ಕೂಡ್ಲಿಗಿ:ಅವ್ಯವಸ್ಥೆಯ ಆಗರ,ಡಾ ಬಿ.ಆರ್.‍ಅಂಬೇಡ್ಕರ್ ಬಾಲಕರ ವಸತಿ ಶಾಲೆ…!!!

Listen to this article

ಕೂಡ್ಲಿಗಿ:ಅವ್ಯವಸ್ಥೆಯ ಆಗರ,ಡಾ ಬಿ.ಆರ್.‍ಅಂಬೇಡ್ಕರ್ ಬಾಲಕರ ವಸತಿ ಶಾಲೆ ಮತ್ತು ಡಾ ಬಿ.ಆರ್.‍ಅಂಬೇಡ್ಕರ್ ಬಾಲಕೀಯರ ವಸತಿ ಶಾಲೆ.ನಿಮ್ಮ ಮಕ್ಕಳನ್ನು ಇಂತಹದರಲ್ಲಿರಿಸುವಿರಾ.!? ನಿಮ್ಮ ಮನೆನಾ ಹೀಗೆ ನೋಡಿಕೊಳ್ಳುತ್ತೀರಾ.!?-ಹಾಸ್ಟೆಲ್ ಮೇಲ್ವಿಚಾರಕರನ್ನ ತರಾಟೆ ತೆಗೆದುಕೊಂಡ ನ್ಯಾಯಾಧೀಶರು. ದುರ್ವಾಸನೆಯಲ್ಲಿರುವ ಬ‍ಾಲಕರ ಹಾಗೂ ಬಾಲಕೀಯರ ವಸತಿ ಶಾಲೆಗಳು, ಮುಳ್ಳು ಕಂಟಿಗಳಿಂದ ಆವೃತಗೊಂಡಿರುವ ವಸತಿ ಶಾಲೆಗಳು, ಬಾಲಕರ ಹಾಗೂ ಬಾಲಕಿಯರಿಗೆ ಬರ್ಹಿದೆಸೆಗೆ ಬಯಲೇ ಗತಿ, ಕ್ರಿಮಿ ಕೀಟಗಳು ವಿಷಜಂತುಗಳೇ ಎರೆಡೂ ವಸತಿ ನಿಲಯಗಳಿಗೆ ಅತಿಥಿಗಳು, ನಿರ್ಲಕ್ಷ್ಯಧೊರಣೆಯ ಮೇಲ್ವಿಚಾರಕರಿಗಿದೆಯಂತೆ ಪ್ರಭಾವಿ ರಾಜಕಾರಣಿಗಳ ಕೃಪಕಟಾಕ್ಷ.!?,  ವಸತಿ ನಿಲಯದ ‍ಅಂಗಳದಲ್ಲಿದ್ದು,ಬಲಿಗಾಗಿ ಕಾದು ಕುಳಿತಿರುವ ಕೊಳಚೆತುಂಬಿದ ಬೃಹತ್ ನೀರಿನ ಗುಂಡಿ, ಬೆಧರುಗೊಂಬೆಗಳಂತಾಗಿರುವ ಇಲಾಖಾ ಉನ್ನತಾಧಿಕಾರಿಗಳು, ನಿರ್ಲಕ್ಷ್ಯ ಧೋರಣೆಯ ಎರೆಡೂ ವಸತಿ ಶಾಲೆಗಳ ಮೇಲ್ವಿಚಾರಕರನ್ನು ಬದಲಿಸುವ ಧೈರ್ಯ ಇಲಾಖಾಧಿಕಾರಿಗಿದೆಯಾ.!? ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬಳ್ಳಾರಿ ರಸ್ತೆಯ ತೋಟವೊಂದಲ್ಲಿರುವ,ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿಯ ಅವ್ಯವಸ್ಥೆ ಕಂಡು ಕೆಂಡ ಮಂಡಲವಾದ ಕೂಡ್ಲಿಗಿ ನ್ಯಾಯಾಧೀಶರು.. *ಕೂಡ್ಲಿಗಿ ಹಿರಿಯಶ್ರೇಣಿ ನ್ಯಾಯಾಧೀಶರ‍ದ ಕೆ.ಎ.ನಾಗೇಶ, ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ರವರು ಭೆಟ್ಟಿ ಪರಿಶೀಲನೆ. * ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು, ಪಟ್ಟಣದಲ್ಲಿರುವ ಡಾ ಬಿ.ಆರ್.‍ಅಂಬೇಡ್ಕರ್ ವಸತಿ ಶಾಲೆಗೆ,ದಿಢೀರ್ ಬೆಟ್ಟಿನೀಡಿ ಪರಿಶೀಲಿಸಿದರು. ಮೂಗು ತೆಗೆಯದಂತಹ ದುರ್ವಾಸನೆ ತುಂಬಿದ ವಾತಾವರಣದಲ್ಲಿ ಎರೆಡು ವಸತಿ ನಿಲಯಗಳು, ನೈರ್ಮಲ್ಯತೆ ಕಾಣದಂತಹ ದುಸ್ಥಿತಿಯಲ್ಲಿರುವ ವಸತಿ ನಿಲಯಗಳು ,ಕಂಡು ಅವರು ಧಂಗಾಗಿ ಹೋದ ನ್ಯಾಯಾಧೀಶರು. ಕೂಡಲೇ ಹಾಸ್ಟೆಲ್ ಮೇಲ್ವಿಚಾರಕರನ್ನ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು, ಮಕ್ಕಳು ಬರ್ಹಿದೆಸೆ ಹಾಗೂ ಶೌಚಕ್ಕೆ ಹೋರ ಹೋಗುತ್ತಿರುವುದನ್ನು ಕಂಡ ಅವರು. ಮೇಲ್ವಿ ಚಾರಕರ ಮುಖಕ್ಕೆ ಮಂಗಳಾರತಿ ಎತ್ತಿದರಲ್ಲದೇ ವಾರದೊಳಗೆ ವ್ಯವಸ್ಥೆಯಾಗಿದಿದ್ದಲ್ಲಿ, ಶಿಸ್ಥು ಕ್ರಮಕ್ಕೆ ಸೂಚಿಸಲಾಗುವುದೆಂದು ಇಬ್ಬರು ನ್ಯಾಯಾಧೀಶರು ಎಚ್ಚರಿಸಿದರು.ವಸತಿ ನಿಲಯದ ಅಂಗಳಕ್ಕೆ ಹೊಂದಿಕೊಂಡಂತೆ ದೊಡ್ಡದಾದ ಕೊಳವಿದ್ದು,ಅದು ಕಸ ತುಂಬಿ ಕೊಳೆತು ನಾರುತ್ತಿದೆ ಸೊಳ್ಳೆ ಕ್ರಿಮಿಕೀಟಗಳ ಬಾಧೆ ನಿತ್ಯವಿದೆ.ವಸತಿ ನಿಲಯದ ಸುತ್ತ ಮುತ್ತ ಮುಳ್ಳು ಕಳ್ಳಿಗಳಿದ್ದು, ಮಕ್ಕಳು ನಿತ್ಯ ತಮ್ಮ ಜೀವವನ್ನು ಕೈಯಲ್ಲಿರಿಸಿಕೊಂಡಿರುತ್ತಾರೆಂದು ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. ವಸತಿ ನಿಲಯದ ಮೇಲ್ವಿಚಾರಕರು ನಿರ್ಲಕ್ಷ್ಯಧೋರಣೆ ತಾಳುತ್ತಿದ್ದಾರೆ,ತಮಗೆ ಮಿನಿಸ್ಟರ್ ಈಶ್ವರಪ್ಪ ಆತ್ಮೀಯರಾಗಿದ್ದಾರೆಂದು ಬೊಬ್ಬೆಹೊಡೆಯುತ್ತಿದ್ದಾರಂತೆ. ಹಾಗಾಗಿ ನಿರ್ಲಕ್ಷ್ಯ ಧೋರಣೆಯ ಮೇಲ್ವಿಚಾರಕರ ವಿರುದ್ಧ, ಸಂಬಂಧಿಸಿದಂತೆ ಇಲ‍ಖಾಧಿಕಾರಿಗಳು ಶಿಸ್ಥು ಕ್ರಮ ಕೈಗೊಳ್ಳುತ್ತಿಲ್ಲವಂತೆ. ಹಾಗೆಂದು ಕೆಲ ನೊಂದ ಮಕ್ಕಳ ಪೋಷಕರು ದೂರಿದ್ದಾರೆ,ಕಾರಣ ಜಿಲ್ಲಾಧಿಕಾರಿಗಳು ವಸ್ಥು ಸ್ಥಿತಿಯನ್ನರಿತು ಪರಿಶೀಲಿಸಬೇಕಿದೆ, ಶೀಘ್ರವೇ ತಪ್ಪತಸ್ಥರ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕಿದೆ ಎಂದು.ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಮೂಲಕ ಒತ್ತಾಯಿಸಿದ್ದಾರೆ….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend