ಸ್ಮಶಾನವನ್ನು ಬಿಡದೆ ಮರಳು ಆಗೇದ ಕಳ್ಳರು…!!!

ಸ್ಮಶಾನವನ್ನು ಬಿಡದೆ ಅಗೆದ ಮರಳು ಕಳ್ಳರು..

ಹೊಳಲ್ಕೆರೆ. ಮರಳನ್ನು ದುರಾಸೆಯಿಂದ ಹೆಕ್ಕಿ ತೆಗೆಯುವ ಮರಳು ದಂಧೆಕೋರರು ಭಾನುವಾರ ರಾತ್ರಿ ಪಟ್ಟಣದ ಹೊರ ವಲಯದಲ್ಲಿರುವ ಹಿಂದೂ ರುದ್ರ ‘ಭೂಮಿ’ಗೆ ಕನ್ನ ಹಾಕಿ ಮರಳನ್ನು ಅಗೆದಿದ್ದಾರೆ.

ಹಲವು ದಶಕಗಳಿಂದ ಹಿಂದೂಗಳು ಶವ ಹೂಳುತ್ತಾ ಬಂದಿರುವ ಪಟ್ಟಣದ ರುದ್ರಭೂಮಿಯನ್ನು ಭಾನುವಾರ ತಡ ರಾತ್ರಿ ಆಗೆದಿರುವ ಮರಳು ಕಳ್ಳರು, ಹೂತಿದ್ದ ಶವಗಳ ಕಳೇಬರಗಳನ್ನೆಲ್ಲಾ ಹೊರಗೆ ತೆಗೆದು ಹಾಕಿದ್ದಾರೆ.

‘ಪಟ್ಟಣದ ಗಣಪತಿ ದೇವಾಲಯದ ಮುಂಬಾಗದಿಂದ ಚೀರನಹಳ್ಳಿ ಮಾರ್ಗದಲ್ಲಿರುವ ರಸ್ತೆಯ ಹೀರೆಕೆರೆಯ ಪಕ್ಕದಲ್ಲಿ 5.20 ಗುಂಟೆ ವೀರಶೈವ ರುದ್ರಭೂಮಿ ಇದೆ. ಸಮುದಾಯದಲ್ಲಿ ಯಾರಾದರೂ ನಿಧನರಾದರೆ ಇಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಈ ಭಾಗದಲ್ಲಿ ಮರಳು ಸಿಗುವುದರಿಂದ ಮರಳುಗಳ್ಳರು ಜೆಸಿಬಿ ಮೂಲಕ ಮರಳು ತೆಗೆ- ಯುತ್ತಿದ್ದಾರೆ. ರುದ್ರಭೂಮಿಯಲ್ಲಿ ಮರಳು ತೆಗೆಯಲು ಹೂತಿದ್ದ ಶವಗಳನ್ನು ಹೊರತೆಗೆದು ಸಮಾಧಿಗಳನ್ನೆ ನಾಶ ಪಡಿಸಿ ಮರಳು ದಂಧೆ ನಡೆಸುತ್ತಿರುವುದು ಹೇಯ ಕೃತ್ಯ. ಈ ಬಗ್ಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಫಟನೆ ನಡೆದ ರುದ್ರಭೂಮಿಗೆ ಸೋಮವಾರ ಭೇಟಿ ನೀಡಿದ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಇಲ್ಲಿನ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ಕುಡಿಯುವ ನೀರು, ನೆರಳು, ಸ್ವಚ್ಛತೆ ಇಲ್ಲವಾಗಿದೆ. ಗಿಡ ಗಂಟೆಗಳು ದಟ್ಟವಾಗಿ ಬೆಳೆದು ನಿಂತಿದ್ದು, ಸ್ಮಶಾನದ ಜಾಗ ಕೂಡ ಒತ್ತುವರಿಯಾಗಿದೆ. ಸ್ಮಶಾನಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪುರ ಸಭೆ ಸದಸ್ಯರು ಗಮನಹರಿಸಿಲ್ಲ ಎಂದು ಸ್ಥಳೀಯರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ರೈತ ಸಂಘದ ಪಟ್ಟಣ ಶಾಖೆ ಅಧ್ಯಕ್ಷ ಎಸ್.ಸಿದ್ದರಾಮಪ್ಪ ಪ್ರಧಾನ ಖಜಾಂಚಿ ಎಸ್.ಶಿವಮೂರ್ತಿ, ಉಪಾ ಧ್ಯಕ್ಷ ಹಂಚಿನ ಮನೆ ಲೋಕಣ್ಣ ದುಕ್ಕಟ್ಟೆ ನಾಗರಾಜ್ ಸೇರಿ ಇತರರಿದ್ದರು.

ಬಾಕ್ಸ್..
‘ಮರಳು ದಂಧೆಕೋರರು ಸಮಾಧಿಯಲ್ಲಿನ ಹೆಣಗಳನ್ನೇ ತೆಗೆದು ಹಾಕಿ ಜೆಸಿಬಿ ಮೂಲಕ ಹಲವು ದಿನಗಳಿಂದ ಮರಳು ಸಂಗ್ರಹಿಸುತ್ತಿದ್ದಾರೆ.
ಈ ಜಾಗದಲ್ಲಿ ಅಂತ್ಯಸಂಸ್ಕಾ-

ರಕ್ಕೆ ಬಳಸಿದ ವಿಭೂತಿ ಘಟ್ಟಿಗಳು,

ಬಟ್ಟೆಗಳು, ತಲೆ ಬುರುಡೆ, ಅಸ್ತಿ- ಪಂಜರಗಳು ಚೆಲ್ಲಾಪಿಲ್ಲಿಯಾ- ಗಿ ಬಿದ್ದಿವೆ.‌ಮರಳು ದಂದೆಕೊರರ‌ ದುರಾಸೆಯಿಂದಾಗಿ‌ ಗುಂಡಿ ಇಂದ ಹೊರತೆಗೆದ ಶವವನ್ನು ಕಾಡು ಪ್ರಾಣಿಗಳು, ಪಕ್ಷಿಗಳು, ಎಳೆದಾಡಿ ಎಲ್ಲೆಂದರಲ್ಲಿ ಕಿತ್ತು ಬಿಸಾಕುತ್ತಿವೆ. ಇದರಿಂದಾಗಿ ಮೃತ ಮನುಷ್ಯನ ದೇಹಕ್ಕೂ ಬೆಲೆ ಇಲ್ಲದಂತಾಗಿದೆ. ಕಳ್ಳರು ರಾತ್ರಿ ವೇಳೆ ಮರಳು ತೆಗೆಯುತ್ತಿದ್ದು, ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ಜೆಸಿಬಿ, ಟ್ರಾಕ್ಟರ್ ಬಳಸಿ‌ ರಾಜಾರೋಷವಾಗಿ ಮರಳು ದಂದೆ ನಡೆಸುತ್ತಿದ್ದಾರೆ. ಇದೇ ರೀತಿ ಮರಳು ತೆಗೆದರೆ ಹೆಣಗಳನ್ನು ಹೂಳಲು ಸ್ಮಶಾನ ವಿರುವುದಿಲ್ಲ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಹೊಳಲ್ಕೆರೆ ‌ಪಟ್ಟಣದ ರುದ್ರ ಭೂಮಿಯಲ್ಲಿ ಜೆಸಿಬಿಯಿಂದ ಭೂಮಿ ಅಗೆದಿದ್ದು ಕಂದಕ ನಿರ್ಮಾಣವಾಗಿರುವುದನ್ನು ರೈತ ಮುಖಂಡರು ತೋರಿದಸಿದರು.


ಭೂಮಿ ಅಗೆದಿದ್ದರಿಂದ ಹೊರಗೆ ಬಿದ್ದಿರುವ ಶವದ ತಲೆಬುರುಡೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *