ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಗಾಗಿ ಕಸರತ್ತು.
ಹೊಳಲ್ಕೆರೆ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆ ಕುರಿತು ಚುನಾವಣಾ ನಡೆಸಲು ಹೈಕೋರ್ಟ್ ಆದೇಶದಂತೆ ಚುನಾವಣೆ ಆಯೋಗ ನ.29 ರಂದು ದಿನಾಂಕ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರದ ಕುರ್ಚಿಗಾಗಿ ಸದಸ್ಯರುಗಳ ಕಸರತ್ತು ಜೋರಾಗಿದೆ.
ಪಟ್ಟಣದ ಪಂಚಾಯತಿ ಯಿಂದ ಪುರಸಭೆಯಾಗಿ ಮೇಲ್ದರ್ಜೆಗೊಂಡ ನಂತರ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಅಯ್ಕೆ ಇದೆ ಮೊದಲ ಭಾರಿ ನಡೆಯಲಿದೆ.
ಅಧ್ಯಕ್ಷ ಸ್ಥಾನ ಎಸ್ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಗೆ ಮಿಸಲು ನಿಗದಿಪಡಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಿಸಲು ಸದಸ್ಯರಾದ ವಿಜಯಸಿಂಹ ಖಟ್ರೋತ್, ಇತರೆ ಆಕಾಂಕ್ಷಿಗಳು, ಉಪಾಧ್ಯಕ್ಷ ಸ್ಥಾನಕ್ಕೆ ಮೊದಲನೇ ವಾರ್ಡ್ ಸದಸ್ಯರಾದ ಹೆಚ್.ಅರ್.ನಾಗರಾತ್ನವೇದಮೂರ್ತಿ, ಮತ್ತೀತರ ಸದಸ್ಯರು ಸ್ವರ್ಧೇಯಲ್ಲಿದ್ದಾರೆ.
ಹೊಳಲ್ಕೆರೆ ಪುರಸಭೆ ಅಧ್ಯಕ್ಷ ಸ್ಥಾನದ ಎಸ್ಸಿ ಮಿಸಲಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಮೀಸಲು ಸದಸ್ಯರಿಲ್ಲದ ಪರಿಣಾಮ ಪಕ್ಷೇತರರು ಲಗ್ಗೆ ಹಾಕಿ ಅಧ್ಯಕ್ಷ ರಾಗಲು ಎರಡು ಪಕ್ಷಗಳ ಬೆಂಬಲಕ್ಕೆ ಹಂಬಲಿಸುತ್ತಿದ್ದು, ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಎಂ.ಚಂದ್ರಪ್ಪ ಸಹಾ ಪಕ್ಷೇತರರ ಪರ ನಿಲ್ಲುವ ಸಾಧ್ಯತೆ ಇದೆ.
ಅಧ್ಯಕ್ಷ ಸ್ಥಾನದ ರೇಸ್ ನಲ್ಲಿರುವ ವಿಜಯ ಸಿಂಹ ಖಾಟ್ರೋತ್ ಇವರಿಗೆ ಮಮತಜಯಸಿಂಹ ಖಾಟ್ರೋತ್, ಸವಿತ್ ನರಸಿಂಹ ಖಾಟ್ರೋತ್ , ಕಾಂಗ್ರೆಸ್ , ಬಿಜೆಪಿ ಪಕ್ಷದ ಕೆಲ ಸದಸ್ಯರು ಸೇರಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಇನ್ನೂ ಹಲವು ಸದಸ್ಯರ ಬೆಂಬಲ ವ್ಯಕ್ತವಾಗಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭಲ ಅಕ್ಷಾಂಕ್ಷಿಯಾಗಿರುವ ಹೆಚ್.ಅರ್.ನಾಗರತ್ನವೇದಮೂರ್ತಿ ಇವರಿಗೆ ಖಟ್ರೋತ್ ಸದಸ್ಯರ ಜತೆ ಕಾಂಗ್ರೇಸ್ ,ಬಿಜೆಪಿ ಕೆಲ ಸದಸ್ಯರು ಹಾಗೂ ಸಂಸದ ಗೋವಿಂದ ಕಾರಜೂಳ ಬೆಂಬಲವಿದೆ ಎನ್ನಲಾಗಿದೆ.
ಪಟ್ಟಣ ಪಂಚಾಯತಿ ಯಿಂದ ಪುರಸಭೆಯಾಗಿ ಪರಿವರ್ತನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿ ಅಲಂಕರಿಸಲು ಅಕ್ಷಾಂಕ್ಷಿಗಳು ಬಾರಿ ಕಸರತ್ತು ನಡೆಸಿದ್ದು ನ.29 ರ ತನಕ ಕಾದು ನೋಡಬೇಕು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030