ಹೊಳಲ್ಕೆರೆ : ಕ್ಷೇತ್ರದಲ್ಲಿರುವ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ ಶಾಸಕ ಎಂ.ಚಂದ್ರಪ್ಪ, ಈಗಾ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದದ ಪಿತುರಿ ಗುಂಪಿನಲ್ಲಿದ್ದಾರೆ ಹಾಗಾಗಿ ಶಾಸಕ ಎಂ.ಚಂದ್ರಪ್ಪ ಇವರನ್ನು ಹೈಕಮಾಂಡ್ ಪಕ್ಷ ದಿಂದ ಉಚ್ಚಾಟಿಸಬೇಕೆಂದು ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಯಸಿಂಹ ಖಾಟ್ರೂತ್ ಪಕ್ಷಕ್ಕೆ ಮನವಿ ಮಾಡಿದರು.
ಅವರು ಪಟ್ಟಣದ ಸ್ನೇಹ ಕಂಪರ್ಟನಲ್ಲಿ ಮಂಗಳವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷದವನ್ನು ಕಟ್ಟಿದ್ದು ಬಿ.ಎಸ್.ಯಡಿಯೂರಪ್ಪ, ಅವರ ಕೃಪಾಶಿರ್ವಾದ ಪಡೆದು ರಾಜಕೀಯ ಸ್ಥಾನ ಮಾನ ಪಡೆದುಕೊಂಡಿದ್ದ ಶಾಸಕ ಎಂ.ಚಂದ್ರಪ್ಪ ಅವರ ವಿರುದ್ದದ ಪಿತೂರಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಎಂ.ಚಂದ್ರಪ್ಪಗೆ ಯಾವುದೇ ವರ್ಚಸಿಲ್ಲ. ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆ ಲಿಂಗಾಯ್ತಿರು ಬಿಜೆಪಿ ಸಿದ್ದಾಂತದ ಜತೆ ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇವರ ನಾಯಕತ್ವಕ್ಕೆ ಬೆಂಬಲಿಸಿ ಶಾಸಕ ಎಂ.ಚಂದ್ರಪ್ಪ ಇವರಿಗೆ ಮತನೀಡಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಶಾಸಕ ಎಂ.ಚಂದ್ರಪ್ಪ ನನ್ನಂತ ಲೀಡರ್ ಯಾರು ಇಲ್ಲ ಎಂದು ಕೊಂಡಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ನಿರ್ಲಷ್ಯಿಸಿದ್ದಾರೆ. ಹಿರಿಯ ಕಾರ್ಯಕರ್ತನ್ನು ಮೂಲೆಗುಂಪು ಮಾಡಲು ಹವಣಿಸುತ್ತಿದ್ದಾರೆ. ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಶಾಸಕರ ಚುನಾವಣೆಗೆ ಮಾತ್ರ ಎಲ್ಲರೂ ಬೆಂಬಲಿಸಬೇಕು. ಅವರು ಮಾತ್ರ ಇನ್ನೊಬ್ಬರ ಪರವಾಗಿ ಕೆಲಸ ಮಾಡುವುದಿಲ್ಲ. ಬೇರೆಯವನ್ನು ಸೂಲಿಸಿ ಜಿಲ್ಲೆಯಲ್ಲಿ ಚಕ್ರಾಧಿಪತಿಯಾಗಬೇಕೆಂದು ಬಯಕೆ ಅವರದ್ದು, ಪ್ರತಿ ಸಂಸತ್ ಚುನಾವಣೆಯಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿದ್ದಾರೆ. ಮಾಜಿ ಎಂ.ಪಿ.ಜನಾರ್ಥನಸ್ವಾಮಿ, ನಾರಾಯಾಣಸ್ವಾಮಿ, ಈಗೀನ ಗೋವಿಂದ ಕಾರಜೋಳ ವಿರುದ್ದ ಚುನಾವಣೆ ಮಾಡಿದರು. ಜನರು ಮಾತ್ರ ಪಕ್ಷಕ್ಕೆ ಮನ್ನಣೆ ನೀಡಿ ಮತ ನೀಡಿ ಗೆಲ್ಲಿಸಿದ್ದಾರೆ. ಸೋಲಿಸಲು ಪ್ರಯತ್ನಿಸುವ ಶಾಸಕ ಎಂ.ಚಂದ್ರಪ್ಪ ಅವರು ಗೆದ್ದ ಬಳಿಕ ನಾನೆ ಗೆಲ್ಲಿಸಿದೆ ಎಂದು ಬಿಂಬಿಸಿಕೊಳ್ಳುತ್ತಾರೆ. ಮಗನಿಗೆ ಟೀಕೆಟ್ ಮಿಸ್ ಆಗಿದ್ದರಿಂದ ಗೋವಿಂದ ಕಾರಜೋಳರನ್ನು ಸೊಲಿಸುವ ಪಣ ತೊಟ್ಟಿದ್ದರು. ಅದರೇ ಕ್ಷೇತ್ರ ಪ್ರಬುದ್ದ ಮತದಾರರು ಗೋವಿಂದ ಕಾರಜೋಳರನ್ನು ಅಯ್ಕೆ ಮಾಡಿದರು. ಅವರನ್ನು ಬೆಂಬಲಿಸಿದ ಕಾರ್ಯಕರ್ತರನ್ನು ಗುರಿಮಾಡಿಕೊಂಡು ಸೇಡು ತೀರಿಸಿಕೊಳ್ಳಲು ಶಾಸಕ ಎಂ.ಚಂದ್ರಪ್ಪ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಸಂಸದ ಗೋವಿಂದ ಕಾರಜೋಳ ಹೊಳಲ್ಕೆರೆ ಪುರಸಭೆ ಚುನಾವಣೆಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ಮಹಿಳಾ ಸದಸ್ಯರನ್ನು ಪುರಸಭೆಯ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿಸಿದ್ದಾರೆ. ಗೋವಿಂದ ಕಾರಜೋಳ ಬಂದ್ದಿದ್ದ ಹಿನ್ನಲೆಯಲ್ಲಿ ಎಲ್ಲಾ ಪಕ್ಷದವರು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ್ದಾರೆ. ಇದು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸಿಕ್ಕ ಗೆಲುವು, ಶಾಸಕರ ಕೈಲಿ ಸಾಧ್ಯವಾಗದ ಕೆಲಸವನ್ನು ಸಂಸದರು ಮಾಡಿದ್ದಾರೆ. ಇದು ಕಾರ್ಯಕರ್ತರಿಗೆ ಶಕ್ತಿ ನೀಡಿದಂತಾಗಿದೆ ಎಂದರು.
ಬಿಜೆಪಿ ಮುಖಂಡ ದೇವೇಂದ್ರನಾಯ್ಕ ಮಾತನಾಡಿ, ಶಾಸಕ ಎಂ.ಚಂದ್ರಪ್ಪ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಲ್ಲಿ ಸಾಕಷ್ಟು ಭ್ರಷ್ಟಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆ ಕಟ್ಟುವ, ಉಳೇತ್ತುವ, ಚಕ್ ಡ್ಯಾಂ ಕಟ್ಟುವ ಹೆಸರಲ್ಲಿ ಹಣದ ಲೋಟಿಯಾಗಿದೆ. ಇವರ ಕಾಲದಲ್ಲಿ ನಡೆದಿರುವ ಎಲ್ಲಾ ಕಾಮಗಾರಿ ತನಿಖೆ ನಡೆಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ತಾ.ಪಂ.ಮಾಜಿ ಅಧ್ಯಕ್ಷ ಧನಂಜಯ ನಾಯ್ಕ, ಕಲ್ಲನಾಗತಿಹಳ್ಳಿ ಸುರೇಶ್, ಗುಂಡೇರಿ ಚಂದ್ರಶೇಖರ್, ಆರ್.ಟಿ.ಒ.ಮೂರ್ತಿ, ಕುಡಿನೀರುಕಟ್ಟೆ ಪ್ರಭು, ವಿಶ್ವನಾಥ, ಆಗ್ರಹಾರ ಬಸವರಾಜ್, ಮುತ್ತಗದೂರು ಗ್ರಾ.ಪಂ.ಸದಸ್ಯ ರವಿಕುಮಾರ್, ತಾ.ಪಂ.ಸದಸ್ಯ ಎಮ್ಮಿಗನೂರು ಪ್ರಕಾಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030