ವಕ್ಫ್ ಹೆಸರು ನಮೂದಿಸಿರುವುದನ್ನು ವಿರೋಧಿಸಿ ಪ್ರತಿಭಟನೆ.
ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದಲ್ಲಿ 5. ಎಕರೆ ಜಮೀನಿನ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಿಸಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ ಹಾಗೂ ತಾಲೂಕು ರೈತ ಸಂಘದ ಪದಾಧಿಕಾರಿಗಳು ಹೊಳಲ್ಕೆರೆ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಹಸೀಲ್ದಾರ್ ಬಿ.ಬಿ.ಫಾತಿಮಾ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯದ ಹಲವೆಡೆ ರೈತರ ಜಮೀನು, ಸ್ಮಶಾನಗಳು, ಗೋಮಾಳ ಹಾಗೂ ಸರಕಾರಿ ಭೂಮಿಗಳ ನಕಲಿ ದಾಖಲೆ ಸೃಷ್ಟಿಸಿ ವಕ್‌ಗೆ ಸೇರ್ಪಡೆ ಮಾಡಲಾಗು ತ್ತಿದೆ. ಇದು ರೈತರಿಗೆ, ಹಿಂದೂಗಳಿಗೆ ಮಾಡುತ್ತಿ ರುವ ಅನ್ಯಾಯ ಎಂದು ಆರೋಪಿಸಿದರು.
ನಂದನ ಹೊಸೂರು ಗ್ರಾಮದಲ್ಲಿ 1922ರಿಂದ ಸರಕಾರಿ ಖರಾಬು ಸ್ಮಶಾನ ಎಂದು ದಾಖಲೆ ಇದೆ. ಆದರೆ ಈ ದಾಖಲೆಯನ್ನು ಏಕಾಏಕಿ ತಿದ್ದಲಾಗಿದೆ. 1965ರಲ್ಲಿ ವಕ್ಫ್ ಕಾನೂನು ಬಂದಿದೆ. ಅದಕ್ಕೂ ಮುನ್ನವೇ ಇಲ್ಲಿನ ಸ್ಥಳವನ್ನು ಹಿಂದೂ ರುದ್ರಭೂಮಿಯಾಗಿ ಬಳಸುತ್ತಿದ್ದೇವೆ. ಸ್ವಂತ ಜಮೀನು ಇಲ್ಲದವರು ಇಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾರೆ. ಅಲ್ಲದೆ ಈ ಜಮೀನಿನ ಸ್ವಲ್ಪ ಭಾಗದಲ್ಲಿ ರೈತರು ಒಕ್ಕಲು ಮಾಡುವುದಕ್ಕಾಗಿ ಕಣಗಳನ್ನು ನಿರ್ಮಿಸಿಕೊಂಡಿದ್ದಾರೆ. ನಾಲೈದು ತಲೆಮಾರುಗಳಿಂದ ಇಲ್ಲಿ ದೇವಾಲಯಗಳನ್ನು ನಿರ್ಮಿಸಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಆದರೆ 2018ರಲ್ಲಿ ಪಹಣಿಯಲ್ಲಿ ಏಕಾಏಕಿ ವಕ್ಫ್ ಹೆಸರು ನಮೂದಿಸಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ ಎಂದರು.
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕೂಡಲೇ ವಕ್ಫ್ ಹೆಸರನ್ನು ತೆಗೆದು ಹಾಕಿ ಹಿಂದೆ ಇದ್ದಂತೆ ಸರಕಾರಿ ಖರಾಬು ಸ್ಮಶಾನ ಎಂದು. ಮರು ನೋಂದಣಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಕರಿಕರಿ ತಿಪ್ಪೇಸ್ವಾಮಿ, ದಕ್ಷಿಣ ಪ್ರಾಂತ್ಯದ ಕಾರ್ಯಕಾರಿ ಸಮಿತಿ ಸದಸ್ಯೆ ಅಮೃತ, ಹನುಮಂತಪ್ಪ, ಜ್ಞಾನೇಶ್ವರಪ್ಪ ಏಕಾಂತಪ್ಪ, ಸುರೇಶ್, ಅಭಿಷೇಕ್, ಗಿರೀಶ್, ಧ್ರುವ ಕುಮಾರ್, ರೈತ ಮುಖಂಡರಾದ ಅಜ್ಜಯ್ಯ, ಚಂದ್ರಶೇಖರ್, ಸಿದ್ರಾಮಪ್ಪ, ತಾಲ್ಲೂಕು ಬಿ ಜೆ ಪಿ ಘಟಕದ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ರಂಗಸ್ವಾಮಿ,ಪುರಸಭೆ ಸದಸ್ಯರಾದ ಅಶೋಕ್ ಅಶೋಕ್, ಭಾರತೀಯ ಕಿಸಾನ್ ಸಂಘ ರೈತ ಸಂಘದ ಪಧಾಧಿಕಾರಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030