ಹೊಳಲ್ಕೆರೆ, ಪಟ್ಟಣದ ವಾಗ್ದೇವಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ನಡೆಯಿತು…!!!

ಹೊಳಲ್ಕೆರೆ, ಪಟ್ಟಣದ ವಾಗ್ದೇವಿ ವಿದ್ಯಾ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಇವರ ಸಹಯೋಗದೊಂದಿಗೆ ಇಂದು ಕನ್ನಡ ನುಡಿ ಹಬ್ಬ ಕಾರ್ಯಕ್ರಮ ನಡೆಯಿತು.ಹೊಳಲ್ಕೆರೆಯ ವೃತ್ತದಿಂದ ಪೂಜೆ ಸಲ್ಲಿಸಿ ಹೊರಟ ಮೆರವಣಿಗೆಯಲ್ಲಿ ವಾಗ್ದೇವಿ ಶಾಲಾ ಮಕ್ಕಳು ಪಾಲ್ಗೊಂಡು ವಿವಿಧ ಜಯಗೋಷಗಳನ್ನು ಕೂಗುತ್ತಿದ್ದರು ಮತ್ತು ಪಥಸಂಚಲನದಲ್ಲಿ ವಾಗ್ದೇವಿ ಕನ್ನಡ ರಥ ಹಾಗೂ ವಾಗ್ದೇವಿ ಶಾಲೆಯ ವಿವಿಧ ಕಲಾತಂಡಗಳು ನೃತ್ಯ ಪ್ರಕಾರಗಳು ಚಂಡೆ, ಕೋಲಾಟ, ಮರಗಾಲು, ಕಂಸಾಳೆ, ಡೊಳ್ಳು ,ತಮಟೆ, ವೀರಗಾಸೆ ಮತ್ತು ಸ್ಥಬ್ಧ ಚಿತ್ರಗಳು, ಇಮ್ಮಡಿ ಪುಲಕೇಶಿ, ಭುವನೇಶ್ವರಿ ದೇವಿ, ಮದಕರಿ ನಾಯಕನ ಕಲ್ಲಿನಕೋಟೆ, ಮಲ್ಲಗಂಬ ಹೀಗೆ ಹತ್ತು ಹಲವು ಸ್ತಬ್ಧ ಚಿತ್ರಗಳೊಂದಿಗೆ ಹೊಳಲ್ಕೆರೆಯ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಾ ವಾಗ್ದೇವಿ ಶಾಲಾ ಆವರಣ ತಲುಪಿತು. ವಾಗ್ದೇವಿ ಶಾಲೆಯ ಆವರಣದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಕನ್ನಡ ಶಿಕ್ಷಕರಿಗೂ ಗೌರವ ಸಮರ್ಪಣೆ.
ನೃತ್ಯ ವಾದ್ಯ ಗಾಯನ ಸಂಗೀತ ಬಹುಮಾನ ವಿತರಣೆ ಮಾಡಲಾಯಿತು.
ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.

ಶಾಸಕರಾದ ಎಂ.ಚಂದ್ರಪ್ಪ, ವಾಗ್ದೇವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಸ್ವಾಮಿ, ಆಡಳಿತ ಅಧಿಕಾರಿ ಶಿವರಾಂ , ಮತ್ತು ಪುರಸಭೆಯ ಅಧ್ಯಕ್ಷರಾದ ವಿಜಯ ಸಿಂಹ ಖಾಟ್ರೋತ್, ನಾಗರತ್ನ ವೇದಮೂರ್ತಿ, ಪ್ರಾಂಶುಪಾಲರಾದ ನಾಗರತ್ನಮ್ಮ ಎಸ್. ಮುಖ್ಯೋಪಾಧ್ಯಾಯರಾದ ಮಾಜಾನ್, ಜಯಶೀಲ, ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಸ್ವಾಮಿ, ತಾಲೂಕು ಕಸಪಾ ಅಧ್ಯಕ್ಷರಾದ ಶಿವಮೂರ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ಉಮೇಶ್, ಹಾಗೂ ಪತ್ರಕರ್ತರು, ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *