ಹೊಳಲ್ಕೆರೆ : ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳು ಕಾನೂನಿನ ಬಗ್ಗೆ ಗೌರವ ಹಾಗೂ ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಚಿತ್ರಹಳ್ಳಿ ಗೇಟ್ ಪಿಎಸ್ಐ ಕಾಂತರಾಜ್ ತಿಳಿಸಿದರು.
ತಾಲ್ಲೂಕಿನ ಹೆಚ್.ಡಿ ಪುರ ಗ್ರಾಮದಲ್ಲಿ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಪರಾಧಗಳಾಗುತ್ತಿವೆ. ಕಾನೂನಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯೇ ಇದಕ್ಕೆ ಕಾರಣ . ಇಂಥ ಪ್ರಕರಣಗಳ ಬಗ್ಗೆ ವಿಧ್ಯಾರ್ಥಿ . ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಆಯೋಜಿಸಲಾಗಿದೆ ಎಂದರು.
ವಿಧ್ಯಾರ್ಥಿ ಸಮೂಹದ ಮೇಲೆ ಅಪರಾಧ ತಡೆಗಟ್ಟುವ ಗುರುತರ ಜವಾಬ್ದಾರಿ ಇದ್ದು. ಮೊದಲು ವಿಧ್ಯಾರ್ಥಿಗಳು ಜಾಗೃತಿಗೊಂಡು ಸಾರ್ವಜನಿಕರಿಗೆ ತಿಳಿ ಹೇಳಬೇಕು. ಇಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ. ಲೈಂಗಿಕ ಕಿರುಕುಳ ಮತ್ತಿತರ ದೌರ್ಜನ್ಯಗಳ ಬಗ್ಗೆ ಸದಾ ಜಾಗೃತಿವಹಿಸಬೇಕು. ಇತ್ತೀಚೆಗೆ ಯುವ ಸಮೂಹ ಮಾದಕ ವ್ಯಸನಕ್ಕೆ ದಾಸರಾಗಿ ಅಪರಾಧ ಮಾಡುವ ಜತೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದ್ದರಿಂದ ಯುವ ಜನತೆ ಜವಾಬ್ದಾರಿ ಅರಿತು ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು. ಅಪರಾಧ ತಡೆ ಮಾಸಚಾರಣೆ ಅಂಗವಾಗಿ ಪೊಲೀಸ್ ಠಾಣೆಯಿಂದ ಗ್ರಾಮದ ಪ್ರಮುಖ ವೃತ್ತಗಳಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು. ಯುವಕರು. ಆಟೋ ಚಾಲಕರು. ಪೊಲೀಸ್ ಸಿಬ್ಬಂದಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030