ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೆ ಹೊಣೆ
ವರದಿ. ಪಾಲದೀಪ್ ಯಾದವ್
ಹೊಸದುರ್ಗ: ತಾಲೂಕಿನ ತಂಡಗ ಗ್ರಾಮ ಪಂಚಾಯಿತಿಯ ಹನುಮನಹಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ,ಹೈಟೆಕ್ ಶೌಚಾಲಯ ನಿರ್ಮಾಣಕ್ಕಿಂದು.ಹೊಸದುರ್ಗ ತಾಲೂಕಿನ ಜನಪ್ರಿಯ ಶಾಸಕರು,ಹಾಗು ಅಧ್ಯಕ್ಷರು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ, ಸನ್ಮಾನ್ಯ ಶ್ರೀ ಬಿ. ಜಿ. ಗೋವಿಂದಪ್ಪನವರು, ಚಾಲನೆ ನೀಡಿ ಹಾಗೂ ಸೂಜಿಕಲ್ಲು ಗ್ರಾಮದ ಸುತ್ತಮುತ್ತಲಿನ ಸಿಸಿ ರಸ್ತೆಗಳ 10 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಾಮಗಾರಿಗಳು ಯಾವುದೇ ಕಾರಣಕ್ಕೂ ಕಳಪೆಯಾಗಬಾರದು, ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು. ಒಂದು ವೇಳೆ ಕಳಪೆಯಾದರೆ ಅಧಿಕಾರಿಗಳನ್ನೆ ಹೊಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030