ಕಾಮಗಾರಿಗಳಲ್ಲಿ ಭ್ರಷ್ಟಾಚಾರ. ತನಿಕೆಗೆ ಕಾನೂನು ಹೋರಾಟ’
ಹೊಳಲ್ಕೆರೆ : ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ತುಂಬಾ ಭ್ರಷ್ಟಾಚಾರ ನಡೆದಿರುವ ದೂರುಗಳು ಬಂದಿದ್ದು ಸಮಗ್ರ ತನಿಖೆ ಕೈಗೊಳ್ಳಲು ಕಾನೂನು ಹೋರಾಟ ನಡೆಸುತ್ತೇನೆ ಎಂದು ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್ ತಿಳಿಸಿದರು.
ಅವರು ಪುರಸಭೆಯ ಆವರಣದಲ್ಲಿ ಪಟ್ಟಣದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಕ್ರೀಡಾಂಗಣ, ಶಿವನಕೆರೆಯಲ್ಲಿ ಕಟ್ಟಿರುವ ಕಾಮಗಾರಿಗಳಲ್ಲಿ ಸಾಕಷ್ಟು ಕಳಪೆ ಗುಣಮಟ್ಟ ಎದ್ದು ಕಾಣುತ್ತಿದೆ. ಶಿವನಕೆರೆಯಲ್ಲಿನ ಅವೈಜ್ಞಾನಿಕ ಕಾಮಗಾರಿ ಸಾವಿನ ದಾರಿಯಾಗಿ ಮಾರ್ಪಾಡಾಗಿದೆ. ಅವೈಜ್ಞಾನಿಕ ಕಾಮಗಾರಿ ಪರಿಣಾಮ ಪ್ರವಾಸಿಗರು ಕೆರೆಗೆ ಉರಳಿ ಬೀಳುವ ದೊಡ್ಡ ಅಪಾಯವಿದೆ. ಜೊತೆಗೆ ಒಂದು ಕೋಟಿ ಅನುದಾನದಲ್ಲಿ ಪುಷ್ಕರಣಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ಇದ್ದರೂ ಪುಷ್ಕರಣಿಗೆ ನಾಪತ್ತೆಯಾಗಿದೆ.
ಪಟ್ಟಣದ ಕಾಲಭೈರವ ಮತ್ತು ಸಿದ್ದರಾಮೇಶ್ವರ ದೇವಾಲಯದ ಪುಷ್ಕರಣಿ ನಿರ್ಮಾಣಕ್ಕೆ ಸ್ಮಶಾನದ ಕಲ್ಲುಗಳನ್ನು ಬಳಕೆ ಮಾಡಲಾಗುತ್ತದೆ, ಇದು ಸರಿಯಲ್ಲ. ಸಾಂಪ್ರದಾಯಿಕವಾಗಿದ್ದ ದುರಸ್ತಿ ನೆಪದಲ್ಲಿ ಪಾಳುಬಿದ್ದ ಸುತ್ತಮುತ್ತಲಿನ ನಾಗರಿಕ ಬದುಕಿಗೆ ಮಾರಕವಾಗಿದೆ. ಕಾಮಗಾರಿ ನೆಪದಲ್ಲಿ ಹಣ ಅಪವ್ಯಯವಾಗಿತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಸೌದ ಶಿಕ್ಷಣ ಇಲಾಖೆ ಜಾಗದಲ್ಲಿ ನಿರ್ಮಾಣ ಮಾಡಿದ್ದರೂ ಇದುವರೆಗೂ ಸರ್ಕಾರದಿಂದ ಅನುಮತಿ ಹಾಗೂ ಪುರಸಭೆ ಯಿಂದ ಪರವಾನಿಗೆ ಪಡೆದುಕೊಂಡಿಲ್ಲ. ಶಾಲೆ ಜಾಗದಲ್ಲಿ ಬೇರೆ ಇಲಾಖೆ ಅನುದಾನದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಬಿಲ್ ಪಡೆದು ಅಕ್ರಮ ನಡೆಸಲಾಗುತ್ತದೆ. ಸಮಗ್ರ ತನಿಖೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.
ಪಟ್ಟಣದ ವ್ಯಾಪ್ತಿಯಲ್ಲಿ ಅಪಘಾತಗಳನ್ನ ತಡೆಗಟ್ಟಲು ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾ ವನ್ನು ಪುರಸಭೆ ಯಿಂದ ಈಗಾಗಲೇ ಅಳವಡಿಸಿದೆ. ಆದರೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಗಳು ಇದ್ದರೂ ಅವು ನಿಷ್ಕ್ರಿಯೆ ಗೊಂಡಿವೆ. ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಂತು ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.
ಇನ್ನು ಹಲವಾರು ಬಡಾವಣೆಗಳಲ್ಲಿ ಬಾರ್ ಗಳಿಂದ ಮಧ್ಯಪಾನದ ಬಾಟಲಿಗಳನ್ನು ತಂದು ಕುಡಿದು ಬಿಸಾಕುತ್ತಿರುವ ದೃಶ್ಯಗಳು ಹೆಚ್ಚುತ್ತಿವೆ. ಇದರಿಂದ ಬಡಾವಣೆ ನಿವಾಸಿಗಳಿಗೆ ನಿದ್ದೆ ಕೆಡಿಸಿದೆ. ಅಕ್ರಮವಾಗಿ ಮಾರಾಟದಲ್ಲಿ ತೊಡಗಿರುವ ಮಧ್ಯಪಾನ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಗೆ ಸೂಚಿಸಿದರು.
ಸರ್ಕಾರಿ ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳು ದೈಹಿಕ ವಾಗಿ ವೀಕ್ ಅಗುತ್ತಿದ್ದಾರೆ.
ಗುಣಮಟ್ಟದ ಪಡಿತರವನ್ನ ಖರೀದಿಸದೆ ನಿಲಯ ಪಾಲಕರು ನಿರ್ಲಕ್ಷ ವಹಿಸಿದ್ದಾರೆ. ಗುಣಮಟ್ಟದ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷ ಎಚ್. ಆರ್. ನಾಗರತ್ನ ವೇದಮೂರ್ತಿ, ಮಾಜಿ ಉಪಾಧ್ಯಕ್ಷ ಕೆ. ಸಿ. ರಮೇಶ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ವ್ಯವಸ್ಥಾಪಕಿ ರಾಧಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕಾಂತರಾಜ್, ಹಿಂದುಳಿದ ವರ್ಗಗಳ ತಾಲೂಕ್ ಅಧಿಕಾರಿ ಪ್ರದೀಪ್, ಸಿಡಿಪಿಓ ಮಮತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹೊಳಲ್ಕೆರೆ ಪುರಸಭೆ ಕಚೇರಿಯಲ್ಲಿ ಕರೆದಿದ್ದ ತಾಲೂಕು ಮಟ್ಟಣದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಸಿಂಹ ಖಾಟ್ರೋತ್ ಮಾತನಾಡಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030