ಹೊಳಲ್ಕೆರೆ : ಪುರಸಭೆ ಅಧ್ಯಕ್ಷ ರಾಗಿ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷರಾಗಿ ಹೆಚ್.ಆರ್.ನಾಗರತ್ನ ವೇದಮೂರ್ತಿ ಶುಕ್ರವಾರ ಅವಿರೋದ ಆಯ್ಕೆಯಾದರು.
ಈ ಮೊದಲು ಇದ್ದ ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎಸ್ಸಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ವಿಜಯಸಿಂಹ ಖಾಟ್ರೋತ್ ಅವಿರೋದ ಅಯ್ಕೆ ಬಳಿಕ ಸಾಮಾನ್ಯ ಮಹಿಳೆ ಮೀಸಲಿನಿಂದ .ಎಚ್ .ಆರ್ ನಾಗರತ್ನ ವೇದಮೂರ್ತಿ ಇವರು ಅಯ್ಕೆಯಾಗಲು ಮಾಜಿ ಸಚಿವ ಹೆಚ್.ಆಂಜನೇಯನವರು ಸದಸ್ಯರ ನಡುವೆ ಸಾಮರಸ್ಯ ಜತೆ ಹೊಂದಾಣಿಕೆ ಮೂಲಕ ಅವಿರೋದ ಆಯ್ಕೆಗೆ ಶ್ರಮಿಸಿದರು.
ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ಬಿಜೆಪಿ ಪಕ್ಷೇತರರ ಮತ್ತು ಸಂಸದರ ಹಾಗೂ ಸರ್ವ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನವು ಅವಿರೋದ ಆಯ್ಕೆಯಾಗಿದೆ.
ಒಟ್ಟು16 ಸದಸ್ಯರ ಜತೆ ಎಂಪಿ. ಎಂಎಲ್ಎ ತಲಾ ಒಂದು ಮತಗಳು ಸೇರಿ 18 ಮತಗಳಾಗಿವೆ.
ಅಧ್ಯಕ್ಷ ಸ್ಥಾನಕ್ಕೆ ಈ ಮೊದಲು ಆಕಾಂಕ್ಷಿಯಾಗಿದ್ದ ವಸಂತರಾಜ್ ಹಾಗೂ ವಿಜಯ್ ಸಿಂಹ ಖಾಟ್ರೋತ್ ನಡುವೆ ಸಂಧಾನ ಏರ್ಪಡಿಸಿದ ಮಾಜಿ ಸಚಿವ ಹೆಚ್ ಆಂಜನೇಯ ನೇತೃತ್ವ ಕಾಂಗ್ರೇಸ್ ಪಕ್ಷದ ತಂಡ ಅಂತಿಮವಾಗಿ ವಿಜಯಸಿಂಹ ಖಾಟ್ರೋತ್ ಇವರನ್ನು ಅಧ್ಯಕ್ಷರನ್ನಾಗಿ ಅವಿರೋದವಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಏಕೈಕ ನಾಮಪತ್ರ ಸಲ್ಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.
ಜತೆಗೆ ಬಿಜೆಪಿ ಪಕ್ಷದ ಸದಸ್ಯರಾಗಿದ್ದ ಹೆಚ್.ಆರ್.ನಾಗರತ್ನ ಇವರನ್ನುಉಪಾದ್ಯರನ್ನಾಗಿ ಬೆಂಬಲಿಸುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ
ಸಂಸದ ಗೋವಿಂದ ಕಾರಜೋಳ ಸಮಷಕ್ಷಮದಲ್ಲಿ ಉಪಾಧ್ಯಕ್ಷರಾಗಿ ಹೆಚ್ . ಆರ್. ನಾಗರತ್ನ ಅವಿರೋಧವಾಗಿ ಉಪಾಧ್ಯಕ್ಷರಾಗಿ ಅಯ್ಕೆಯಾದರು.
ಪುರಸಭೆಯ ಸದಸ್ಯ ಕೆ.ಸಿ. ರಮೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಪುರಸಭೆಯ ಅಧಿಕಾರವನ್ನು ಕಿತ್ತುಕೊಂಡು ಸದಸ್ಯರನ್ನು ಶೋಷಣೆ ಮಾಡುತ್ತಿದ್ದ ಶಾಸಕ ಎಂ ಚಂದ್ರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮ್ಮ ಪಟ್ಟಣದ ಅಭಿವೃದ್ಧಿಗೆ ಸಂಸದರು ನಮ್ಮ ಜೊತೆ ನಿಂತು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು ಹಿರಿಯ ಸದಸ್ಯ ಬಿಎಸ್ ರುದ್ರಪ್ಪ ಮಾತನಾಡಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಸೂಕ್ತ ಅನುದಾನವಿಲ್ಲದೆ ಸದಸ್ಯರು ಯಾವುದೇ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಸದಸ್ಯರು ಕೇವಲ ಕಸ ಹೊಡಿಸಲು ಚರಂಡಿ ತಗಿಸಲು ನೀರು ಬಿಡಿಸಲು ಸೀಮಿತರಾಗಿದ್ದಾರೆ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ತಂದು ಪಟ್ಟಣದ ನಾಗರಿಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನೀಡಬೇಕು ಎಂದು ತಿಳಿಸಿದರು ಪುರಸಭೆಯ ಸದಸ್ಯರಾದ ಡಿಎಸ್ ವಿಜಯ್ ಪಿಆರ್ ಮಲ್ಲಿಕಾರ್ಜುನ ಸ್ವಾಮಿ ಸೈಯದ್ ಸಜಿಲ್ ಸೈಯದ್ ಮನ್ಸೂರ್ ವಸಂತ ರಾಜ್ ಸಬಿನ ಅಶ್ರಪ್, ಸವಿತಾ ನರಸಿಂಹ ಖಾಟ್ರೋತ್ , ಮಮತಾ ಜಯಸಿಂಹ ಖಾಟ್ರೋತ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030