ಕೂಡ್ಲಿಗಿ:ರೈತರಿಂದ ರೈತರಿಗಾಗಿ ರಾಷ್ಟ್ರೀಯ ರಹದಾರಿ ಬಂದ್…

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ರೈತರಿಗಾಗಿ ರೈತರಿಂದ ರಾಷ್ಟ್ರೀಯ ರಹದಾರಿ-ಬಂದ್* <>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿಂದು,ರೈತರಿಗೆ ಹಾಗೂ ಕಾರ್ಮಿಕರಿಗೆ ಮಾರಕ ಎನ್ನಲಾದ ಕಾಯ್ದೆಗಳನ್ನು.ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ರೈತರಿಂದ ಬೆಂಬಲ ವ್ಯಕ್ತಪಡಿಸಲಾಯಿತು.
ಕೂಡ್ಲಿಗಿ ಯಲ್ಲಿಂದು ಕರ್ನಾಟಕ ರೈತ ಸಂಘ(ಉಚ್ಚವ್ವನಳ್ಳಿ ಮಂಜುನಾಥ ಬಣ)ಹಾಗೂ ಹಸಿರು ಸೇನೆ,ಸಿಐಟಿಯು ಹಾಗೂ ವಿವಿದ ಸಂಘಟನೆಗಳು,ಕಾಂಗ್ರೆಸ್ ಕಾರ್ಯಕರ್ತರೊಡಗೂಡಿ.ಕೂಡ್ಲಿಗಿ ಹೊರ ವಲಯದಲ್ಲಿರುವ ರಾಷ್ಟ್ರಿಯ ಹೆದ್ದಾರಿ50ನ್ನು, ಬಂದ್ ಮಾಡಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಪಟ್ಟಣದಲ್ಲಿರುವ ಮಹಾತ್ಮ ಗಾಂಧಿ ಪವಿತ್ರ ಚಿತಾಭಸ್ಮ ಹುತಾತ್ಮರ ರಾಷ್ಟ್ರೀಯ ಸ್ಮಾರಕದಿಂದ,ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು.

ಕೇಂದ್ರ ಸರ್ಕರದ ವಿರುದ್ಧ ಘೋಷಣೆಗಳನ್ನು ಕೂಗಿದರು,ಪ್ರಮುಖ ಬೀದಿಯ ಮೂಲಕ ಪ್ರಮುಖ ವೃತ್ತಗಳಲ್ಲಿ ಪ್ರತಿಭಟಿಸಿದರು.ಪಟ್ಟಣದ ಹೊರಹೊಲಯ ರಾಷ್ಟ್ರೀಯ ಹೆದ್ಧಾರಿ50ರಲ್ಲಿ ರಸ್ತೆಯ ಪ್ಲೈ ಓವರ್ ನಲ್ಲಿ, ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.ರೈತ ಮುಖಂಡ ಕೆಕೆ.ಹಟ್ಟಿ ದೇವರ ಮನಿ ಮಹೇಶ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಾಗಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿ ತಂದಿದ್ದು.ಕಾರ್ಮಿಕರನ್ನು ಹಾಗೂ ರೈತರನ್ನು ಬೀದಿಗೆ ತಳ್ಳುವ ಕಾಯ್ದೆಯಾಗಿವೆ, ಇವನ್ನು ಶೀಘ್ರವೇ ಹಿಂಪಡೆದು ರೈತರ ಬದುಕಿಗೆ ದಾರಿ ಮಾಡಿಕೊಡಿ ಎಂದು ಅವರು ಒತ್ತಾಯಿಸಿದರು.ಹಲವು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ,ವಿರೋಧಿ ನೀತಿ ಖಂಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಕಲ್ಲಪ್ಪ,ಚನ್ನಪ್ಪ, ಓಬಳೇಶ,ಸಿಐಟಿಯು ನ ಕಾರ್ಮಿಕ ಮುಖಂಡ ಹಾಗೂ ವಕೀಲ ವಿರುಪಾಕ್ಷಪ್ಪ. ಕಾಂಗ್ರೇಸ್ ಮುಖಂಡರಾದ ಶ್ರೀಮತಿ ಜಿಂಕಾಲ್ ನಾಗಮಣಿ, ಗುರುಸಿದ್ದನಗೌಡ,ಪಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ ಸೇರಿದಂತೆ ಕೆಲ ಜನಪ್ರತಿನಿಧಿಗಳು ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಭಾಗವಹಿಸಿದ್ದರು.
*ಬಿಗಿ ಬಂದೋಬಸ್ಥ್* -ರಾಷ್ಟ್ರವ್ಯಾಪಿ ಹೈವೇ ಬಂದ್ ಕರೆ ಹಿನ್ನಲೆಯಲ್ಲಿ,ಕೂಡ್ಲಿಗಿ ಡಿವೈಎಸ್ಜಿ.ಹರೀಶ್ ರೆಡ್ಡಿ ನೇತೃತ್ವದಲ್ಲಿ ಬಿ ಪೊಲೀಸ್ ಬಂದೋಬಸ್ಥ್ ಏರ್ಪಡಿಸಲಾಗಿತ್ತು.ಸಿಪಿಐ, ಡಿ.ವಸಂತ ಅಸೋದೆ ಹಾಗೂ ಪಿಎಸ್ಐ ತಿಮ್ಮಣ್ಣ ಚಾಮನೂರ್ ಸೇರಿದಂತೆ ಮೀಸಲು ಪೊಲೀಸ್ ಪಡೆ ಮತ್ತು ಠಾಣಾ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗಿತ್ತು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend