ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪ ನಮನ…!!!

Listen to this article

ಹೊಸದುರ್ಗ: ನಗರದ ಶ್ರೀ ವೀರ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಶನಿವಾರ

ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ
ಕಾರ್ಯಕ್ರಮದಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವ
ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಮ್ಮ ಮಕ್ಕಳನ್ನ
ವಿದ್ಯಾವಂತರನ್ನಾಗಿ
ಮಾಡುವುದು
ನಮ್ಮೆಲ್ಲರ ಕರ್ತವ್ಯ
ನಮ್ಮ ಮಡಿವಾಳ ಸಮಾಜ
ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ
ಹಿಂದುಳಿದಿದೆ, ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ
ಮಾಡುವುದು ನಮ್ಮೆಲ್ಲರ ಕರ್ತವ್ಯ, ಯಾರೂ ಸಹಾ
ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಾಲೂಕು ಶ್ರೀ
ವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ
ಬಿ.ಆರ್.ರಾಮಕೃಷ್ಣ ಕರೆ ನೀಡಿದರು.
ಪಟ್ಟಣದ ಶ್ರೀ ವೀರ ಮಡಿವಾಳ ಮಾಚಿದೇವ ಸಮುದಾಯ
ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಡಿವಾಳ
ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿದರು.
ಸಂಘಟನೆ ಮಾಡಿ ಸಮಾಜ ಮುಖಿಯಾದ ಕೆಲಸ
ಮಾಡುವುದು ಅಷ್ಟೋಂದು ಸುಲಭದ ಮಾತಲ್ಲ
ಯಾರೇ ಎನೇ ಅಂದರೂ ಅವುಗಳನ್ನ ಸಹಿಸಿಕೊಂಡು
ಸಮಾಜವನ್ನ ಮುನ್ನಡೆಸುವ ಕೆಲಸವಾಗಬೇಕು
ಎಂದರು.
ನಿವೃತ್ತ ಶಿರಸ್ತೆದಾರರು ಮತ್ತು ಸಮಾಜದ
ಮುಖಂಡರಾದ ಆರ್.ಜಯಣ್ಣ ಮಾತನಾಡಿ ರಾಜ್ಯದಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು
ಕುಲಶಾಸ್ತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲು
ಮೈಸೂರು ವಿಶ್ವವಿದ್ಯಾಲಯದ ಪ್ರೋ.ಅನ್ನಪೂರ್ಣಮ್ಮ
ಅವರನ್ನು ನೇಮಕ ಮಾಡಲಾಗಿತ್ತು.ಅವರು ೨೦೦೦ ನೇ
ಇಸವಿಯಲ್ಲಿಯೇ ರಾಜ್ಯ ಸರಕಾರಕ್ಕೆ ವರದಿ
ಸಲ್ಲಿಸಿದ್ದಾರೆ.ಆದರೆ ರಾಜ್ಯ ಸರಕಾರ ಈ ವರದಿಯನ್ನು
ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಲು ಮೀನಮೇಶ
ಎಣಿಸುತ್ತಿದೆ ಎಂಬ ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ
ಕೆಲ್ಲೋಡು ಮಾಜಿ ಗ್ರಾಮ
ಪಂಚಾಯಿತಿ ಸದಸ್ಯ ಎನ್.ಮಂಜಪ್ಪ, ಸಮಾಜದ
ಮುಖಂಡರುಗಳಾದ ನಾಗತಿಹಳ್ಳಿ ಮಂಜುನಾಥ್,
ಮಾಡದಕೆರೆ ರೇವಣ್ಣ, ಸ್ಟುಡಿಯೋ ಬಸವರಾಜ್,
ನೇರಲಕೆರೆ ರಾಮಣ್ಣ, ಬಾಗೂರು ಮಲ್ಲೇಶಪ್ಪ,
ನೇರಲಕೆರೆ ರಂಗನಾಥ್ ಸೇರಿದಂತೆ ಸಮಾಜದ
ಬಂಧುಗಳು ಉಪಸ್ಧಿತರಿದ್ದರು…

ವರದಿ. ಪಾಲದೀಪ್ ಯಾದವ್ ಹಕ್ಕಿತಿಮ್ಮಯ್ಯನಹಟ್ಟಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend