ಇಂದು ಐತಿಹಾಸಿಕ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿ ರಥೋತ್ಸವ..
ಹೊಳಲ್ಕೆರೆ:
ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ಐತಿಹಾಸಿಕ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿ ರಥೋತ್ಸವ ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಬೆಳಿಗ್ಗೆ ರಥಕ್ಕೆ ತೆಂಗಿನ ಕಾಯಿ ಸೇವೆ, ಉಯ್ಯಾಲೋತ್ಸವ, – ಅಸ್ಥಾನ ಮಂಟಪ ಸೇವೆಯ ನಂತರ ರಥ ಬೀದಿಯಲ್ಲಿ ಬೆಟ್ಟದ ಪೂರ್ವಾಭಿಮುಖ-ವಾಗಿ ರಥೋತ್ಸವ ನಡೆಯಲಿದೆ. ನಂತರ ಅನ್ನ ಸಂತರ್ಪಣೆ, ಮಣೇವು, ಉರುಳು ಸೇವೆ, ಪಾನಕ ಪೂಜೆ, ವಸಂತೋತ್ಸವ, ದೊಡ್ಡೆಡೆ ಸೇವೆ, ರಥಾವರೋಹಣ ಸಿಂಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ, ಹೂವಿನ ಪಲ್ಲಕ್ಕಿ ಉತ್ಸವ, ಅಶ್ವ ಪಾರ್ವಟೋತ್ಸವ ನಡೆಯಲಿದೆ.
ಏಪ್ರಿಲ್ 13 ರಂದು ಓಕಳಿ ಗುಂಡಿ ಪೂಜಾ ಸೇವೆ, ಓಕಳಿ ಉತ್ಸವ, ಉತ್ಸವ ಮೂರ್ತಿಗೆ ಹೂವಿನ ಅಲಂಕಾರ, ಧ್ವಜಾವರೋಹಣ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏಪ್ರಿಲ್ 14 ರಂದು ರಾತ್ರಿ ಶಯನೋತ್ಸವ, ದೊಡ್ಡೆಡೆ ಸೇವೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಗಳು ನಡೆಯಲಿವೆ.
ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಗೆ ರಾಜ್ಯದಾದ್ಯಂತ ಭಕ್ತರಿದ್ದು, ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ದಾರ ಸಮಿತಿಯವರು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಹೆಚ್ಚು ಭಕ್ತರು ಪಾಲ್ಗೊ-ಳ್ಳಲಿದ್ದು, ಕುಡಿಯುವ ನೀರು, ನೈರ್ಮಲ್ಯ, ಸುರಕ್ಷತೆ, ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಬೀಬಿ ಫಾತಿಮಾ ತಿಳಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030