ಮೊರಾರ್ಜಿ ವಸತಿಶಾಲೆಯಲ್ಲಿ ಅವ್ಯವಸ್ಥೆ..
ಹೊಳಲ್ಕೆರೆ : ಹನುಮಂತದೇವರ ಕಣಿವೆ ಮೊರಾರ್ಜಿ ದೇಸಾಯಿ ವಸತಿ ಶಾಲೆ( ಬಿ.ಸಿ-36) ಪ್ರಾಂಶುಪಾಲರ ಹಾಗೂ ನಿಲಯಪಾಲಕರ ನಿರ್ಲಕ್ಷ್ಯತೆಯಿಂದಾಗಿ ವಸತಿ ಶಾಲೆ ಅವ್ಯವಸ್ಥೆ ಕೂಡಿದೆ.
ಹನುಮಂತದೇವರ ಕಣಿವೆಯ ಗುಡ್ಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೋಟ್ಯಾಂತರ ರೂ.ಖರ್ಚು ಮಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ವಸತಿ ನಿಲಯದಲ್ಲಿ 250 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತಶಾಲೆಗೆ ಪ್ರವೇಶಾತಿ ಪಡೆದುಕೊಂಡಿರುವ ಎಲ್ಲಾ ಮಕ್ಕಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕುಟುಂಬದಿಂದ ಬಂದವರಾಗಿದ್ದಾರೆ.
ತಣ್ಣೀರಿನಲ್ಲಿ ಸ್ನಾನ :
ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ಇರುವ ವಸತಿ ನಿಲಯಗಳಲ್ಲಿ ಕಳೆದ ಒಂದು ವರ್ಷಗಳಿಂದ ಮಕ್ಕಳಿಗೆ ಬಿಸಿ ನೀರು ಸಿಗುತ್ತಿಲ್ಲ. ಇದರಿಂದ ಸ್ನಾನಕ್ಕೆ ಬಿಸಿ ನೀರು ಸಿಗದೆ ತಣ್ಣೀರಿನಲ್ಲಿ ವಿಧ್ಯಾರ್ಥಿಗಳು ಸ್ನಾನ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ವಿಪರೀತ ಶೀತವಾಗಿ ವಿಧ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬುದು ಪೋಷಕರ ಆರೋಪವಾಗಿದೆ. ರಾತ್ರಿ 9 ಗಂಟೆ ಆದರೆ ಮುಗಿತು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ವಸತಿ ನಿಲಯಗಳಲ್ಲಿ ನೀರು ಬರುವುದಿಲ್ಲ.
ಹಾಸಿಗೆ ಕೊರತೆ :
ವಿಧ್ಯಾರ್ಥಿಗಳಿಗೆ ಬೆಚ್ಚಗಿನ ಹಾಸಿಗೆ ಇಲ್ಲ.ಮಂಚದ ವ್ಯವಸ್ಥೆಯು ಇಲ್ಲ.ಮಕ್ಕಳು ನೆಲದ ಮೇಲೆ ಮಲಗಬೇಕು. ಕೆಲವು ಮಕ್ಕಳು ಮಂಚದ ಮೇಲೆ ಮಲಗಿದರೆ ಇನ್ನೂ ಉಳಿದ ಮಕ್ಕಳು ನೆಲದ ಮೇಲೆ ಮಲಗಬೇಕು. ಎಲ್ಲಾ ಕೊಠಡಿಗಳ ಸಮಸ್ಯೆಯೂ ಇದಾಗಿದೆ. ಇದನ್ನು ಸರಿಪಡಿಸುವ ಗೋಜಿಗೆ ಪ್ರಾಂಶುಪಾಲರು ಹಾಗೂ ನಿಲಯಪಾಲಕರು ಕ್ರಮಕೈಗೊಳ್ಳುವಲ್ಲಿ ವಿಫಲಗೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಆಕ್ರೋಶಕ್ಕೆ ಕಾರಣವಾಗಿದೆ.
ಆಹಾರವನ್ನು ಸರಿಯಾಗಿ ಬೇಯಿಸದೆ ಹಾಗೆಯೆ ವಿಧ್ಯಾರ್ಥಿಗಳಿಗೆ ಉಣ ಬಡಿಸಲಾಗುತ್ತಿದೆ. ಇದು ಕೂಡ ವಿಧ್ಯಾರ್ಥಿಗಳ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ವಿಧ್ಯಾರ್ಥಿಗಳು ಹೇಳುತ್ತಾರೆ.
ಶಾಲೆಯಲ್ಲಿ ಆಹಾರದ ಮೋಸ :
ಊಟೋಪಚಾರಕ್ಕಾಗಿ ಈ ವಸತಿ ಶಾಲೆಯ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 1700 ವೆಚ್ಚ ಮಾಡಬಹುದಾಗಿದೆ. ವಾರದಲ್ಲಿ ಮೂರು ಬಾರಿ ಕೋಳಿ ಮೊಟ್ಟೆ. ವಾರದಲ್ಲಿ ಮೂರು ಬಾರಿ ಬಾಳೆಹಣ್ಣು. ವಾರಕ್ಕೊಮ್ಮೆ ಸ್ವೀಟ್ . ತಿಂಗಳಿಗೆ 4 ಬಾರಿ ಚಿಕನ್ ನೀಡಬೇಕು . ನಿಯಂತ್ರಿತ ಅಕ್ಕಿ.ರಾಗಿ.ಗೋಧಿ. ಬೇಳೆಕಾಳು. ಸಾಂಬಾರುಪುಡಿ.ಇತರೆ ಮಸಾಲೆ ಪದಾರ್ಥಗಳು.ಹುಣಸೇಹಣ್ಣು .ಅಡುಗೆ ಎಣ್ಣೆ.ಒಗ್ಗರಣೆ ಸಾಮಾಗ್ರಿ.ಕಡ್ಲೆಬೇಳೆ . ಸಾಸಿವೆ.ಉದ್ದೀನಬೇಳೆ.ಕಡಲೇಕಾಯಿ ಬೀಜ. ತರಕಾರಿ ಈರುಳ್ಳಿ.ಬೆಳ್ಳುಳ್ಳಿ.ಮೆಣಸಿನಕಾಯಿ.ತೆಂಗಿನಕಾಯಿ . ಹಾಲು. ಮೊಸರು.ಸಕ್ಕರೆ. ಕಾಫಿ ಪೌಂಡರ್.ವಿತರಣೆಗೆ ಪ್ರಮಾಣ ನಿಗದಿ ಮಾಡಲಾಗಿದೆ. ಲಘು ಉಪಾಹಾರವಾಗಿ ಮಂಡಕ್ಕಿ.ಬಜ್ಜಿಬೊಂಡ . ಕಡ್ಲೆಹುಸಳಿ. ಮೊಳಕೆಕಾಳು ನೀಡಬೇಕು. ಆದರೆ ಸಿದ್ದಪಡಿಸುವ ಅಡುಗೆಯಲ್ಲಿ ಆಹಾರ ಸಾಮಾಗ್ರಿಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸದೆ ಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರು ಹೆಚ್ಚಾಗುತ್ತಿದೆ.
ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸಿಗಬೇಕಾಗದ ಸೌಕರ್ಯಗಳ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಗಳ ಪರಿಹಾರಕ್ಕೆ ಈ ವರೆಗೂ ಪಾರದರ್ಶಕ ಪ್ರಯತ್ನ ನಡೆದಿಲ್ಲ. ಕಿಟಕಿ ಗಾಜುಗಳು ಹೊಡದು ಸುಮಾರು ತಿಂಗಳು ಆದರೂ ಸರಿಪಡಿಸುವ ಪ್ರಯತ್ನ ಮಾಡಿಲ್ಲ. ಮಕ್ಕಳಿಗೆ ಸರ್ಕಾರ ಮಂಜೂರು ಮಾಡುವ ಸೌಕರ್ಯಗಳ ಕುರಿತು ವಸತಿ ಶಾಲೆ ಪ್ರಕಟಣೆ ಫಲಕದಲ್ಲಿ ಮಾಹಿತಿ ಪ್ರಕಟವಾಗಲ್ಲ . ನಿಲಯಗಳಲ್ಲಿ ಸ್ವಚ್ಛತೆ ಹಾಗೂ ಸಿ.ಸಿ.ಟಿವಿ. ಕ್ಯಾಮೆರಾ ಅಳವಡಿಸದೆ ಇರುವುದು ಕಂಡುಬಂದಿದೆ. ಸರ್ಕಾರ ನೀಡುವ ಕಲಿಕಾ.ವಾಸ್ತವ್ಯ ಸಾಮಾಗ್ರಿ. ಆಹಾರ ಮಕ್ಕಳಿಗೆ ಸಿಕ್ಕರೆ ಪುಣ್ಯ .
ಹೇಳಿಕೆ :-
ವಸತಿ ಶಾಲೆಯಲ್ಲಿ ಅವ್ಯವಸ್ಥೆ ಸರಿಪಡಿಸಬೇಕು . ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆ ವಿರುದ್ಧ ನಮ್ಮ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು.
ನಾಗರಾಜ್ ಕೆರೆಯಾಗಳಹಳ್ಳಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ತಾಲ್ಲೂಕು ಅಧ್ಯಕ್ಷರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030