ಹನ್ಸ- ಎನ್‌ಜಿ’ ಎಂಬ 2 ಆಸನ ಸಾಮರ್ಥ್ಯದ ತರಬೇತಿ ವಿಮಾನದ ಯಶಸ್ವಿ ಪ್ರಯೋಗ…!!!

Listen to this article

ದಿಲ್ಲಿಯ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನ ಮಂಡಳಿ (ಸಿಎಸ್‌ಐಆರ್‌) ಹಾಗೂ ಬೆಂಗಳೂರಿನ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟ ರೀಸ್‌ (ಎನ್‌ಎಎಲ್‌) ಜಂಟಿಯಾಗಿ ತಯಾರಿಸಿರುವ “ಹನ್ಸ- ಎನ್‌ಜಿ’ ಎಂಬ 2 ಆಸನ ಸಾಮರ್ಥ್ಯದ ತರಬೇತಿ ವಿಮಾನದ ಯಶಸ್ವಿ ಪ್ರಯೋಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಕ್ಷಣ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಏರೋ ನಾಟಿಕಲ್‌ ಪರೀಕ್ಷಾ ವಲಯದಲ್ಲಿ (ಎಟಿಆರ್‌) ಬುಧವಾರ ನಡೆಯಿತು.
8 ಸಾ.ಅಡಿ ಎತ್ತರದಲ್ಲಿ ಹಾರಾಟ
ಏರ್‌ಕ್ರಾಫ್ಟ್‌ಆಯಂಡ್‌ ಸಿಸ್ಟಮ್ಸ್‌ ಟೆಸ್ಟಿಂಗ್‌ ಎಸ್ಟಾಬ್ಲಿಷ್‌ ಮೆಂಟ್‌ (ಎಎಸ್‌ಟಿಇ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿಂಗ್‌ ಕಮಾಂಡರ್‌ಗಳಾದ ಕೆ.ವಿ. ಪ್ರಕಾಶ್‌ ಹಾಗೂ ಎನ್‌ಡಿಎಸ್‌ ರೆಡ್ಡಿ ಈ ವಿಮಾನವನ್ನು ಪರೀಕ್ಷೆಗೆ ಒಳಪಡಿಸಿದರು. ಇವರು ವಿಮಾನವನ್ನು ಭೂಮಿಯಿಂದ 7ರಿಂದ 8 ಸಾವಿರ ಅಡಿ ಎತ್ತರಕ್ಕೆ ಕೊಂಡೊಯ್ದು, ಅಲ್ಲಿ ಗಂಟೆಗೆ 60ರಿಂದ 70 ನಾಟ್‌ ವೇಗದಲ್ಲಿ ಚಲಾಯಿಸಿದರು.

ಇದರ ಇಂಧನ ಕ್ಷಮತೆ ಹೆಚ್ಚಾಗಿದೆ. ಅಲ್ಲದೆ ಇದರ ನಿರ್ವಹಣ ವೆಚ್ಚವೂ ಕಡಿಮೆಯಾಗಿದ್ದು, ಇದನ್ನು ವಾಣಿಜ್ಯ ಉದ್ದೇಶಕ್ಕೂ ಬಳಸಬಹುದು. ಆದ್ದರಿಂದಕ್ಕೆ ಇದಕ್ಕೆ ಬೇಡಿಕೆ ಸಲ್ಲಿಸಿ ದೇಶದ ಹಲವಾರು ಫ್ಲೈಯಿಂಗ್‌ ಕ್ಲಬ್‌ಗಳು ಕೇಂದ್ರಕ್ಕೆ ಪತ್ರ ಬರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಪ್ರಮುಖ ಹಂತವಿದು!
ಈ ವಿಮಾನವನ್ನು ಅಧಿಕೃತ ತರ ಬೇತಿ ಗಾಗಿ ಬಳಸಬೇಕೆಂದರೆ ಅದಕ್ಕೆ ನಾಗರಿಕ ವಿಮಾನ ಸೇವೆಗಳ ಮಹಾ ನಿರ್ದೇಶಕರ ಕಚೇರಿಯಿಂದ (ಡಿಜಿಸಿಎ) ಅನುಮತಿ ಪತ್ರ ಅಗತ್ಯ. ಆ ಅನುಮತಿ ಸಿಗಬೇಕಿದ್ದರೆ ಈ ಪರೀಕ್ಷೆ ಅಗತ್ಯವಾಗಿತ್ತು. ಅದರಲ್ಲೂ, ವಿಮಾನವು ಹಾರಾಡುತ್ತಿರುವಾಗಲೇ ಇದರ ಎಂಜಿನ್‌ನ ಇನ್‌-ಫ್ಲೈಟ್‌ ಡಿಲೈಟ್‌ ಎಂಬ ಪರೀಕ್ಷೆ ನಡೆಸಲಾಗುತ್ತದೆ. ಅದು ತುಂಬಾ ನಿರ್ಣಾಯಕ ಹಂತದ್ದು ಎಂದು ಹೇಳಲಾಗಿದೆ. ಆ ಎಲ್ಲ ದೃಷ್ಟಿಯಿಂದ, ಪರೀಕ್ಷೆಯಲ್ಲಿ ಇದು ಉತ್ತೀರ್ಣವಾಗಿರುವುದೊಂದು ಮೈಲುಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ…

 

ವರದಿ.ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend