ಹೊಳಲ್ಕೆರೆ ನ್ಯೂಸ್: ಶ್ರೀ ಹಳ್ಳದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳವು. ಹೊಳಲ್ಕೆರೆ ಪಟ್ಟಣದ ಚೀರನಹಳ್ಳಿ ರಸ್ತೆಯ ಹಳ್ಳದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯರಾತ್ರಿ ದೇವಸ್ಥಾನದ ಬಾಗಿಲು ಮುರಿದು ಹುಂಡಿಯನ್ನು ಕಳ್ಳತನ ಮಾಡಿದ್ದಾರೆ ದಿನನಿತ್ಯದಂತೆ ಬೆಳಿಗ್ಗೆ ಸ್ವಾಮಿಗೆ ಪೂಜೆ ಮಾಡಲು ಪ್ರಧಾನ ಅರ್ಚಕರಾದ ವಿನಯಸ್ವಾಮಿರವರು ಹೋದಾಗ ಈ ದೃಶ್ಯ ಕಂಡು ಬಂದಿದೆ ದಿನರಾತ್ರಿ ದೇವಸ್ಥಾನ ಹಿಂಭಾಗ ಪುಂಡ ಯುವಕರು ಮದ್ಯಪಾನ ಮಾಡಿ ಬಾಟಲಿ ಎಸೆಯುತಿದ್ದಾರೆ ದೇವಸ್ಥಾನ ಹತ್ತಿರದ ಶ್ರೀರಂಗನಾಥ ಸ್ವಾಮಿ ಪ್ರೌಢಶಾಲಾ ಆವರಣ, ಹಾಗೂ ಚೀರನಹಳ್ಳಿ ರಸ್ತೆಯಲ್ಲಿ ಕುಡುಕರ ಅಡ್ಡ ಆಗಿದೆ ಗಣಪತಿ ಕಲ್ಯಾಣ ಮಂಟಪದಲ್ಲಿ ಮದುವೆಗಳು ಜರುಗುವಾಗ ಸದ್ಗುರು ಆಶ್ರಮ ಮುಂಭಾಗದಿಂದ ಹಳ್ಳದ ವೀರಭದ್ರ ಸ್ವಾಮಿ ದೇವಸ್ಥಾನದವರೆಗೆ ಕುಡಿದು ಬಾಟಲಿಗಳನ್ನು ಎಸುತಿದ್ದಾರೆ ಈ ರಸ್ತೆಯಲ್ಲಿ ಸಂಚರಿಸುವುದು ತುಂಬಾ ತೊಂದರೆಯಾಗಿದೆ ಆರಕ್ಷಕರು ಸೂಕ್ತ ಬಂದೋ ಬಸ್ತ್ ಮಾಡಿಕೊಡಬೇಕೆಂದು ಕೇಳಿದಾಗ ಈ ಮನವಿಗೆ ಸ್ಪಂದಿಸಿದ ಆರಕ್ಷಕ ಉಪನಿರೀಕ್ಷಕರು ತಕ್ಷಣವೇ ದಿನನಿತ್ಯ ರಾತ್ರಿ ಹೊತ್ತು ಪೋಲಿಸ್ ಬೀಟ್ ಹಾಕುತ್ತೇವೆ ಸೂಕ್ತ ರಕ್ಷಣೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಎಸ್, ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ, ಎನ್,ಅಜಯ್, ಶಿವಮೂರ್ತಿ, ದುಕ್ಕಡ್ಲೆ ರವಿ,ಲೋಕಪ್ಪ, ದೇವಸ್ಥಾನ ಕಮಿಟಿಯ ಮುರುಗೇಶ್,ತಿಮ್ಮಪ್ಪ ಚೀರನಹಳ್ಳಿ,ಅರ್ಚಕ ವಿನಯ್, ನಾಗರಾಜ್ ಹಾಜರಿದ್ದರು…

