ಮಕರ ಸಂಕ್ರಮಣ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು…!!!

Listen to this article

ಮಕರ ಸಂಕ್ರಮಣ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು, ಮಕ್ಕಳು ತುಂಬಾ ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರ‍ಾಗಿದ್ದಾರೆ.ಬೆಳ್ಳಂಬೆಳಿಗ್ಗೆ ದೈನಂದಿನ ಕಾರ್ಯಗಳನ್ನು ಪೂರೈಸಿ ಶುಭ್ರವಾದ ದಿರಿಸುಗಳನ್ನು ಧರಿಸಿದ ಮಕ್ಕಳು,ತಮ್ಮ ತಮ್ಮ ಮನೆಗಳಿಂದ ಸಕ್ಕರೆ ಉರಿದ ಕಡಲೆ ಹಾಗೂ ಎಳ್ಳು ಮಿಶ್ರಿತ ಅಥವಾ ಬೆಲ್ಲ ಎಳ್ಳು ಹಾಗೂ ಉರಿದಕಡಲೆ ಮಿಶ್ರಿತ ಪಾದಾರ್ಥವನ್ನು.ಬಟ್ಟಲಿನಲ್ಲಿ ತುಂಬಿಕೊಂಡು ಮನೆ ಮನೆಗೆ ತೆರಳಿ ಮೆನೆಯ ಮಂದಿಗೆಲ್ಲ ಸಿಹಿ ಹಂಚಿದ್ದಾರೆ,ಈ ಮೂಲಕ ಮಕ್ಕಳು ಸಾಮೂಹಿಕವಾಗಿ ಸಿಹಿ ಹಂಚಿ ಸರ್ವರಿಗೂ ಶುಭಕೋರಿದ್ದಾರೆ. ಶ್ರಿಪೇಟೆಬಸವೇಶ್ವರ ನಗರದ ಮಕ್ಕಳು ಈ ಮೂಲಕ ಪಟ್ಟಣದೆಲ್ಲೆಡೆಗಳಲ್ಲಿ, ಮಕರ ಸಂಕ್ರಾಂತಿ ಸಿಹಿಯನ್ನು ಹಂಚುವ ಮೂಲಕ ಸರ್ವರಿಗೂ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಲ್ಲಿಯ ಮಕ್ಕಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳೋದರ ಮೂಲಕ ಪರಸ್ಪರ ಶುಭಕೋರಿ ಸೌಹಾರ್ಧತೆ ಮೆರೆದರು,ತಾವು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಸಿಹಿಯನ್ನು.ಎಲ್ಲರೂ ಒಟ್ಟಾಗಿ ಗಲ್ಲಿಯ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿ ಹಂಚಿ ಶುಭ ಕೋರಿದ್ದಾರೆ,ದಾರಿಯಲ್ಲಿ ಎದುರಾದ ಪ್ರತಿಯೊಬ್ಬ ರಿಗೂ ಸಿಹಿ ಸಂಕ್ರಾಂತಿ ಶುಭ ಕೋರಿ ವೈಶಿಷ್ಟ್ಯತೆ ಮೆರೆದರು.ಈ ಮೂಲಕ ಮಕ್ಕಳು ಪಟ್ಟಣ ಮಾತ್ರವಲ್ಲ,ತಾಲೂಕಿನ ಮಾಡಿನ ಸಮಸ್ತ ಯುವಪೀಳಿಗೆಗೆ ಮಾದರಿಯಾಗಿದದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend