ಹೊಳಲ್ಕೆರೆ ಪುರಸಭೆ ಪೌರ ಸೇವಾ ನೌಕರರು ನಾನಾ ಬೇಡಿಕೆ ಈಡೇರಿಸುವಂತೆ ಪುರಸಭೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು…!!!

Listen to this article

ಹೊಳಲ್ಕೆರೆ : ಇಲ್ಲಿನ ಪುರಸಭೆಯ ಪೌರಸೇವಾ ನೌಕರರು ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ಅನಿಷ್ಟಾವಧಿ ಮುಷ್ಕರ ೪ನೇ ದಿನಕ್ಕೆ ಕಾಲಿಟ್ಟಿದ್ದು, ಕಚೇರಿ ಕರ್ತವ್ಯ ದಿಂದ ಹೊರಗೂಳಿದು ಶುಕ್ರವಾರ ಪುರಸಭೆ ಕಚೇರಿ ಎದುರು ಅನಿಧಿಷ್ಠಾವಧಿ ಪ್ರತಿಭಟನೆ ಮುಂದುವರಿಸಿದ್ದು, ಇವರಿಗೆ ಪುರಸಭೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಷರತ್ ಬೆಂಬಲ ನೀಡಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿದ ಪೌರಸೇವಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ.ಲವ ಮಾತನಾಡಿ, ರಾಜ್ಯ ಸರಕಾರ ಪೌರ ಸೇವಾ ನೌಕರ ಬೇಡಿಕೆ ಈಡೇರಿಸಲು ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ತಕ್ಷಣವೇ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಪೌರ ಸೇವಾ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಯೇಗೆಂದ್ರ, ಖಜಾಂಚಿ ಪಾಲಯ್ಯ, ಜಿಲ್ಲಾ ಉಪಾಧ್ಯಕ್ಷ ನಾಗಬೂಷನ್, ನೌಶಾದ್, ಬಸವರಾಜ್, ರುದ್ರೇಶ್, ಕಛೇರಿ ವ್ಯವಸ್ಥಾಪಕಿ ರಾಧ.ಆರ್, ಸಿಬ್ಬಂದಿಗಳಾದ ಮಹೇಶ್ವರಪ್ಪ, ದೇವರಾಜ್, ಗಂಗಾಧರ್, ಹರೀಶ್, ರಾಮಚಂದ್ರಪ್ಪ, ಲೋಕೇಶ್, ಗಣೇಶ್, ಬಸವರಾಜಪ್ಪ, ಕಮಲಮ್ಮ ಹಾಗೂ ನೀರು ಪೂರೈಕೆ ನೌಕರರು. ಪೌರಕಾರ್ಮಿಕರು, ಚಾಲಕರು, ಲೋಡರ್ಸ್, ಕ್ಲೀನರ್ಸ್ ಸ್ಯಾನಿಟರಿ ಸೂಪರ್‌ವೈಜರ್, ಹೊರಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.
ಸಂಘದ ಬೇಡಿಕೆಗಳು : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ, ಕೆಜಿಐಡಿ, ಸೇರಿದಂತೆ ಸರ್ಕಾರಿ ನೌಕರ ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ ಸೂಪರ್‌ವೈಜರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸುವುದು.
ದಿನಗೂಲಿ, ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು.
ಎಲ್ಲಾ ನೌಕರರಿಗೆ ಎಸ್.ಎಫ್.ಸಿ ಮುಕ್ತ ನಿಧಿಯಿಂದ ವೇತನ ನೀಡುವುದು.
ಬಾಕ್ಸ್ : ಪೌರಸೇವಾ ನೌಕರರ ಹೋರಾಟಕ್ಕೆ ಪುರಸಭೆಯ ಅಧ್ಯಕ್ಷರಾದ ವಿಜಯಸಿಂಹ ಖಾಟ್ರೋತ್ ಸೇರಿದಂತೆ ಎಲ್ಲಾ ಸದಸ್ಯರು ಬೇಂಬಲಿಸಿದ್ದೇವೆ. ಸರಕಾರ ಬೇಗಾ ನೌಕರರ ಬೇಡಿಕೆ ಈಡೇರಿಸಬೇಕು. ಕೆಲಸ ಖಾಯಂ ಗೊಳಿಸಬೇಕು. ಪ್ರತಿಭಟನೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಅವರ ಸಂವಿಧಾನ ಬದ್ದ ಹಕ್ಕುಗಳನ್ನು ಕಲ್ಪಿಸಿಕೊಡಲು ಸರಕಾರ ಕೂಡಲೆ ಒತ್ತು ನೀಡಬೇಕು.  ಹೆಚ್.ಆರ್.ನಾಗರತ್ನವೇದಮೂರ್ತಿ. ಉಪಾಧ್ಯಕ್ಷರು. ಪುರಸಭೆ ಹೊಳಲ್ಕೆರೆ.
ಬಾಕ್ಸ್ : ಪೌರ ಸೇವಾ ನೌಕರರಾಗಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಬೇಡಿಕೆಯನ್ನು ಸರಕಾರ ಈಡೇರಿಸಬೇಕು. ಸಾಕಷ್ಟು ಭಾರಿ ಹೋರಾಟ ನಡೆಸಿದ್ದಾರೆ. ಈಗಾಲಾದರೂ ಸಮಸ್ಯೆಗೆ ಪರಿಹಾರ ಸಿಕ್ಕಬೇಕು. ಅವರ ಹೋರಾಟಕ್ಕೆ ನಮ್ಮೇಲ್ಲ ಸದಸ್ಯರ ಬೆಂಬಲವಿದೆ.
ಪಿ.ಹೆಚ್.ಮುರುಗೇಶ್ ಸದಸ್ಯರು ಪುರಸಭೆ ಹೊಳಲ್ಕೆರೆ.
ಬಾಕ್ಸ್ : ಇಪ್ಪತ್ಮೂವಪ್ಪತ್ತು ವರ್ಷಗಳಿಂದ ಪೌರ ಸೇವಾ ನೌಕರರಾಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಯಸ್ಸು ಪೂರ್ವಗೊಳ್ಳುತ್ತಿದೆ. ಸಕಾಲಕ್ಕೆ ವೇತನ ಭತ್ಯೆಗಳಿಲ್ಲ. ಸರಕಾರ ಪೌರ ನೌರರ ಬೇಡಿಕೆ ಈಡೇರಿಸಬೇಕು. ಅವರನ್ನು ಖಾಯಂಗೊಳಿಸಬೇಕು.
ವಸಂತರಾಜ್ ಸದಸ್ಯರು ಪುರಸಭೆ ಹೊಳಲ್ಕೆರೆ
ಹೊಳಲ್ಕೆರೆ ಪುರಸಭೆ ಪೌರ ಸೇವಾ ನೌಕರರು ನಾನಾ ಬೇಡಿಕೆ ಈಡೇರಿಸುವಂತೆ ಪುರಸಭೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ, ಸದಸ್ಯರಾದ ಪಿ.ಹೆಚ್.ಮುರುಗೇಶ್, ವಸಂತರಾಜ್ ಪಾಲ್ಗೊಂಡಿದ್ದರು…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend