ಹೊಳಲ್ಕೆರೆ ಪಟ್ಟಣದ ಒಂಟಿ ಕಂಬ ಮುರುಘ ಮಠದಲ್ಲಿ ನಡೆದ ವಚನ ಸಂದೇಶ ಮತ್ತು ಹಸಿರು ಜಾಗೃತಿ ಪಾದಯಾತ್ರ ಪೂರ್ಣಬಾವಿ ಸಭೆ…!!!

Listen to this article

ಹೊಳಲ್ಕೆರೆ : ವಚನ ಸಂದೇಶ ಮತ್ತು ಹಸಿರು ಜಾಗೃತಿ ಕುರಿತು ಸಾಮಾಜಿಕ ಜಾಗೃತಿ ಆಂದೋಲನ ಕೈಗೊಳ್ಳಲು ಜನವರಿ ೨೦ ರಂದು ಹೊಳಲ್ಕೆರೆ ಒಂಟಿ ಕಂಬದ ಮುರುಘ ಮಠ ದಿಂದ ಉಳವಿ ಚನ್ನಬಸವೇಶ್ವರ ಸ್ವಾಮಿ ಗದ್ದೆಗೆಯ ತನಕ ಪಾದಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಒಂಟೆ ಕಂಬದ ಮುರುಘ ಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದ್ದಾರೆ.

ಅವರು ಹೊಳಲ್ಕೆರೆ ಪಟ್ಟಣದ ಒಂಟಿ ಕಂಬದ ಮಠದಲ್ಲಿ ಪಾದಯಾತ್ರೆ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಚಿತ್ರದುರ್ಗ ಮುರುಘ ಮಠದ ಶ್ರೀ ಬಸವಕುಮಾರ ಮಾಹಾಸ್ವಾಮಿಗಳ ಮಾರ್ಗದರ್ಶನಲ್ಲಿ ಪಾದಯಾತ್ರೆಗೆ ಬರದ ಸಿದ್ದತೆ ನಡೆಸಿದೆ. ಜತೆಗೆ ಪಾದಯಾತ್ರೆ ಹಾದು ಹೋಗುವ ಎಲ್ಲಾ ಜಿಲ್ಲೆಯಲ್ಲಿರುವ ಮಠಾಧೀಶರು, ಸಂಘ ಸಂಸ್ಥೆಗಳ, ಮಹಿಳಾ ಸಂಘಗಳ, ರಾಜಕಾರಣಿಗಳ ಬೆಂಬಲ ಪಡೆದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

೧೨ನೇ ಶತಮಾನದಿಂದಲೂ ಬಸವಾದಿ ಶರಣರ ವಚನಗಳ ಮಹತ್ವವನ್ನು ಸಮಾಜಕ್ಕೆ ಬಿತ್ತರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಧುನಿಕರಣ ಹೆಚ್ಚಾಗಿ ವಚನ ಸಾಹಿತ್ಯ ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿ. ಹಾಗಾಗಿ ವಚನ ಸಂದೇಶ, ಸಾಹಿತ್ಯದ ಮಹತ್ವ ಮತ್ತು ತತ್ವಗಳನ್ನು ಪಸರಿಸುವಂತೆ ಮಾಡಲು ಹೊಳಲ್ಕೆರೆ ಯಿಂದ ಉಳವಿ ಚನ್ನಬಸವಣ್ಣನವರ ಮಹಾಮನೆವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯನ್ನು ಜನವರಿ ೨೦ರಂದು ಹೊಳಲ್ಕೆರೆ ಯಿಂದ ಆರಂಭಿಸಿ ಚಿಕ್ಕಜಾಜೂರು, ಮಾಯಕೊಂಡ, ದಾವಣಗೆರೆ, ಹರಿಹರ, ರಾಣೇಬೆನ್ನೂರು, ಹಾವೇರಿ, ಧಾರವಾಡ, ದಾಂಡೇಲಿ, ಯಲ್ಲಾಪುರ ಮಾರ್ಗವಾಗಿ ಉಳಿವಿಯನ್ನು ತಲುಪಲು ಸುಮಾರು ೩೦೦ ಕಿಲೋಮೀಟರ್‌ಗಳ ೧೫ ದಿನಗಳ ಪಾದಯಾತ್ರೆಯನ್ನ ಕೈಗೊಳ್ಳಲಾಗುತ್ತದೆ. ಜೊತೆಗೆ ಬಸವ ಸತ್ವ ಸಂದೇಶಗಳನ್ನು ಕುರಿತು ದಾರಿಯಲ್ಲಿ ಬರುವ ಗ್ರಾಮಗಳಲ್ಲಿ ಅÀರಿವು ಜಾತ ಕಾರ್ಯಕ್ರಮಗಳು, ವಚನ ಸಂದೇಶದ ಉಪನ್ಯಾಸಗಳು ಸೇರಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಪೂತ್ಸಾಹದ ಜತೆ ಪಾದಯಾತ್ರ‍್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಶ್ರೀ ಪೂರ್ಣಾನಂದ ಸ್ವಾಮಿ, ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ, ವಕೀಲರಾದ ಎಸ್.ವೇದಮೂರ್ತಿ, ಲೋಕೇಶ್, ಡಿ.ಎಸ್.ಮಲ್ಲಿಕಾರ್ಜುನ್, ರೆಡ್ ಕ್ರಾಸ್ ಗಿರೀಶ್, ನಿವೃತ್ತ ತಹಸೀಲ್ದಾರ್ ಗಂಗಮ್ಮವೀರಭದ್ರಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ರೈತ ಸಂಘದ ಕಾರ್ಯದರ್ಶಿ ಅಜ್ಜಯ್, ಶಿವಮೂರ್ತಿ, ಮುಖ್ಯಶಿಕ್ಷಕಿ ಗೀತಮ್ಮ, ಭಾಗ್ಯಮ್ಮ, ಕೆ.ಎನ್.ಬಸವರಾಜು ಮತ್ತೀತರು ಇದ್ದರು….

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend