ಕೆಂಚಾಪುರ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಪ್ರೌಢಶಾಲಾ ಮೈದಾನದಲ್ಲಿ 2024-25 ನೇ ಸಾಲಿನ ಹೊಳಲ್ಕೆರೆ ವಲಯ ಮಟ್ಟದ ತರಳಬಾಳು ಕ್ರೀಡಾಮೇಳವನ್ನು ಹಮ್ಮಿಕೊಂಡಿದ್ದು ಧ್ವಜಾರೋಹಣವನ್ನು ಅಧ್ಯಕ್ಷತೆ ವಹಿಸಿದ್ದ ಯು.ಎಚ್, ತಿಮ್ಮಣ್ಣನವರು ನೆರವೇರಿಸಿದರು ಕ್ರೀಡಾ ದ್ವಜವನ್ನು ಬೆಳಗುವ ಮೂಲಕ T.P.E.O ವಿಜಯ್ ಕುಮಾರ್ ಕ್ರೀಡೆಗೆ ಚಾಲನೆ ನೀಡಿದರು,ಮಹೇಶ್ವರಪ್ಪ ವಲಯ ಅಧಿಕಾರಿಯು ಭಾಗವಯಿಸಿರುವ ಈ ವಿದ್ಯಾರ್ಥಿಗಳಲ್ಲಿ ಸಚಿನ್ ತೆಂಡೂಲ್ಕರ್ ಉತ್ತಮ ಕ್ರೀಡಾಪಟುಗಳು ಆಗುವ ಸಾಧ್ಯತೆ ಇದೆ ಎಂದರು , ಕಲ್ಲೇಶ್ವರಪ್ಪ C.R.P ರವರು ಕರಾಟೆ ತರಬೇತಿಯಲ್ಲಿ ವಿದ್ಯಾರ್ಥಿ ಕಾರು ಅಪಘಾತವಾಗಿ ಎಡ ಕೈ ಹೋಗುತ್ತದೆ ಗುರುಗಳು ಒಂದು ಪಂಚ್ ನ್ನು ಸುಮಾರು ಎರಡು ವರ್ಷಗಳ ಕಲಿಸುತ್ತಾರೆ ಆತ್ಮವಿಶ್ವಾಸದಿಂದ ಕಲಿತು ಬಲಾಡ್ಯ ಎದುರಾಳಿಯನ್ನು ಮಣಿಸುತ್ತಾನೆ ಆ ವಿದ್ಯಾರ್ಥಿಯು ದೊಡ್ಡ ಕರಾಟೆ ಪಟುವಾಗಿ ಬೆಳೆಯುತ್ತಾನೆ ಎಂದರು. 12 ಶಾಲೆಗಳಾದ 1)ಚಿಕ್ಕಜಾಜೂರು 2) ಗೋಡಬನಹಳ್ 3)ಸಾಣೆಹಳ್ಳಿ 4) ಚಿತ್ರಹಳ್ಳಿ 5) ಹೆಬ್ಬಳ್ಳಿ 6)ಹೊಳಲ್ಕೆರೆ 7)ಹೊಸದುರ್ಗ 8)ಜಾನಕಲ್ 9)ರಾಮಗಿರಿ 10)ರಂಗಾಪುರ 11)ಶಿವಪುರ 12) ಕೆಂಚಾಪುರ ಈ ಶಾಲೆಗಳ ವಿದ್ಯಾರ್ಥಿಗಳು ವಾಲಿಬಾಲ್,ಖೋಖೋ,ಕಬ್ಬಡಿ, ಲಾಂಗ್ ಜಂಪ್, ಬ್ಯಾಟ್ ಮಿಟನ್, ಕ್ರೀಡೆಯಲ್ಲಿ ಭಾಗವಯಿಸಿದ್ದರು ಬಹುಮಾನ ಪ್ರಾಯೋಜಕರು ಲಿಂ,ಗೌಡ್ರು ಗಂಗಾಧರಪ್ಪ ತುಪ್ಪದಹಳ್ಳಿ, ಅನ್ನ ದಾಸೋಹ ವ್ಯವಸ್ಥೆ ಕೆಂಚಾಪುರ ಶಾಲಾ ಸ್ಥಳೀಯ ಸಮಿತಿ ಸದಸ್ಯರು ಮತ್ತು ದೇವರ ಹೊಸಹಳ್ಳಿ ಗ್ರಾಮದವರು, ಶಾಮಿಯಾನ ಸಿಂಗೇನಹಳ್ಳಿ ಗ್ರಾಮಸ್ಥರು ಮಾಡಿದ್ದರು ಮುಖ್ಯೋಪಾಧ್ಯಾಯರಾದ ಸುಜಾತ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಿಬಾಯಿ,ಗ್ರಾಮದ ಸದಸ್ಯರಾದ ಆನಂದಪ್ಪ,ಜಯ್ಯಪ್ಪ,ಹೊಸಮನೆ ಮಲ್ಲೇಶಪ್ಪ,ಮೂರ್ತಿನಾಯ್ಕ, ಕೆ,ಎನ್,ಅಜಯ್,ಜಯದೇವಪ್ಪ,ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030