ಶಾಸಕ ಬಿ. ಜಿ. ಗೋವಿಂದಪ್ಪನವರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ
ಹೊಸದುರ್ಗ:ತಾಲ್ಲೂಕಿನ ಶ್ರೀರಾಂಪುರ ಗ್ರಾಮದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ವತಿಯಿಂದ ಆಯೋಜನೆಗೊಂಡಿದ್ದ ರಾಗಿ ಖರೀದಿ ಪ್ರಕ್ರಿಯೆಗೆ ಜನಪ್ರಿಯ ಶಾಸಕರು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರು. ಶ್ರೀ ಬಿ ಜಿ. ಗೋವಿಂದಪ್ಪ, ಚಾಲನೆ ನೀಡಿ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲ್ಲೂಕಿನ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು
ಅಪ್ಪರ್ ಭದ್ರದಿಂದ ರೈತರ ಜಮೀನು ಗಳಿಗೆ ನೀರು ಹಾಗು ಕೆರೆ ತುಂಬಿಸುವ ಕೆಲಸ ಆಗಲಿದೆ
ತಾಲ್ಲೂಕಿನ ಜನರು ಅಭಿವೃದ್ಧಿಗಾಗಿ ನನ್ನ ಆಯ್ಕೆ ಮಾಡಿದ್ದೀರಾ, ನಾಲ್ಕು ಬಾರಿ ಶಾಸಕನಾಗಿ ಅಯ್ಕೆ ಮಾಡಿರುವ ಕ್ಷೇತ್ರದ ಜನರ ಖುಣ ತೀರಿಸುವ ಕೆಲಸ ಮಾಡುತ್ತೇನೆ. ನನ್ನದು ಏನಿದ್ದರು ಅಭಿವೃದ್ಧಿ ರಾಜಕಾರಣವೇ ಹೊರತು ಎಂದಿಗೂ ಜಾತಿ ರಾಜಕಾರಣ ಮಾಡಿದವನಲ್ಲ ಎಂದರು
ಭದ್ರಾದಿಂದ ಪ್ರತಿ ಮನೆಗಳಿಗೆ ನೀರು ಒದಗಿಸುವ ಸಲುವಾಗಿ ಸ್ಥಾಪಿಸಲಾಗಿರುವ 150 ಪಂಪ್ ಹೌಸ್ ಗಳಿಗೆ ಹೆಚ್ಚುವರಿ ವಿದ್ಯುತ್ ನೀಡಲು ಕ್ರಮ ವಹಿಸಲಾಗಿದೆ. ತಾಲ್ಲೂಕಿನ ಆರು ಕಡೆ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಆಗಲಿವೆ. ಭವಿಷ್ಯದಲ್ಲಿ ತಾಲ್ಲೂಕಿನ ಜನತೆಗೆ ವಿದ್ಯುತ್, ನೀರಿನ ಸಮಸ್ಯೆ ಕಾಡುವುದಿಲ್ಲ ಎಂದರು
ಜಮೀನು ಸಾಗು ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಸಾಗುವಳಿ ಚೀಟಿ ಅಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ಖಾತೆ ಮಾಡಿಸಿ ನಿಮ್ಮ ಹೆಸರಿನಲ್ಲಿ ಪಹಣಿ ಬರಲಿದೆ. ನಿವೇಶನ ಹಾಗು ವಸತಿ ರಹಿತರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು
2022-23 ನೇ ಸಾಲಿನಲ್ಲಿ ಹೊಸದುರ್ಗ ರೈತರಿಂದ ರಾಗಿ ಖರೀದಿಸಿ 3 ಕೋಟಿ ರುಪಾಯಿ ವಂಚನೆ ಮಾಡಲಾಗಿತ್ತು. ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೊದಲ ದಿನವೇ 300 ಕ್ಕೂ ಅಧಿಕ ರೈತರಿಗೆ ರಾಗಿ ಖರೀದಿ ಹಣವನ್ನು ಚೆಕ್ ಮೂಲಕ ಹಸ್ತಾಂತರ ಮಾಡಿದ್ದೆ. ಇಂದು ಬಾಕಿ ಉಳಿದಿದ್ದ ಅನ್ಯಾಯಕ್ಕೆ ಒಳಗಾಗಿದ್ದ 88 ರೈತರಿಗೆ ಚೆಕ್ ನೀಡಿದ್ದೇನೆ . ಹಿಂದಿನ ಸರಕಾರದ ಅವಧಿಯಲ್ಲಿ ರಾಗಿ ಖರೀದಿಯಲ್ಲಿ ಆಗಿದ್ದ 23 ಕೋಟಿ ರುಪಾಯಿ ಅವ್ಯವಹಾರದ ಹಣವನ್ನು ನಿಗಮದಿಂದ ಕೊಡಿಸಿದ್ದೇನೆ ಎಂದರು
ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ಪಾರದರ್ಶಕವಾಗಿ ರಾಗಿ ಖರೀದಿ ಮಾಡಬೇಕು. ರೈತರು ಸಹ ಗುಣಮಟ್ಟದ ರಾಗಿ ಬಿಡಬೇಕು. ಸಣ್ಣ ವ್ಯತ್ಯಾಸ ಆದರೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ನಿಗಮದ ಅಧ್ಯಕ್ಷನಾಗಿರುವ ನನ್ನ ಹೆಸರನ್ನು ಕಾಪಾಡುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು
ಈ ಸಂದರ್ಭದಲ್ಲಿ ತಹಶೀಲ್ದಾರ್ ತಿರುಪತಿ ಪಾಟೀಲ್, ಎಪಿಎಂಸಿ ಕಾರ್ಯದರ್ಶಿ ಗೌತಮ್, ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030