ಮುನಿರಾಬಾದ್‌ನಲ್ಲಿ ವಿಶಿಷ್ಟ ಪ್ರತಿಭಟನೆ…!!!!

Listen to this article

ಮುನಿರಾಬಾದ್‌ನಲ್ಲಿ ವಿಶಿಷ್ಟ ಪ್ರತಿಭಟನೆ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವಿಭಿನ್ನ ರೀತಿಯಲ್ಲಿ ಅಧಿಕಾರಿಗಳ, ಶಾಸಕರ, ಹಾಗೂ ಸಂಸದರ ಗಮನ ಸೆಳೆದ ಆಕ್ರೋಶ ವ್ಯಕ್ತ ಪಡಿಸಿದ ಸಾರ್ವಜನಿಕರು.

ಹೌದು, ಮುನಿರಾಬಾದ್ ಗ್ರಾಮದಲ್ಲಿ ರಸ್ತೆಯ ದುರಸ್ಥಿ ಬಗ್ಗೆ ಗ್ರಾಮಸ್ಥರು ವಾಹನ ಸವಾರಿಗಳ ಹತ್ತಿರ ಕೇವಲ ಒಂದು ರೂಪಾಯಿ ಹಣ ಭಿಕ್ಷೆ ಬೇಡುವ ಮುಖಾಂತರ ಎಲ್ಲರ ಗಮನ ಸೆಳೆದಿದ್ದಾರೆ!

ಕಳೆದ ನಾಲ್ಕು ವರ್ಷದಿಂದ ಸತತವಾಗಿ ಸಂಬಂಧಪಟ್ಟ ಅಧಿಕಾರಿಗಳು, ಪಿ ಡಬ್ಲ್ಯೂ ಡಿ ಅಧಿಕಾರಿಗಳಿಗೆ ರಸ್ತೆ ದುರಸ್ತಿಯ ಬಗ್ಗೆ ಸಂಘ ಸಂಸ್ಥೆಗಳಿಂದ ಮನವಿ ಮಾಡಿದರು ಸಹ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.

ಸಾರ್ವಜನಿಕರು ಹೇಳುವ ಪ್ರಕಾರ ಪ್ರತಿಸತೇ ಕೇವಲ ಅಧಿಕಾರಿಗಳು ಹುತ್ತಿಗೆದಾರರ ಜೊತೆ ಸೇರಿ ರಸ್ತೆ ದುರಸ್ಥಿ ನೆಪದಲ್ಲಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರಸ್ತೆಯು ಮುನಿರಾಬಾದಿನ ಮುಖ್ಯ ರಸ್ತೆ ವಾಗಿದ್ದು ,ಬಸ್ ಸ್ಟಾಂಡ್ ಹತ್ತಿರ ದಲ್ಲಿಯೇ ಕೆಟ್ಟು ಹೋಗಿರುತ್ತದೆ, ಮುನಿರಾಬಾದ್ ಡ್ಯಾಮ್ ಗ್ರಾಮದಲ್ಲಿರುವ ಆಸ್ಪತ್ರೆಗೆ, ಶಾಲೆಗಳಿಗೆ ವಿದ್ಯಾರ್ಥಿಗಳು ಹಾಗೂ ನೀರಾವರಿ ನಿಗಮದ ಕಚೇರಿಗಳಾಗಿರಬಹುದು, ಜೆಸ್ಕಾಂ ಕಛೇರಿ ಗಳಾಗಿರಬಹುದು, ಕಾಡ ಕಚೇರಿ ಆಗಿರಬಹುದು, ಈ ರೀತಿಯ ಕಚೇರಿಗಳಿಗೆ ಅಕ್ಕಪಕ್ಕದ ಹಳ್ಳಿಯ ಸಾರ್ವಜನಿಕರು ದಿನನಿತ್ಯ ಓಡಾಡುವ ಮುಖ್ಯ ರಸ್ತೆ.

ಹಾಗೆಯೇ ಮುನಿರಾಬಾದ್ ಡ್ಯಾಮ್ ನಲ್ಲಿರುವ ಅಣೆಕಟ್ಟನ್ನು, ಪಂಪವನ ಉದ್ಯಾನವನವನ್ನು ವೀಕ್ಷಿಸಲು ಹೊರ ರಾಜ್ಯದ ಪ್ರವಾಸಿಗರು ಸಹ ಹೆಚ್ಚಾಗಿ ಬಳಸುವಂತಹ ರಸ್ತೆಯಾಗಿದೆ, ಇಂತಹ ರಸ್ತೆಯು ಹದಗೆಟ್ಟು ಹೋಗಿರುವುದರಿಂದ ಸಾರ್ವಜನಿಕರು ಬೇಸತ್ತು ಇಂದು ರಸ್ತೆಯ ಮೇಲೆ ಓಡಾಡುತ್ತಿರುವಂತಹರ ಹತ್ತಿರ ಕೇವಲ ಒಂದು ರೂಪಾಯಿಯನ್ನು ಭಿಕ್ಷೆ ಬೇಡುವ ಮುಖಾಂತರ ಈ ಹೋರಾಟವನ್ನು ಮಾಡಿದ್ದಾರೆ.

ಸತತವಾಗಿ ಅಧಿಕಾರಿಗಳ ಹತ್ತಿರ ರಸ್ತೆ ದುರಸ್ತಿ ಬಗ್ಗೆ ಮಾತಾಡಿದಾಗೆಲ್ಲ ಯಾವುದೇ ಅನುದಾನವಿಲ್ಲ, ಅನುದಾನ ಬಂದ ತಕ್ಷಣ ನಾವು ರಸ್ತೆ ದುರಸಿ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿರುತ್ತಾರೆ.

ಈ ಮಾತನ್ನು ಕೇಳಿ ಬೇಸತ್ತ ಜನರು ಒಂದು ರೂಪಾಯಿ ಭಿಕ್ಷೆಯನ್ನು ಪಡೆದು ಎಲ್ಲರ ಗಮನ ಸೆಳೆದಿದ್ದಾರೆ, ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸುವ ಕೆಲಸ ಮಾಡದಿದ್ದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ…

ವರದಿ. ಜಾವಿದ್ ಮುನಿರಾಬಾದ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend