ಸತತ ಪ್ರಯತ್ನವೇ ಸಾಧನೆಯ ಸುಗಮ ಹಾದಿ, ಅದು ನಮ್ಮ ಕೈಲಿದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ದೇವಾಂಗ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಹೇಳಿದರು.
ತಾಲೂಕಿನ ರಾಮಗಿರಿ ಗ್ರಾಮದ ದೇವಾಂಗ ಸಮುದಾಯ ಭವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಸಮಾಜದ ಸಿದ್ದೇಶ್ ದಂಪತಿ ಮಗಳು ಶೈಲಜಾ 622 ಅಂಕ ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದು, ಸಮಾಜಕ್ಕೂ, ತಾಲೂಕಿಗೂ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಯೇ ನಾವು ಕಣ್ಣು ತೆರೆಯುವಂತೆ ಮಾಡಿದ್ದು, ಇಂದು ಸಮಾಜದ ಮಕ್ಕಳಿಗೆ ಪ್ರಥಮ ಬಾರಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸ ಮಾಡಿದ್ದು ಇದನ್ನು ನಾವೆಲ್ಲರೂ ಮುಂದುವರಿಸೋಣ ಎಂದರು.
ಶಿಕ್ಷಕ ಪಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಸಮಾಜ ಶೈಕ್ಷಣಿಕವಾಗಿ ತೀರ ಹಿಂದುಳಿದಿದೆ. ಸಮಾಜದ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜದ ಏಳ್ಗೆ ಕೂಡ ಸಾಧ್ಯ ಎಂದರು.
ಮುಖಂಡ ಸಿ.ಪ್ರಶಾಂತ್ ಮಾತನಾಡಿ, ಸಂಘವು ಅನೇಕ ಸಾಮಾಜಿಕ ಕಳಕಳಿ ಕೆಲಸ ಮಾಡುತಿದ್ದು, ಮೊದಲ ಬಾರಿಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಗುರುತಿಸಿ ಅಭಿನಂದಿಸಿದೆ. ಇದಕ್ಕೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶೈಲಜಾ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿಯ ಶೈಲಜಾ , ನಯನ, ರಕ್ಷಿತಾ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮನುಶೇಖರ್, ಮನೋಜ್, ರಶ್ಮಿ, ಮಹಾಲಕ್ಷ್ಮಿ , ಸಾನ್ವಿ , ವರ್ಷಿಣಿ ಗೆ ಅಭಿನಂದಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶೈಲಜಾ ಗೆ ಚಿನ್ನಗಾಳೆ ಸುಹಾಸ್ ಹತ್ತು ಸಾವಿರ ನಗದು ನೀಡಿ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಆರ್.ಎಸ್.ಮಂಜುನಾಥ್, ಖಜಾಂಚಿ ಶ್ರೀಧರ್, ಮುಖಂಡರಾದ ಆರ್.ಎಸ್.ಪರಣ್ಣ , ಎಲ್.ಪ್ರಕಾಶ್, ಆರ್.ಕೃಷ್ಣಮೂರ್ತಿ,ಹೆಚ್.ಆರ್.ಮೋಹನ್ ಕುಮಾರ್, ಶಿಕ್ಷಕ ಆರ್.ಸೋಮಶೇಖರ್, ಪಿ.ಕುಮಾರಸ್ವಾಮಿ, ಪಕಾಲಿ ರಾಜಪ್ಪ ಮತ್ತಿತರರಿದ್ದರು.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ ದೇವಾಂಗ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030