ಜೀವನ ಅರಿತು ಬದುಕು ಕಟ್ಟಿಕೊಳ್ಳಲು ಚಿಂತಿಸಬೇಕು…!!!

Listen to this article

ಜೀವನ ಅರಿತು ಬದುಕು ಕಟ್ಟಿಕೊಳ್ಳಲು ಚಿಂತಿಸಬೇಕು..

ಹೊಳಲ್ಕೆರೆ : ಇತಿಹಾಸದಲ್ಲಿ ಮನುಷ್ಯ ಕಠಿಣ ಮನಸ್ಸಿನವನಾಗಿದ್ದ, ಇಂದಿನ ಮನುಷ್ಯ ಸುಂದರವಾದ ನಯವಂಚಕನಾಗಿದ್ದಾನೆ. ಜೀವನ ಅರಿತು ಬದುಕು ಕಟ್ಟಿಕೊಳ್ಳಲು ಚಿಂತಿಸಬೇಕೆಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಮೂರ್ತಿ ಹೆಚ್.ಬಿಲ್ಲಪ್ಪ ತಿಳಿಸಿದರು.
ಹೊಳಲ್ಕೆರೆ ತಾಲೂಕು ರಾಜ್ಯ ನಿವೃತ್ತ ನೌಕರರ ಸಂಘ ಮಂಗಳವಾರ ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ರಜತ ಮಹೋತ್ಸವ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇವತ್ತು ಬುದ್ದಿವಂತಿಕೆಯಲ್ಲಿ ಕಡಿಮೆ ಇಲ್ಲ, ಸಾಧಿಸುವ ಶಕ್ತಿ ಯುಕ್ತಿ ಇದೆ. ಅದರೇ ಎಲ್ಲಾರು ಸ್ವಾರ್ಥಿಯಾಗಿದ್ದವೇ. ನಿಸ್ವಾರ್ಥಿಯಾಗಿ ಸಮಾಜ ಸೇವೆ ಮಾಡಬೇಕೆನ್ನುವ ಮನಸ್ಸಿಲ್ಲ. ನಾವು ನಿಸ್ವಾರ್ಥಿಯಾಗಿ ಮುಂದಿನ ಪೀಳಿಗೆಗೆೆ ಮಾರ್ಗದರ್ಶನ ಮಾಡಬೇಕು. ಇಂದಿನ ಯುವಜನರಲ್ಲಿ ಗುರುಹಿರಿಯರ ಬಗ್ಗೆ ಗೌರವಿಲ್ಲ. ಮನುಷ್ಯ ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ. ಇಂತಂತ ಸಮಾಜದಲ್ಲಿ ನಾವೇಲ್ಲ ಇದ್ದೇವೆ ಎನ್ನುವುದು ನೊವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಜೀವನ ಎಂದರೇ ಏನು ?, ಅದು ಹೇಗೆ ಎನ್ನುವ ಅಲೋಚ ಬಗ್ಗೆ ಚಿಂತಿಸಬೇಕು. ನಾನು ವಕೀಲನಾಗಿದ್ದಾಗ ಸ್ವಾತಂತ್ರವಾಗಿದೆ. ನ್ಯಾಯಾಮೂರ್ತಿಯಾಗಿದ್ದಾಗ ನಾನು ಪಂಜರದ ಪಕ್ಷಿಯಾಗಿದದ್ದೆ. ನಾನು ಯಾರ ಜತೆ ಹೋಗಲಿಲ್ಲ. ಮಾತನಾಡಲ್ಲಿಲ್ಲ. ಎಲ್ಲವೂ ಸಂಶಯದಿಂದ ಇತ್ತು. ಈಗಾ ನಿವೃತ್ತಿಯಾಗಿದ್ದಾನೆ. ಈಗಾ ನಾನು ಸ್ವಾತಂತ್ರ‍್ಯ ಬದುಕಿನ ಕಡೆಯಲ್ಲಿದ್ದೇನೆ. ಅಂತಂಹ ಸ್ವಾತಂತ್ರ ಜೀವನವೇ ನಿವೃತ್ತ ಜೀವನ ಎಂದು ಭಾವಿಸಬೇಕು. ನಿವೃತ್ತ ಜೀವನ ಹೇಗೆ ನಡೆಸಬೇಕೆಂದರೇ ಭಾರತ ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕು ಬಾಧ್ಯತೆಗಳು, ಸಂವಿಧಾನ ವ್ಯವಸ್ಥೆ ಜತೆ ಕರ್ತವ್ಯಗಳನ್ನು ನಿರ್ವಹಿಸುವ ಕೆಲಸ ವಿರುತ್ತದೆ. ನಾವೆಲ್ಲ ಕೆಲಸದಿಂದ ನಿವೃತ್ತರಾಗಿದ್ದು, ಜೀವನದಿಂದಲ್ಲ. ನಾವೇಲ್ಲ ಜೀವನದ ದಾರಿಯಲ್ಲಿ ವಕೀಲರಾಗಿ, ಇಂಜನೀಯರಾಗಿ, ಶಿಕ್ಷಕರಾಗಿ ಪಡೆದ ಎಲ್ಲಾ ಅನುಭವವನ್ನು ಮಕ್ಕಳಲ್ಲಿ ಯುವಕರಲ್ಲಿ ಹಂಚಿಕೊಳ್ಳಬೇಕು. ನಮ್ಮ ಆಲೋಚನೆ ಅನುಭವಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ತಪ್ಪುಒಪ್ಪ್ಪುಗಳ ವಿರ್ಮರ್ಶೆ ಮಾಡಬೇಕು. ವಿಶ್ರಾಂತ ಜೀವನದಲ್ಲಿ ಅರೋಗ್ಯವಾದ ಮನಸ್ಸು, ಆರೋಗ್ಯವಾದ ಕಾಯಬೇಕು. ಎಲ್ಲಾ ಪುಸ್ತಕವನ್ನು ಓದಿದರೂ ಆರೋಗ್ಯಕ್ಕೆ ಬೇಕಾದ ಪುಸ್ತಕ ಅಭ್ಯಾಸಕ್ಕೆ ಒತ್ತು ನೀಡಬೇಕು. ನಾವು ಕೈಗೊಳ್ಳುವ ಕೆಲಸಗಳು ಆರೋಗ್ಯ ಪೂರಕವಾಗಿ ಇರಬೇಕು. ಆಗ ನಾವು ಉತ್ತಮ ವಿಶ್ರಾಂತ ಜೀವನ ಕಂಡು ಕೊಳ್ಳಲು ಸಾಧ್ಯವಿದೆ ಎಂದರು.
ವಿಶ್ರಾಂತ ಜೀವನದಲ್ಲಿ ವೈಚಾರಿಕ ವಿಷಯ ತಿಳಿದುಕೊಳ್ಳಬೇಕು. ಡಾ.ಬಿ.ಆರ್.ಆಂಬೇಡ್ಕರ್, ಬುದ್ದ, ಗಾಂಧಿ, ಬಸವ ಚಿಂತನೆಗಳನ್ನು ಅರಿತುಕೊಳ್ಳಬೇಕು. ಗ್ರಂಥಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಪತ್ರಿಕೆ ಜತೆ ಪುಸ್ತಕ ಓದುವ ಹವ್ಯಾಸ ರೂಡಿಸಿಬೇಕು. ನಾನು ಗ್ರ‍್ರಂಥಾಲಯದಲ್ಲಿ ರಾಮಕೃಷ್ಣ ಪರಮಹಂಸರ ಪುಸ್ತಕದಲ್ಲಿರುವ ವಿಚಾರಗಳಿಗೆ ಪ್ರೇರಿತನಾಗಿ ಅವರ ಮಾರ್ಗದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾಗಿದ್ದೇನೆ, ಎಲ್ಲಾರು ಯಶಸ್ಸಿನ ಮಾರ್ಗಕಂಡುಕೊಳ್ಳಲು ಚಿಂತಕರ ಚಿಂತನೆಗೆಳು ಬದುಕಿಗೆ ಬೇಕೆಂದು ತಿಳಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಹೆಚ್.ಶಿವಲಿಂಗಪ್ಪ, ಜಿಲ್ಲಾಧ್ಯಕ್ಷ ಆರ್.ರಂಗಪ್ಪರೆಡ್ಡಿ, ಬಿಓಒ ಶ್ರೀನಿವಾಸ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಕಾರ್ಯದರ್ಶಿ ಡಿ.ಗೋಪಾಲಪ್ಪ, ಉಪಾಧ್ಯಕ್ಷ ಜಿ.ಈ.ಯತಿರಾಜ್, ಪಿ.ಈಶ್ವರಪ್ಪ, ಜಿ.ಪರಮೇಶ್ವರಪ್ಪ, ಕೆ.ಎಸ್.ನಂಜಪ್ಪ ಹಾಗೂ ನಿವೃತ್ತ ನೌಕರರ ಸಂಘದ ನೂರಾರು ಸದಸ್ಯರು ಉಪಸ್ಥಿತರಿದ್ದರು.  ಹೊಳಲ್ಕೆರೆ ತಾಲೂಕು ನಿವೃತ್ತ ನೌಕರರ ಸಂಘ ಮಂಗಳವಾರ ಹಮ್ಮಿಕೊಂಡ ರಜತ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ.ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend