ಹೊಳಲ್ಕೆರೆ. ತಾಲೂಕಿನ ಚಿಕ್ಕಜಾಜೂರಿನಲ್ಲಿ ಸೋಮವಾರ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಇಲ್ಲಿನ ಸ್ನೇಹ ಬಳಗ ಕನ್ನಡ ಯುವಕ ಸಂಘ ಇವರಿಂದ 29 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಂಜಲಿ ಮೋಹನ್ ಪಿ ಎಸ್ ಮೂರ್ತಿ ಇವರು ಮತ್ತು ಸ್ನೇಹ ಬಳಗದ ಅಧ್ಯಕ್ಷರು ಕನ್ನಡ ಧ್ವಜವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸಿಬಂಧಿಗಳು ಅಧ್ಯಕ್ಷರು ಉಪಾಧ್ಯಕ್ಷರು ಪೊಲೀಸ್ ಇಲಾಖೆಯವರು ಸ್ನೇಹ ಬಳಗದ ಸದಸ್ಯರು ಪತ್ರಿಕೆ ವರದಿಗಾರರು ಇವರೆಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು ಸಂಘದ ಅಧ್ಯಕ್ಷರು ಮಾತನಾಡಿದರು ಕೇವಲ ಕನ್ನಡ ಅಭಿಮಾನ ನವಂಬರ್ ತಿಂಗಳಿಗೆ ಮೀಸಲಾಗಿರಬಾರದು ಪ್ರತಿದಿನವೂ ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕೆಲಸವಾಗಬೇಕಾಗಿದೆ. ಈ ಸಮಾರಂಭದಲ್ಲಿ ಪಿಎಸ್ಐ ನೇತ್ರಾವತಿ ಪೋಲಿಸ್ ಇಲಾಖೆ ಪೈಲ್ವಾನ್ ನಂದೀಶಣ್ಣ ಯೋಗೀಶಣ್ಣ, ಪುಟ್ಟಣ್ಣ, ಶ್ರೀಕಾಂತ್, ಪವನ್, ಮಲ್ಲೇಶ್, ಸುರೇಶ್, ಜಮೀರ್, ಗೋವಿಂದಪ್ಪ, ಸಂಘದ ಗೌರವಾಧ್ಯಕ್ಷರು ಬಾಬು ಮಾಸ್ಟರ್, ಅಧ್ಯಕ್ಷರು ಸೋಮಶೇಖರ್, ಜಯಪ್ಪ, ಹಾಲೇಶ್, ಮಾಂತೇಶ್, ಮಹೇಶ್, ಹೇಮಾದ್ರಿ, ಬಸವರಾಜ್, ಮಂಜುನಾಥ್, ಎಸ್ ರವಿ, ಆರ್ ಮಾರುತಿ, ಎಸ್ ಗಂಗಾಧರ್, ಪಿ ರಾಜು, ನಾಗರಾಜ್, ಪಿಟಿ ಓಂಕಾರಪ್ಪ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮುಖಂಡರುಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಿಕೆ ವರದಿಗಾರರಾದ ಕೆ ಶಿವರಾಜ್, ಜೆ ಮಂಜುನಾಥ್, ಊರಿನ ಗ್ರಾಮಸ್ಥರು ಎಲ್ಲ ಭಾಗವಹಿಸಿ ಅದ್ದೂರಿಯಾಗಿ ಮೆರವಣಿಗೆ ಸಮಾರಂಭವನ್ನು ಆಚರಿಸಿದರು. ಈ ಸಮಾರಂಭದಲ್ಲಿ ತಮಟೆ ರವಿ ಬೆಂಗಳೂರು 50 ಜನ ಕಲಾತಂಡ ಹಾಗೂ ವೀರಗಾಸೆ ಕಲಾತಂಡ ಭಾಗಿಯಾಗಿ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030