ಹೊಸದುರ್ಗ: ಶ್ರೀ ಹಾಲುರಾಮೇಶ್ವರ ಯೋಜನಾ ಕಚೇರಿಯ ಕಸಬಾ ವಲಯದ ಬೀಸನಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂಪಾಯಿ ಸಹಾಯಧನವನ್ನು ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಡೆ ಅವರು ಮಂಜೂರಾತಿ ಮಾಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಬಿ ಪಿ ಓಂಕಾರಪ್ಪ, ಅವರು ದೇವಸ್ಥಾನ ಕಮಿಟಿ ಅವರಿಗೆ ಹಸ್ತಾಂತರ ಮಾಡಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಡೀ ಕರ್ನಾಟಕ ರಾಜ್ಯದಲ್ಲಿ ಇಂತಹ ಸಾವಿರಾರು ನೆರವು ಕಾರ್ಯಕ್ರಮಗಳನ್ನು ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಡೆ, ಅವರು ಮಾಡುತ್ತಿದ್ದು ಗ್ರಾಮಗಳ ಅಭಿವೃದ್ಧಿ. ಗ್ರಾಮೀಣ ಪ್ರದೇಶದ ಕೆರೆಕಟ್ಟೆಗಳ ಹುಳೆತ್ತುವ ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿದೆ ಇದು ಇಡೀ ಮನುಕುಲವೇ ಮೆಚ್ಚುವಂತ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜೈನ್ ಮಿಲನ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅಜ್ಜಪ್ಪ. ಜಿಲ್ಲಾ ಜನಜಾಗತಿ ವೇದಿಕೆಯ ಸದಸ್ಯರಾದ ಜಗದೀಶ್, ಬಿಸನಹಳ್ಳಿ. ಗೂಳಿಹಟ್ಟಿ ಕೃಷ್ಣಮೂರ್ತಿ, ಶ್ರೀ ಮತಿ ಸಿಂಧೂ ಅಶೋಕ, ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಚಂದ್ರಶೇಖರ, ವಲಯ ಮೇಲ್ವಿಚಾರಕರಾದ ಶ್ರೀಮತಿ ಅರುಣ ಕುಮಾರಿ, ಊರಿನ ಗ್ರಾಮಸ್ಥರು,ಮತ್ತು ದೇವಸ್ಥಾನ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು…
ವರದಿ, ಪಾಲದೀಪ್ ಯಾದವ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030