುಮೇಶ ಬಾಗೋಡಿ, ನಿರುಪಾದೆಪ್ಪ ಗುಡಿಹಾಳ, ಅಭಿಷೇಕ ನಾಡಗೌಡ, ಅಲ್ಲಮಪ್ರಭು , ಭೀಮೇಶ ಕವಿತಾಳ,ಸರಸ್ವತಿ ಪಾಟೀಲ,ನಾಗವೇಣಿ ಪಾಟೀಲ್, ದ್ರಾಕ್ಷಾಯಿಣಿ, ಸನ್ ರೈಸ್ ಕಾಲೇಜು ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಶಿರೀಲ್, ಹಾಗೂ ವಿದ್ಯಾರ್ಥಿಗಳು, ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆದ 50ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend