ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ : ಬಿ.ಎಲ್.ಓ. ಟಿ.ಪಿ.ಉಮೇಶ್
ಅಮೃತಾಪುರದಲ್ಲಿ ಮತಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಹೊಳಲ್ಕೆರೆ : ಹದಿನೆಂಟು ವರ್ಷ ತುಂಬಿದ ಎಲ್ಲ ವಯಸ್ಕರು ಕಾಲಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಮೊದಲು ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿರಿ ನಂತರ ಭಾರತ ಚುನಾವಣಾ ಆಯೋಗದಿಂದ ಓಟರ್ ಕಾರ್ಡ ಪಡೆದು ಮತ ಚಲಾಯಿಸಬೇಕು ಎಂದು ಅಮೃತಾಪುರ ಬೂತ್ ಮಟ್ಟದ ಅಧಿಕಾರಿ ಟಿ.ಪಿ.ಉಮೇಶ್ ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಅಮೃತಾಪುರ ಹಾಗು ಗೌರೀಪುರದಲ್ಲಿ ಮತಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅವರು ಗ್ರಾಮದ ಜನರಿಗೆ ಮತಪಟ್ಟಿಗೆ ಹೆಸರು ನೋಂದಾವಣೆ ಹಾಗು ಮತದಾನದ ಮಹತ್ವ ಕುರಿತು ತಿಳಿಸಿದರು. ಶನಿವಾರ ಹಾಗು ಭಾನುವಾರದ ಸರ್ಕಾರಿ ರಜಾ ದಿನವಾದರು ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗು ಜಿಲ್ಲಾಧಿಕಾರಿ ಚಿತ್ರದುರ್ಗ, ತಹಸೀಲ್ದಾರರು ಹೊಳಲ್ಕೆರೆ ಇವರ ಜ್ಞಾಪನದಂತೆ ಗ್ರಾಮದಲ್ಲಿ ಹದಿನೆಂಟು ವರ್ಷ ತುಂಬಿದ, ಮದುವೆಯಾಗಿ ಗ್ರಾಮಕ್ಕೆ ಬಂದಿರುವ ಅರ್ಹ ವಯಸ್ಕರ ದಾಖಲೆಗಳ ಪಡೆದು ಮತಪಟ್ಟಿಗೆ ಆನ್‌ಲೈನಲ್ಲಿ ಅರ್ಜಿ ಹಾಕುವುದು ಹಾಗು ಸಾವಿನಿಂದಾಗಿ ಮತ್ತು ಶಾಶ್ವತ ಸ್ಥಳಾಂತರ ಹೊಂದಿದ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದರೆ ದಾಖಲೆಗಳ ಮೂಲಕ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಮಾಡಿದರು. ಭಾರತ ಚುನಾವಣಾ ಆಯೋಗ ಈಗ ವರ್ಷಪೂರ್ತಿ ಮತಪಟ್ಟಿಗೆ ನೋಂದಾಯಿಸಲು ಅರ್ಹ ವಯಸ್ಕರಿಗೆ ಅವಕಾಶ ನೀಡಿದೆ ಜೊತೆಗೆ ವಿಶೇಷ ಪರಿಷ್ಕರಣೆ ದಿನಗಳನ್ನು ನಿಗದಿಗೊಳಿಸಿ ಮತಪಟ್ಟಿಗೆ ಎಲ್ಲ ವಯಸ್ಕರು ದಾಖಲಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ ದೇಶದ ಪ್ರಜಾಪ್ರಭುತ್ವ ಬಲಗೊಳಿಸಲು ಈ ಸದಾವಕಾಶವನ್ನು ಎಲ್ಲ ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವಿಶೇಷ ಪರಿಷ್ಕರಣೆಯ ಎರಡು ದಿನಗಳಲ್ಲಿ ಅಮೃತಾಪುರದಿ ಸಾವು ಸಂಭವಿಸಿದ ಐದು ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ತೆಗೆಯಲು ಮತ್ತು ತಲಾ ಇಬ್ಬರು ಮತದಾರರ ದಾಖಲೆ ತಿದ್ದುಪಡಿ ಹಾಗು ಹೊಸ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಯಿತು ಎಂದು ಬೂತ್ ಮಟ್ಟದ ಅಧಿಕಾರಿ ಹಾಗು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ತಿಳಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030