ಕೃಷಿ ಹೊಂಡಕ್ಕೆ ಬಿದ್ದು ಡಾ.ಜಯರಾಂ ಸಾವು…!!!

Listen to this article

ಕೃಷಿ ಹೊಂಡಕ್ಕೆ ಬಿದ್ದು ಡಾ.ಜಯರಾಂ ಸಾವು..

ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. 53 ವರ್ಷದ ವೈದ್ಯರಾದ ಜಯರಾಂ ಎಂಬುವವರು ಸಾವನ್ನಪ್ಪಿದ್ದಾರೆ. ಅವರ ಸಾವಿನಿಂದ ಕುಟುಂಬದವರೆಲ್ಲಾ ಆಘಾತದಲ್ಲಿದ್ದಾರೆ.

ಡಾ.ಜಯರಾಂ ಅವರು ಹೊಸದುರ್ಗದಲ್ಲಿ ಖ್ಯಾತ ವೈದ್ಯರಾಗಿದ್ದರು. ಅಲ್ಲಿಯೇ ತಮ್ಮ ತೋಟವನ್ನ ಮಾಡಿಕೊಂಡಿದ್ದರು. ಪ್ರತಿದಿನ ತೋಟಕ್ಕೆ ಭೇಟಿ ಕೊಟ್ಟು ಬರ್ತಾ ಇದ್ರು. ಅದರಂತೆ ಇಂದು ಕೂಡ ತೋಟಕ್ಕೆ ಹೋಗಿದ್ದರು. ಆದರೆ ತೋಟದಲ್ಲಿ ಕೃಷಿ ಹೊಂಡದ ಸಮೀಪಕ್ಕೆ ಹೋದಾಗ, ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ಮೇಲೆ ಬರಲು ಪ್ರಯತ್ನಿಸಿದರು ದುರಾದೃಷ್ಟವಶಾತ್ ಬರುವುದಕ್ಕೆ ಸಾಧ್ಯವಾಗಿಲ್ಲ. ಕೃಷಿ ಹೊಂಡದಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ‌.

ವೈದ್ಯರಾಗಿದ್ದರು ಕೂಡ ಪತ್ರಕರ್ತ ವೃತ್ತಿಯನ್ನು ಮಾಡುತ್ತಿದ್ದರು. 2024ರಿಂದ ಗ್ಯಾರಂಟಿ‌ನ್ಯೂಸ್ ಚಾನೆಲ್ ನಲ್ಲಿ ಪತ್ರಕರ್ತರಾಗಿದ್ದರು. ಅದಕ್ಕೂ ಮುನ್ನ ಹಲವು ನ್ಯೂಸ್ ಚಾನೆಲ್ ಗಳಲ್ಲಿ ಮೂರು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ ಅಂತರಾಷ್ಟ್ರೀಯ ವಿಚಾರಗಳ ವಿಶ್ಲೇಷಣೆ ಮಾಡುವ ಬರಹಗಳನ್ನ ಬರೆಯುತ್ತಿದ್ದರು. ಜಯರಾಂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ‌ ಇತ್ತು. ಆದರೀಗ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಹೊಸದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಶೀಲನೆ ನಡೆಸಿದ್ದಾರೆ…

ವರದಿ.ಪಾಲದೀಪ್ ಯಾದವ್ ಹಕ್ಕಿತಿಮ್ಮಯ್ಯನಹಟ್ಟಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend