ಮಧ್ವರಥ-ಪಥ
ಹಿರಿಯರನು ನಮಿಸುತಲಿ
ಗುರುವನು ಸ್ಮರಿಸುತ ಭಕುತಿಯಲಿ
ಪರಮ ಪವಿತ್ರ ತತ್ವಸಂಪದದಲಿ
ಬೋಧನೆಯಲಿ ಮಧ್ವರಥ/
ರಮಣೀಯ ಹರಿಯ
ಮಾಧವ ನಿಜವನರಿಯೆ,
ಪದವೆರಡು ನುಡಿವ ಕರ್ಮತ್ಯಾಗ ಕರ್ಮಯೋಗ ಅದರ ಶ್ರೇಷ್ಠ ಮಧ್ವರಥ/
ಉಭಯ ತತ್ವಗಳು
ಸಮಸ್ತ ಸಾಧನೆಗಳು
ಮಾಧವನ
ನಿಷ್ಕಾಮರಂತ ಮಧ್ವಪಥ/
ಬೇಧ ಭಾವ ಇಲ್ಲದಲ್ಲಿ ಶುದ್ಧನುಷ್ಠಾನದ ದಿವ್ಯದೃಷ್ಟಿಯಲಿ
ಯಶಸ್ಸು ಕಠಿಣ ಯೋಗದಲಿ ನಿಷ್ಕಾಮ ಕರ್ಮಚಿತ್ತದಲಿ ಮಧ್ವರಥ/
ಭೋಗವರ್ಜಿತ ಜಗದ ಜೀವಿಗಳು
ದುಡಿಯುವುದೆ ಪರಮ ಆದರ್ಶಗಳು ಬಗೆಯುವ ಕರ್ಮ ಯೋಗಿಗಳು ಸಮರ್ಪಣ ಭಾವದಿಂದ ಮಧ್ವಪಥ/
ಜ್ಞಾನವದು ಅಧ್ಯಾತ್ಮ
ಅದುವೇ
ಮಾನವನ ಅಜ್ಞಾನ
ತಿಮಿರವ ಕೊನೆಗೊಳಿಸಿದ ಮಧ್ವಪಥ/
ಸುಜ್ಞಾನ ದೀಪ್ತಿಯ ಬೆಳಗುವ
ಸಾಧನ ಇಷ್ಟವಾದ ದೈವ ಪರಮಾತ್ಮನು ಮನದವ
ಪರಮಪದದ ಮಧ್ವರಥ/
ಜ್ಞಾನಿ ಸಮಭಾವಿ ಸಮತಜೀವಿ
ವಿನಯಶೀಲವಂತ ಮಧ್ವರಥ/
ಶ್ರೀನಿವಾಸ ಡಿ ಎನ್
ಭೌತಶಾಸ್ತ್ರ ಉಪನ್ಯಾಸಕರು,
ಸ.ಸ.ಅ.ಪ್ರ.ದ.ಕಾಲೇಜು. ಬಳ್ಳಾರಿ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030