ಹೊಳಲ್ಕೆರೆ : ಹೊಳಲ್ಕೆರೆ ಪಟ್ಟಣದ ಸರ್ವಾಂಗೀಣ ಆಭಿವೃದ್ಧಿಗೆ ಎಲ್ಲಾ ರೀತಿಯ
ಸಹಕಾರ ನೀಡಲಾಗುತ್ತದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಅವರು ಹೊಳಲ್ಕೆರೆ ಪಟ್ಟಣದ ಪುರಸಭೆಯ ಆವರಣದಲ್ಲಿ ಪುರಸಭೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳಿಂದ ಈಗಾಗಲೇ ಮಂಜೂರಾದ ನಿವೇಶನಗಳ ಈ ಖಾತೆ ಪತ್ರಗಳನ್ನು ಪಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸಬೇಕು. ಇಲ್ಲಿನ ಸದಸ್ಯರು ಪಕ್ಷಾತೀತವಾಗಿ ಹೊಳಲ್ಕೆರೆ ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಲುಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಪಕ್ಷ ರಾಜಕಾರಣದ ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಚುನಾವಣೆ ನಂತರ ನಮ್ಮನ್ನು ಚುನಾಯಿಸಿ ಕಳಿಸಿದ ಜನರಿಗೆ ನ್ಯಾಯ ಕಲ್ಪಿಸಲು ಸರ್ಕಾರದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ನಾವು ಮುಂದಾಗಬೇಕು ಎಂದು ತಿಳಿಸಿದರು.
ಹೊಳಲ್ಕೆರೆಯ ಪುರಸಭೆಯ ವ್ಯಾಪ್ತಿಯಲ್ಲಿರುವ ಶಿವಲಿಂಗಪ್ಪ ಬಡಾವಣೆ, ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳ ಹೆಸರಿಗೆ ಈ ಖಾತೆ ನೊಂದಾಯಿಸಿ ಪುರಸಭೆ ಯಿಂದ ಇಂದು ವಿತರಣೆ ಮಾಡಲಾಗುತ್ತಿದೆ. ಈ ಬಡಾವಣೆ ಅಭಿವೃದ್ಧಿಗೆ ಬೇಕಾದ ಚರಂಡಿ, ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಪ್ರತಿಯೊಬ್ಬ ಪಲಾನುಭವಿಗಳು ಸರ್ಕಾರಿ ಸೌಲಭ್ಯವನ್ನು ಪಡೆದು ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ಸದಸ್ಯರು ಪಟ್ಟಣದ ಸರ್ವಾಂಗೀಣ ಆಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಪುರಸಭೆ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ನಾನು ಸಹ ಕೈಜೋಡಿಸಿ ಸರ್ಕಾರದಿಂದ ಬರುವಂತ ಎಲ್ಲಾ ಅನುದಾನವನ್ನು ಹೊಳಲ್ಕೆರೆ ಪುರಸಭೆಗೆ ಬಿಡುಗಡೆ ಮಾಡಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಈ ಖಾತೆ ನೋಂದಣಿ ಪ್ರಕ್ರಿಯೆಯನ್ನು ನಾವು ಅಧಿಕಾರಕ್ಕೆ ಬಂದ ೧೫ ದಿನಗಳಲ್ಲಿ ಪೂರ್ಣಗೊಳಿಸಿದೆ. ಯರೋಬ್ಬರು ನಿವೇಶನಗಳ ಈ ಖಾತೆ ಪಡೆಯಲು ಕಚೇರಿ ಅಲೆದಾಡುವ ಪ್ರಸಂಗ ತಪ್ಪಿಸಲು ಫಲಾನುಭವಿಗಳಿಗೆ ಈ ಖಾತೆಯನ್ನು ವಿತರಣೆ ಮಾಡಲು ಮುಂದಾಗಿದ್ದೇವೆ.
ಈಗಾಗಲೇ ನಿವೇಶನಗಳನ್ನ ಗುರುತಿಸಿ ಇಂದು ಈ ಖಾತೆಯನ್ನು ಪಲಾನುಭವಿಗಳಿಗೆ ವಿತರಿಸಿದೆ. ಮುಂದಿನ ದಿನಗಳಲ್ಲಿ ವಸತಿ ಯೋಜನೆ ಮೂಲಕ ಮನೆ ನಿರ್ಮಾಣ ಮಾಡಿಕೊಡಲು ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಿಕೊಡಲು ಪುರಸಭೆ ಎಲ್ಲಾ ಸದಸ್ಯರು ಶ್ರಮಿಸಲಿದ್ದಾರೆಂದು ಭರವಸೆ ನೀಡಿದರು.
ಉಪಾಧ್ಯಕ್ಷ ಎಚ್.ಆರ್.ನಾಗರತ್ನ ವೇದಮೂರ್ತಿ, ಪುರಸಭೆ ಸದಸ್ಯರಾದ ಪಿ. ಆರ್.ಮಲ್ಲಿಕಾರ್ಜುನ, ಡಿ.ಎಸ್.ವಿಜಯ, ಕೆ.ಸಿ.ರಮೇಶ್, ಬಿ.ಎಸ್.ರುದ್ರಪ್ಪ ಪಿ.ಎಚ್.ಮುರುಗೇಶ್, ಆರ್.ಎ.ಅಶೋಕ್‌ವ, ಸೈಯದ್ ಸಜಿಲ್, ಮನ್ಸೂರ್ ಮಮತಾ ಜಯಸಿಂಹ ಖಾಟ್ರೋತ್, ಸವಿತಾನರಸಿಂಹ ಖಾಟ್ರೋತ್, ಸಬಿನ ಆಶ್ರಫ್, ಪೂರ್ಣಿಮಾಬಸವರಾಜು, ಸುಧಾಬಸವರಾಜು, ವಸಂತರಾಜು, ನಾಮ ನಿರ್ದೇಶಕ ಸದಸ್ಯರಾದ ಬಸವರಾಜ, ಮಂಜುನಾಥ್, ಮೊಜರ್ ಉಲ್ಲಾ ಖಾನ್, ಪುರಸಭೆಯ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಕಚೇರಿ ವ್ಯವಸ್ಥಾಪಕರಾದ ರಾಧ ಇದ್ದರು.
ಚಿತ್ರಮಾಹಿತಿ:೨೬ ಹೆಚ್.ಎಲ್.ಕೆ೧ ಹೊಳಲ್ಕೆರೆ ಪುರಸಭೆ ಆವರಣದಲ್ಲಿ ಗುರುವಾರ ನಿವೇಶನಗಳ ಈ ಖಾತೆಯನ್ನು ಪಲಾನುಭವಿಗಳಿಗೆ ವಿತರಣೆ ಮಾಡಿದ ಸಂಸದ ಗೋವಿಂದ ಕಾರಜೋಳ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ,ಸದಸ್ಯರು ಇದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030