ವೈಭವದಿಂದ ನಡೆದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ ರಥದ ಸುತ್ತ ಪ್ರದಕ್ಷಿಣೆ ಹಾಕಿದ ಗರುಡ…!!!

ವೈಭವದಿಂದ ನಡೆದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ ರಥದ ಸುತ್ತ ಪ್ರದಕ್ಷಿಣೆ ಹಾಕಿದ ಗರುಡ…

ಹೊಳಲ್ಕೆರೆ : ತಾಲೂಕಿನ ಎಚ್. ಡಿ.ಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ ಗುರುವಾರ ಸಂಜೆ ನಾಲ್ಕು ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತೆಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು ಪೂಜೆ ಸಲ್ಲಿಸಿದ ಬಳಿಕ ಗರುಡವಂದು ಹಾರಿ ಬಂದು ರಥವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿತು ಆಗರದ ಮುಂದಕ್ಕೆ ಚಲಿಸುತ್ತದೆ. ಗರುಡನ ಆಗಮನ ಕಾಯುತ್ತಿದ್ದ ಭಕ್ತರು ಗರುಡ ಬಂದು ಸುತ್ತು ಹಾಕುವಾಗ ಗೋವಿಂದ ಗೋವಿಂದ ಗೋವಿಂದ ಎಂದು ಹರ್ಷೋದ್ಗಾರ ಮುಳುಗಿಸಿದರು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಗರುಡ ಪಕ್ಷಿ ಎಂದು ಎಲ್ಲಿಂದಲೋ ಹಾರಿ ಬರುತ್ತದೆ ಮತ್ತೆ ಎಲ್ಲಿಗೆ ಹೋಗುತ್ತದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ರಥೋತ್ಸವದ ವೇಳೆ ಬರುವ ಗರುಡ ಪಕ್ಷಿ ಬೇರೆ ದಿನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಜಾತ್ರೆಯ ದಿನ ಮಾತ್ರ ಬರುತ್ತದೆ ಹಾಗಾಗಿ ರಥೋತ್ಸವದ ವೇಳೆ ಭಕ್ತರ ಎಲ್ಲರ ಚಿತ್ತ ಆಕಾಶದಂತೆ ನೆಟ್ಟಿರುತ್ತದೆ ಇದೇ ಸಂದರ್ಭದಲ್ಲಿ ರಥಕ್ಕೆ ಹಾಕಿದ ಹೂವಿನ ಹಾರ ಹರಾಜು ನಡೆಯಿತು ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು ಜಾತ್ರೆಯಲ್ಲಿ ಕುಡಿಯುವ ನೀರು ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗಿತ್ತು ದೇವಾಲಯ ಸಮಿತಿ ಅಧ್ಯಕ್ಷ ರಂಗಯ್ಯ ಖಜಂಚಿ ಸಣ್ಣ ಸಿದ್ದಪ್ಪ ಕಾರ್ಯದರ್ಶಿ ಜಿಎನ್ ಶೇಷಾದ್ರಿ ತಹಸೀಲ್ದಾರ್ ಬಿಬಿ ಫಾತಿಮಾ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು ಗ್ರಾಮಸ್ಥರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು …… ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ದ್ವಾರ ಬಾಗಿಲ ಬಳಿ ಕರೆತರಲಾಯಿತು ನಂತರ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಭಕ್ತ ಸಮೂಹ ರಥವನ್ನು ಹೇಳಿರುವ ಪ್ರಾರಂಭವಾಗುತ್ತಿರುವಾಗ ಗರುಡ ಪಕ್ಷಿ ಎಂದು ಎತ್ತರದಿಂದಲೇ ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಾಯವಾಯಿತು ಇಲ್ಲಿನ ರಥೋತ್ಸವ ಕೇಂದ್ರ ಬಿಂದುವೇ ಗರುಡ ಪಕ್ಷಿ ಆ ಗರುಡ ಪಕ್ಷಿ ಆಗಮನವನ್ನೇ ಕಾಯುತ್ತಿದ್ದ ಸಾವಿರಾರು ಭಕ್ತರಿಗೆ ಆನಂದದ ಒಳ್ಳೆಯ ಹರಿಯಿತು. ಹೊರಕೆ ದೇವಪುರದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಥದ ಸುತ್ತ ಪ್ರದಕ್ಷಿಣೆ ಹಾಕಿದ ಗರುಡ….

ವರದಿ, ನವೀನ್ ಅರಸನಗಟ್ಟ

Leave a Reply

Your email address will not be published. Required fields are marked *