ಹೊಸದುರ್ಗ : ಮಾನವ ಜನ್ಮ ಅಮೂಲ್ಯವಾದದು, ಪ್ರಯಾಣಿಕರ ವಾಹನ ಚಲಾಯಿಸುವವರು ತುಂಬಾ ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು, ನಿಮ್ಮನ್ನು ನಂಬಿದ ನಿಮ್ಮ ಹೆಂಡತಿ ಮಕ್ಕಳು ನಿಮ್ಮಿಂದಲೇ ಬದುಕುತ್ತಿರುತ್ತಾರೆ, ನಿಮ್ಮ ಆಟೋದಲ್ಲಿ ಕೂರುವ ಪ್ರಯಾಣಿಕರನ್ನ ಜವಾಬ್ದಾರಿಯಿಂದ ಅವರ ಮನೆಗೆ ತಲುಪಿಸಬೇಕು.ಆಟೋ ಚಾಲಕರು ನಗರದಾದ್ಯಂತ ಅಡ್ಡ ದಿಡ್ಡಿ ಓಡಾಡುವುದು ಗಮನಕ್ಕೆ ಬಂದಿದ್ದು ಯಾವುದೇ ಕಾರಣಕ್ಕೂ ಸಾರಿಗೆ ನಿಯಮವನ್ನು ಪಾಲಿಸಿ ಆಟೋ ಚಲಾಯಿಸಬೇಕು ಇಲ್ಲದಿದ್ದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಕೋರುವ ಆಟೋಗಳಲ್ಲಿ ವಾಹನ ಚಾಲಕರು ಅವರಿಗೆ ಇಷ್ಟ ಬಂದ ರೀತಿಯಲ್ಲಿ ಆಟೋವನ್ನು ನವೀಕರಿಸಿ ಓಡಾಡುತ್ತಿದ್ದಾರೆ. ಕಂಪನಿಯಿಂದ ಬಂದ ಆಟೋದ ರೀತಿಯಲ್ಲಿಯೇ ಇರಬೇಕು ಇಲ್ಲದಿದ್ದರೆ ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆ ಅವರಣದಲ್ಲಿ ನಡೆದ ಆಟೋ ಚಾಲಕ ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ರಸ್ತೆಗ ರಸ್ತೆಗಳಲ್ಲಿ ಎಲ್ಲಿಂದರಲ್ಲಿ ವಾಹನಗಳನ್ನ ನಿಲ್ಲಿಸಿ ಹೋಗುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ಉಂಟಾಗುತ್ತದೆ. ದ್ವಿಚಕ್ರ ವಾಹನ ಸವಾರರು ಸಂಚಾರಿ ಸಾರಿಗೆ ಕಾಯಿದೆ ಮೀರಿ ವಾಹನ ಚಲಾಯಿಸಿದರೆ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ. ಹೊಸದುರ್ಗ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಾರದು. ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಸತ್ಯನಾರಾಯಣ್, ಸೇರಿದಂತೆ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030