🪔ನಿಧನ ವಾರ್ತೆ : ಅಮ್ಮನಕೇರಿ ಮಠದ ಬಸವರಾಜಯ್ಯ – ಅಮ್ಮನಕೇರಿ🪔- ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಅಮ್ಮನಕೇರಿ ಗ್ರಾಮದ ಜಂಗಮ ಸಮುದಾಯದ ಯುವ ಮುಖಂಡ, ಪತ್ರಕರ್ತರೂ ಹಾಗೂ ಗುಡಿಕೈಗಾರಿಕೋದ್ಯಮಿಯಾಗಿದ್ದ. ಅಮ್ಮನಕೇರಿ ಮಠದ ಬಸವರಾಜಯ್ಯ (40), ಇಂದು (ಮೇ 25) ಮುಂಜಾನೆ 9 ಗಂಟೆಗೆ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ವರ್ಷದಿಂದ ಗ್ಯಾಂಗ್ರೀನ್ ನಿಂದ ಬಳಲುತಿದ್ದು , ಹಲವೆಡೆಯ ಖಾಸಗೀ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಣ್ಣ ಹೋಟೆಲ್, ಎಲ್ಕೆಟ್ರಿಕಲ್ , ಶಾಮಿಯಾನ ಸಪ್ಲೇಯರ್ಸ್ ಸೇರಿದಂತೆ ವಿವಿದ ಗುಡಿಕೈಗಾರಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಪ್ರವೃತ್ತಿಗಾಗಿ ಪತ್ರಿಕಾರಂಗವನ್ನು ಆಯ್ಕೆ ಮಾಡಿಕೊಂಡು , ಧರಣಿ ಘರ್ಜನೆ ಯೂಟ್ಯೂಬ್ ಚಾನೆಲ್ ಸೇರಿದಂತೆ. ವಿವಿದ ಸ್ಥಳೀಯ ವಾರ ಪಾಕ್ಷಿಕ ಪತ್ರಿಕೆಗಳಲ್ಲಿ ಅನೇಕ ವರ್ಷಗಳಿಂದ , ಕೂಡ್ಲಿಗಿ ತಾಲೂಕಿನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಪತ್ರಕರ್ತರ ಸಂಘದ , ಕೂಡ್ಲಿಗಿ ಘಟಕದ ಪದಾಧಿಕಾರಿಯಾಗಿ ಸೇವೆಯಲ್ಲಿದ್ದರು. ಮೃತರು ತಾಯಿ ತಂದೆ , ಮಡದಿ ಹಾಗೂ ಇಬ್ಬರು ಪತ್ರರನ್ನು. ತುಂಬು ಕುಟುಂಬವನ್ನು , ಬಂಧು ಬಳಗ ಶಿಷ್ಯವರ್ಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*- ಮೇ 26ರಂದು ಬೆಳಿಗ್ಗೆ 9 : 30ಗಂಟೆಗೆ , ಅಮ್ಮನಕೇರಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಎ ಎಮ್ ಬಸವರಾಜಯ್ಯ ರವರ ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂತಕದ ಛಾಯೆ ಆವರಿಸಿದೆ. ಅಮ್ಮನಕೇರಿ ಮಠದ ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಬಸವರಾಜಯ್ಯರವರ ಅಕಾಲಿಕ ಅಗಲಿಕೆಗೆ , ಗ್ರಾಮದ ಜಂಗಮ ಸಮುದಾಯ ಹಾಗೂ ವೀರಶೈವ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಅಮ್ಮನಕೇರಿ ಗ್ರಾಮದ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು , ಅಮ್ಮನಕೇರಿ ಗ್ರಾಮದ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರು. ವಿವಿದ ಜನಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಪತ್ರಕರ್ತರು , ಗ್ರಾಮದ ಎಲ್ಲಾ ಸಂಘಟನೆಗಳ ಸರ್ವಸದಸ್ಯರು. ಜಂಗಮ ಸಮಾಜದ ಎಲ್ಲಾ ಸಂಘಟನೆಗಳು. ಕಾರ್ಮಿಕರ , ಮಹಿಳಯರ , ರೈತರ ಸಂಘಟನೆಗಳು ಸೇರಿದಂತೆ ವಿವಿದ ಸಂಘಟನೆಗಳವರು. ವಿವಿದ ಪಕ್ಷಗಳ ಪ್ರಮುಖರು ಸಮಾಜ ಸೇವಕರು , ಹೋರಾಟಗಾರು ಸಂತಾಪ ವ್ಯಕ್ತಪಡಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
