ಅವ್ಯವಸ್ಥೆಯ ಆಗರವಾಗಿವೆ ಚಿತ್ರಹಳ್ಳಿಯ ಮೊರಾರ್ಜಿ ವಸತಿ ಶಾಲೆಗಳು…!!!

Listen to this article

ಅವ್ಯವಸ್ಥೆಯ ಆಗರವಾಗಿವೆ ಚಿತ್ರಹಳ್ಳಿಯ ಮೊರಾರ್ಜಿ ವಸತಿ ಶಾಲೆಗಳು

ಹೊಳಲ್ಕೆರೆ. ಮೊರಾರ್ಜಿ ವಸತಿ ಶಾಲೆಗಳೆಂದರೆ ಶುಚಿತ್ವವಾಗಿ ಸ್ವಚ್ಚವಾಗಿ ಇರುವುದಕ್ಕೆ ರಾಜ್ಯದಲ್ಲಿ ಹೆಸರುವಾಸಿಯಾಗಿವೆ. ಪೋಷಕರು ಈ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ತಮ್ಮ ಮಕ್ಕಳಿಗೆ ಯಾವುದೇ ತೊಂದರೆ ಸಂಕಷ್ಟವಿಲ್ಲದೆ ಆರಾಮಾಗಿ ವಿದ್ಯಾಬ್ಯಾಸ ಮಾಡುತ್ತಾರೆಂದು ಮುರಾರ್ಜಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಇದೇ ಕಾರಣಕ್ಕೆ ತುಂಬಾ ಆಸಕ್ತಿ ವಹಿಸುತ್ತಾರೆ.

ಆದರೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ನಲ್ಲಿರುವ ಮೊರಾರ್ಜಿ ವಸತಿ ಶಾಲೆಗಳು ಅವ್ಯವಸ್ತೆಯ ಆಗರವಾಗಿವೆ ಅಶುಚಿತ್ವದಿಂದ ಗಬ್ಬೆದ್ದು ನಾರುತ್ತಿವೆ. ಮಲ ಮುತ್ರದ ಗುಂಡಿಗಳು ಅನೇಕ ತಿಂಗಳುಗಳಿಂದ ತುಂಬಿ ಶಾಲೆಯ ಆವರಣದೊಳಗೆ ದುರ್ನಾತವಿಕ್ಕಿ ಹರಿಯುತ್ತಿವೆ, ಶಾಲೆಯ ಆವರಣದಲ್ಲಿ ಆಟದ ಮೈದನದ ಹತ್ತಿರಾ. ಗಿಡ ಗಂಟಿಗಳು ಪೆಳೆಗಳು ಹೆಮ್ಮರವಾಗಿ ಬೆಳೆದು ನಿಂತಿದ್ದು ಹಾವು ಚೇಳುಗಳ ಕಾಟದಿಂದ ವಿದ್ಯಾರ್ಥಿಗಳು ಹಾಗೂ ಅಕ್ಕ ಪಕ್ಕದಲ್ಲಿ ವಾಸುಸುತ್ತಿರುವ ಕಾಡು ಸಿದ್ದ ಜನರು ಸ್ಥಳೀಯ ನಿವಾಸಿಗಳು ದಿನ ನಿತ್ಯ ನರಕಯಾತನೆ ಅನುಭವಿಸಯವಂತಾಗಿದೆ.
ಚಿತ್ರಹಳ್ಳಿ ಗೇಟ್ ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ( ಎಸ್ಸಿ ) ಮುರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜು. ( ಎಸ್ಸಿ ) ಮೊರಾರ್ಜಿ ದೇಸಾಯಿ ವಸತಿ ಶಾಲೆ ( ಎಸ್ಟಿ ) ಮೊರಾರ್ಜಿ ದೇಸಾಯಿ ವಸತಿ ಶಾಲೆ ( ಎಸ್ಸಿ ) ಈ ವಸತಿ ಶಾಲೆಗಳು ಒಂದೆ ಕ್ಯಾಂಪಸ್ ನಲ್ಲಿದ್ದು ಸರಿಸುಮಾರು ಒಂದು ಸಾವಿರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಂದೊಂದು ವಸತಿ ಶಾಲೆಗೆ ಪ್ರತ್ಯೇಕವಾದ ಶೌಚಾಲಯ ಹಾಗೂ ಬಾತ್ ರೂಂ ಗುಂಡಿ ನಿರ್ಮಾಣ ಮಾಡುವುದು ಕಡ್ಡಾಯವಾಗಿದೆ. ಆದರೆ ನಾಲ್ಕು ವಸತಿ ಶಾಲೆಗಳಿಗೆ ಒಂದೇ ಒಂದು ಬಾತ್ ರೂಂ ಗುಂಡಿ ನಿರ್ಮಾಣ ಮಾಡಿರುವುದರಿಂದಾಗಿ ಮಲ‌ ಮೂತ್ರದ ಗುಂಡಿಗಳು ಅನೇಕ ತಿಂಗಳುಗಳಿಂದ ತುಂಬಿ ಹೊರಗೆ ಹರಿಯುತ್ತಿದ್ದು, ದುರ್ನಾತವಿಕ್ಕಿವೆ. ಇದರ ಬಗ್ಗೆ ಯಾರು ಸಹ ಈ ವರೆಗೂ ಗಮನ ಹರಿಸದೆ ಬೇಜವಬದ್ದಾರಿ ತೋರಿದ್ದಾರೆ. ಸೌಚಾಲಯದ ಗುಂಡಿ ತುಂಬಿ ದುರ್ನಾತವಿಕ್ಕಿ ಹರಿಯುತ್ತಿದ್ದು ಇದರಿಂದ ಈ ವಸತಿ ಶಾಲೆಯ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮಗಳು ಬೀರುವಂತಹ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಚಿಕ್ಕ ವಯಸ್ಸಿನಲ್ಲಿ ರೋಗ ರುಜಿನಗಳಿಗೆ ತುತ್ತಾಗುವಂತ ಸಂದರ್ಭ ಅಲ್ಲಿನ ಮಕ್ಕಳು ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ರಾಂಶುಪಾಲರಾಗಿರಲಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಿರಲಿ ಇದುವರೆಗೂ ಒಂದು ಮಲಮೂತ್ರ ಗುಂಡಿಗಳು ವರ್ಷದಿಂದ ತುಂಬಿ ಹೊರಗೆ ಹರಿದು ದುರ್ವಾಸನೆ ಬರುತ್ತಿದ್ದು ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದರೂ ಈ ಬಗ್ಗೆ ಮಾತ್ರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ .

ಸುಮಾರು ಒಂದು ವರ್ಷಗಳಿಂದ ಮೂಲಮೂತ್ರ ಗುಂಡಿ ತುಂಬಿ ಹರಿಯುತ್ತಿದ್ದರು ಸ್ವಚ್ಛತೆ ಮಾಡದೆ. ಕೊಳಚೆ ನೀರು ತುಂಬಿ ಕ್ರಿಮಿ ಕೀಟಗಳು ಹೆಚ್ಚಾಗಿ ಅಲ್ಲಿ ವಾಸ ಮಾಡುವ ವಿಧ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ವಸತಿ ಶಾಲೆಯ ಪ್ರಾಂಶುಪಾಲರುಗಳು ಕೂಡಲೇ ಎಚ್ಚೆತ್ತುಕೊಂಡು ತುಂಬಿ ಹರಿಯುತ್ತಿರುವ ಮಲ ಮೂತ್ರದ ಗುಂಡಿಯನ್ನು ಸ್ವಚ್ಚ ಮಾಡಿ ಕ್ಯಾಂಪಸ್ ನಲ್ಲಿ ಸಾಂಕ್ರಾಮಿಕ ಖಾಯಿಲೆಗಳು ಆಗದಂತೆ ತಡೆ ಗಟ್ಟಬೇಕಾಗಿದೆ.

ಇಡೀ ಕ್ಯಾಂಪಸ್ ಒಳಗೆ ಹಾಗೂ ಆಟವಾಡುವ ಮೈದಾನಗಳಲ್ಲಿ ಗಿಡ ಗಂಟಿಗಳು ಹೆಮ್ಮರವಾಗಿ ಇದರ ಬಗ್ಗೆ ಅಧಕಾರಿಗಳು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಜನರು ಪ್ರಾಂಶುಪಾಲರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಆಗಿಲ್ಲ. ಇತ್ತ ಕಡೆ ತಿರುಗಿಯೂ ನೋಡಿಲ್ಲ. ಇದನ್ನು ಸರಿಪಡಿಸುವ ಹೊಣೆ ಯಾರ ಮೇಲಿದೆ ಅಧಿಕಾರಿಗಳ ಚಲ್ಲಾಟಕ್ಕೆ ಒಂದು ಸಾವಿರ ವಿಧ್ಯಾರ್ಥಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ವರದಿ ಕಂಡ ಮೇಲಾದರೂ ಮಲಮೂತ್ರ ಗುಂಡಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆಯ ಪಕ್ಕದಲ್ಲಿ ಮಲಮೂತ್ರ ಗುಂಡಿ ತುಂಬಿ ಹರಿಯುತ್ತಿರುವ ಕಾರಣ ಕಾಂಪೌಂಡ್ ಪಕ್ಕದಲ್ಲಿ ಇರುವ ಕಾಡುಸಿದ್ದ ಜನಾಂಗ ಹಾಗೂ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳ ಅರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಇದರ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಹುಡುಕಬೇಕು ‌ . ವಸತಿ ಶಾಲೆಗಳ ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಶ್ರೀಧರ್ ಚಿತ್ರಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend