ಹೊಸದುರ್ಗ: ತಾಲೂಕು ಪಟ್ಟಣದ ಅರೋಗ್ಯ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸದ್ಗುರು ಆಯುರ್ವೇದ ಸಂಸ್ಥೆ ಇಂದ 5 ಜನ ಕ್ಷಯರೋಗಿಗಳಿಗೆ ನಿಕ್ಷಯ್ ಮಿತ್ರ ಕಾರ್ಯಕ್ರಮದ ಅಡಿಯಲ್ಲಿ ಫುಡ್ ಕಿಟ್ ವಿತರಣೆ ಮಾಡಿದರು. ಸದ್ಗುರು ಆಯುರ್ವೇದ ಸಂಸ್ಥೆ ಮಾಲೀಕರಾದ ಶ್ರೀಮತಿ ಸ್ವಾತಿ ಪ್ರದೀಪ್, ಮಾತನಾಡಿ ನಿಕ್ಷಯ್ ಮಿತ್ರಾ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶದ ಫುಡ್ ಕಿಟ್ ಅನ್ನು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ಇನ್ನು ಹೆಚ್ಚಿನದಾಗಿ ಸಹಾಯ ಮಾಡಲಿದೆ ಎಂದು ತಿಳಿಸಿದರು,ಕಾರ್ಯಕ್ರಮದಲ್ಲಿ, ತಾಲೂಕು ಆಡಳಿತ ವೈದ್ಯಾಧಿಕಾರಿಗಳು ಡಾ. ರಾಘವೇಂದ್ರ ಪ್ರಸಾದ್,ಸದ್ಗುರು ಆಯುರ್ವೇದ ಸಂಸ್ಥೆ ಮಾಲೀಕರು ಶ್ರೀಮತಿ ಸ್ವಾತಿ ಪ್ರದೀಪ್, ತಾಲೂಕಿನ ಎಲ್ಲಾ ವೈದ್ಯಾಧಿಕಾರಿಗಳು, ಹಾಗೂ ಎಲ್ಲಾ ಅರೋಗ್ಯ ನಿರೀಕ್ಷಣ ಧಿಕಾರಿಗಳು, ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಅರೋಗ್ಯಧಿಕಾರಿಗಳು ಹಾಗೂ ಅರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು, ತಾಲೂಕು ಅರೋಗ್ಯಧಿಕಾರಿಗಳ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾವಹಿಸಿದ್ದರು…
ವರದಿ. ಪಾಲದೀಪ್ ಯಾದವ್ ಹಕ್ಕಿತಿಮ್ಮಯ್ಯನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030